ಚಿನ್ನ ದರ ಮತ್ತೆ ಏರಿಕೆ : ಇಂದಿನ ಚಿನ್ನದ ದರ ಎಷ್ಟಿದೆ..?

1 Min Read

ಬೆಂಗಳೂರು: ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. 22 ಕ್ಯಾರಟ್ ನ ಒಂದು ಗ್ರಾಂಗೆ 10 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರಟ್ ನ ಒಂದು ಗ್ರಾಂ 9,280 ರೂಪಾಯಿ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನ ಕೂಡ 11 ರೂಪಾಯಿ ಏರಿಕೆಯಾಗಿದ್ದು, ಈ ಮೂಲಕ 10,124 ರೂಪಾಯಿ ಆಗಿದೆ. 22 ಕ್ಯಾರಟ್ ಹತ್ತು ಗ್ರಾಂಗೆ 92,800 ರೂಪಾಯಿ ಆಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಚಿನ್ನ 1,01,240 ರೂಪಾಯಿ ಆಗಿದೆ.

 

ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ, ಬೆಂಗಳೂರು, ಚೆನ್ನೈ, ಕೇರಳ, ಹೈದ್ರಾಬಾದ್, ಕೊಲ್ಕತ್ತಾ, ಮುಂಬೈ ನಗರದಲ್ಲಿ 92,800 ರೂಪಾಯಿ ಒಂದು ಗ್ರಾಂ ಚಿನ್ನದ ಬೆಲೆಯಾಗಿದೆ. ದಿಲ್ಲಿಯಲ್ಲಿ 92,950 ರೂಪಾಯಿ ಇದೆ. ಇನ್ನು ವಿದೇಶಗಳಲ್ಲಿ ಚಿನ್ನದ ದರ ಹೀಗಿದೆ. ದುಬೈನಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನ 88,890 ರೂಪಾಯಿ ಇದೆ. ಅಮೆರಿಕಾದಲ್ಲಿ 91,110 ಇದೆ. ಸೌದಿಯಲ್ಲಿ 88,940 ರೂಪಾಯಿ ಇದೆ.

ಬೆಳ್ಳಿ ಬೆಲೆಯಲ್ಲಿ 0.10ರಷ್ಟು ಏರಿಕೆಯಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ 116 ರೂಪಾಯಿ ಇದೆ. ಹಾಗೇ 100 ಗ್ರಾಂ ಬೆಳ್ಳಿಯ ಬೆಲೆ 11,600 ರೂಪಾಯಿ ಆಗಿದೆ. ಚೆನ್ನೈ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ, ಲಕ್ನೋ, ಪುಣೆ ನಗರದಲ್ಲಿ ಬೆಳ್ಳಿಯ ಬೆಲೆ 11,600 ಇದ್ರೆ, ಕೇರಳ, ಭುವನೇಶ್ವರ, ಚೆನ್ನೈನಲ್ಲಿ 12,600 ರೂಪಾಯಿ ಇದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks