ವಿಜಯವಾಣಿ ಸ್ಥಾನಿಕ ಸಂಪಾದಕ ನವೀನ್‌ ಸೇರಿ 6 ಮಂದಿ ಗಣ್ಯರಿಗೆ “ಗೌರವ ಶ್ರೀ ರಕ್ಷೆ” ಪ್ರಶಸ್ತಿ

2 Min Read

ಸುದ್ದಿಒನ್, ದಾವಣಗೆರೆ, ಆ.14: ಇದೇ ಆಗಸ್ಟ್ 17 ರಂದು ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಹಾಲಕೆರೆ ಶ್ರೀ ಅನ್ನದಾನೀಶ್ವರ ಶಾಖಾ ಮಠದಲ್ಲಿ ಲಿಂ. ಶ್ರೀ ಗುರು ಅನ್ನದಾನ ಮಹಾಸ್ವಾಮಿಗಳವರ 49ನೇ ಪುಣ್ಯಾರಾಧನೆ , ಲಿಂ|| ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ ನಾಲ್ಕನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಅನ್ನದಾನೀಶ್ವರ ಮಠದ ಸಾರ್ವಜನಿಕ ಸೇವಾನ್ಯಾಸ್ ಟ್ರಸ್ಟಿನ ಸಂಘಟನಾ ಕಾರ್ಯದರ್ಶಿಗಳಾದ  ಎಸ್ ಓಂಕಾರಪ್ಪ ತಿಳಿಸಿದರು.

ಅವರು ಇಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಇದೇ ಸಂದರ್ಭದಲ್ಲಿ 501 ಮುತ್ತೈದೆ ಮಹಿಳೆಯರಿಗೆ ಉಡಿ ತುಂಬುವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಜಗದ್ಗುರು ಶ್ರೀ ಮ ನಿ ಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ನಾಡು ನುಡಿಗೆ ಸೇವೆ ಸಲ್ಲಿಸುತ್ತಿರುವ 6 ಜನ ಗಣ್ಯರಿಗೆ ಗೌರವ ಶ್ರೀರಕ್ಷೆ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಗಳ ಸಮಾರಂಭದ ನೇತೃತ್ವವನ್ನು ಆವರಗೊಳ್ಳ ಪುರವರ್ಗ ಮಠದ ಷ . ಬ್ರ. ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸುವರು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಕಾರ್ಯಕ್ರಮ ಉದ್ಘಾಟಿಸಲಿದ್ದು , ಸಚಿವ ಎಸ್. ಎಸ್.ಮಲ್ಲಿಕಾರ್ಜುನ ರವರು ಉಭಯ ಜಗದ್ಗುರುಗಳವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸುವರು ಎಂದು ನುಡಿದರು. ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ ಹೆಚ್. ಶಿವಯೋಗಿ ಸ್ವಾಮಿ. ಜಿಲ್ಲಾಧಿಕಾರಿ ಜಿ ಎಂ ಗಂಗಾಧರಸ್ವಾಮಿ ರವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಉಭಯ ಜಗದ್ಗುರುಗಳವರ ಮತ್ತು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಕುರಿತು ಮಹಾಂತೇಶ್ ಶಾಸ್ತೀ ಹಿರೇಮಠ ಕಲ್ಲೂರು ಇವರು ಉಪನ್ಯಾಸ ನೀಡಲಿದ್ದಾರೆಂದು ತಿಳಿಸಿ , ಪ್ರತಿ ವರ್ಷದಂತೆ ನಡೆಯುವ ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ ಯಶಸ್ವಿಗೊಳಿಸುವುದರ ಮೂಲಕ ಪ್ರಸಾದ ಸ್ವೀಕರಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
“ಇಂದಿನ ಸುದ್ದಿ ಸಂಸ್ಥಾಪಕ ಸಂಪಾದಕ ಪತ್ರಿಕೋದ್ಯಮ ಸಿರಿ ಲಿಂ|| ವೀರಪ್ಪ ಎಂ ಭಾವಿ,” ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಕ್ಕಿವರ್ತಕ ಎಸ್ ಜಿ ಉಳುವಯ್ಯ ಇವರಿಗೆ ವಾಣಿಜ್ಯ ಸಿರಿ , ಧೂಡಾ ಸದಸ್ಯೆ ಶ್ರೀಮತಿ ವಾಣಿ ಬಕ್ಕೇಶ್ ಇವರಿಗೆ ಕಾಯಕ ಸೌರಭ , ವಿಜಯವಾಣಿ ಸ್ಥಾನಿಕ ಸಂಪಾದಕ ಎಂ ಬಿ ನವೀನ್‌ರವರಿಗೆ ಪತ್ರಿಕೋದ್ಯಮ ಸಿರಿ, ಟ್ರಸ್ಟಿನ ಹಿರಿಯ ಸದಸ್ಯ ನಾಗೂರು ಆದಪ್ಪ ಹುಚನೂರು ಇವರಿಗೆ ಕಾಯಕ ಯೋಗಿ, ಎಸ್ ನಾಗರಾಜ ಮಳಗಿ ಯರಗಲ್ ಇವರಿಗೆ ಸಮಾಜ ಸೇವಾ ರತ್ನ ಮತ್ತು ಲಿಂಗೇಶ್ವರ ಫ್ಲವರ್ ಸ್ಟಾಲ್ ಮಾಲಿಕರಾದ ಎ ವಿ ರಮೇಶ್ ಇವರಿಗೆ ಕಾಯಕ ಜೀವಿ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದರು.

 

1986 ರಲ್ಲಿ ಶ್ರೀಮಠ ದಾವಣಗೆರೆಯಲ್ಲಿ ಸ್ವಂತ ಕಟ್ಟಡ ಹೊಂದಿದ್ದು ಅನೇಕ ಸಾರ್ವಜನಿಕ ಸಾಮಾಜಿಕ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸಮಾರಂಭವನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎನ್. ಅಡಿವೆಪ್ಪ , ಸಂಘಟನಾ ಕಾರ್ಯದರ್ಶಿಗಳಾದ ಎಸ್ ಜಿ ಉಳುವಯ್ಯ, ಸಹಕಾರ್ಯದರ್ಶಿ ನಾಗರಾಜ್ ಎಸ್ ಮಳಗಿ  ಯರಗಲ್, ಇಂದಿನಸುದ್ದಿ ಸಂಪಾದಕ ಅನಿಲ್ ಕುಮಾರ್ ವಿ ಭಾವಿ . ಉಪಸ್ಥಿತರಿದ್ದರು .

Share This Article
Leave a Comment

Leave a Reply

Your email address will not be published. Required fields are marked *