Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಪ್ಪು ಸಾವಿನ ಸುದ್ದಿ ತಿಳಿಯದೆ ಬದುಕುತ್ತಿದ್ದ ಅಣ್ಣಾವ್ರ ಸಹೋದರಿ ನಿಧನ..!

---Advertisement---

ಅಪ್ಪು ಅವರ ಕಳೆದ ಬಾರಿಯ ಹುಟ್ಟುಹಬ್ಬದಲ್ಲಿ ವಿಡಿಯೋ ಒಂದು ಎಲ್ಲರ ಮನಸ್ಸನ್ನು ಕದಲಿಸಿತ್ತು. ಅಪ್ಪು ನೀನು ನಂಗಿನ್ನು ಮಗುನೆ. ಈ ಅತ್ತೆನ ಒಮ್ಮೆ ಬಂದು ನೋಡ್ಕೊಂಡು ಹೋಗಪ್ಪ ಅಂತ ನಾಗಮ್ಮ ಅವರು ಹೇಳಿದ ವಿಡಿಯೋ ಅದಾಗಿತ್ತು. ಅಣ್ಣಾವ್ರ ತಲೆಮಾರಿನ ಕೊನೆಯ ಸದಸ್ಯೆ ಇವರು. ಈಗ 92 ವರ್ಷ ವಯಸ್ಸು ನಾಗಮ್ಮ ಅವರಿಗೆ. ಅಪ್ಪು ನಿಧನರಾದ ವಿಚಾರ ಕೊನೆಯವರೆಗೂ ಆ ಹಿರಿ ಜೀವದ ಕಿವಿಗೆ ಬಿದ್ದಿರಲಿಲ್ಲ. ಈಗ ಅವರು ಇಹಲೋಕ ತ್ಯಜಿಸಿದ್ದಾರೆ.

ಗಾಜನೂರಿನ ಮನೆಯಲ್ಲಿಯೇ ವಾಸವಿದ್ದ ನಾಗಮ್ಮ ಅವರು, ಮನೆಯಲ್ಲಿಯೇ ನಿಧನರಾಗಿದ್ದಾರೆ. ತುಂಬಾ ವಯಸ್ಸಾಗಿದ್ದ ಕಾರಣ ನಾಗಮ್ಮ ಅವರಿಗೆ ಅಪ್ಪು ನಿಧನದ ಸುದ್ದಿ ತಿಳಿದಿರಲಿಲ್ಲ. ಹೀಗಾಗಿ ಅಪ್ಪು ನೆಚ್ಚಿನ ನಾಗಮ್ಮತ್ತೆ ಅವರು, ಪ್ರತಿ ಹುಟ್ಟುಹಬ್ಬಕ್ಕೂ ಶುಭ ಕೋರುತ್ತಿದ್ದರು. ಕಂದ ಒಮ್ಮೆ ಬಂದು ಈ ಅತ್ತೆನಾ ನೋಡ್ಕೊಂಡು ಹೋಗಬಾರದಾ. ಎಷ್ಟು ದಿನಗಳಾಯ್ತು ಬಂದು ಅಂತ ಹೇಳ್ತಾ ಇದ್ದರು.

ರಾಜ್ ಕುಮಾರ್ ತಲೆಮಾರಿನ ಕೊನೆ ಸದಸ್ಯೆ ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅಣ್ಣಾವ್ರ ಕುಟುಂಬಸ್ಥರು ಅತ್ತೆಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಗಾಜನೂರಿಗೆ ಹೋದಾಗೆಲ್ಲಾ ಅತ್ತೆಯ ಜೊತೆಗೆ ಒಂದಷ್ಟು ಮಾತುಕತೆ ಮಾಡಿಯೇ ಮಕ್ಕಳು ಬರುತ್ತಿದ್ದರು. ತಂದೆ ಹುಟ್ಟಿಬೆಳೆದ ಮನೆಯ ನೆನಪು, ಅತ್ತೆಯ ಪ್ರೀತಿ ಎಲ್ಲವೂ ಇದ್ದ ಗಾಜನೂರಿಗೆ ಅಪ್ಪು ಅವರು ಬದುಕಿದ್ದಾಗ ಹೆಚ್ಚಾಗಿ ಹೋಗಿ ಬರ್ತಾ ಇದ್ದರು. ಶಿವಣ್ಣ, ಯುವ ರಾಜ್‍ಕುಮಾರ್, ವಿನಯ್ ರಾಜ್‍ಕುಮಾರ್ ಸೇರಿದಂತೆ ಮೊಮ್ಮಕ್ಕಳೆಲ್ಲಾ ಗಾಜನೂರಿಗೆ ಆಗಾಗ ಭೇಟಿ ಕೊಟ್ಟು, ನೆನಪುಗಳು ಬುತ್ತಿಯೊಂದಿಗೆ ಬರುತ್ತಿದ್ದರು. ಇಂದು ಆ ಕುಟುಂಬದ ಹಿರಿಯ ಜೀವ ಕೊನೆಯುಸಿರೆಳೆದಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment