ಸುದ್ದಿಒನ್, ಹಿರಿಯೂರು, ಆಗಸ್ಟ್. 05 : ಅಖಿಲ ಭಾರತ ಯಾದವ ಮಹಾಸಭಾ ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಯಾದವ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಯಾದವ ಕಳಸ ಯಾತ್ರೆ ಆಗಸ್ಟ್ 07ರಂದು ಹಿರಿಯೂರು ನಗರ ಪ್ರವೇಶಿಸಲಿದೆ ಎಂದು ತಾಲೂಕು ಯಾದವ ಸಂಘದ ಅಧ್ಯಕ್ಷ ಆರ್. ರಂಗಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1962ರಲ್ಲಿ ಭಾರತ ಮತ್ತು ಚೀನಾ ನಡುವಿನ ರಜಾಂಗ್ -ಲಾ- ಕದನದಲ್ಲಿ ವೀರ ಮರಣ ಹೊಂದಿದ 120ಕ್ಕೂ ಹೆಚ್ಚು ಯಾದವ ಸಮಾಜದ ಹುತಾತ್ಮರಿಗೆ ಗೌರವ ಸಮರ್ಪಣೆಗಾಗಿ ಹಾಗೂ ಅಖಿಲ ಭಾರತೀಯ ಸೈನ್ಯದಲ್ಲಿ ಪ್ರತ್ಯೇಕ ಮೀಸಲಾತಿಗಾಗಿ ಹೋರಾಟ ನಡೆಸಲಿದೆ.
ಈ ನಿಟ್ಟಿನಲ್ಲಿ ಕಳಸ ಯಾತ್ರೆಯು ಆಗಸ್ಟ್ 7ರಂದು ಗುರುವಾರ ಹಿರಿಯೂರಿಗೆ ಆಗಮಿಸಲಿದ್ದು, ತಾಲೂಕಿನ ಜವನಗೊಂಡನಹಳ್ಳಿ ಶ್ರೀ ಕೃಷ್ಣ ದೇವಾಲಯ ಆವರಣಕ್ಕೆ ಆಗಮಿಸಲಿದೆ. ಬಳಿಕ ನಗರದ ರಂಜಿತಾ ಹೋಟೆಲ್ ನಿಂದ ಗಾಂಧಿ ವೃತ್ತ, ಟಿಬಿ ಸರ್ಕಲ್ ಮೂಲಕ ವೇದಾವತಿ ನಗರದ ಶ್ರೀಕೃಷ್ಣ ದೇವಾಲಯ ತಲುಪಿ ಅಲ್ಲಿಂದ ಚಿತ್ರದುರ್ಗದ ಶ್ರೀ ಕೃಷ್ಣ ಮಠಕ್ಕೆ ತಲುಪಲಿದೆ. ಈ ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದಾರೆ. ತಾಲ್ಲೂಕಿನ ಗೊಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆರ್. ರಂಗಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






