ರೈತರು ನೆಮ್ಮದಿಯಾಗಿದ್ರೆ ದೇಶ ಸಂತೃಪ್ತವಾಗಿ ಇರುತ್ತದೆ. ಜನರ ಹೊಟ್ಟೆ ತುಂಬುತ್ತದೆ. ಹೀಗಾಗಿಯೇ ಸರ್ಕಾರ ರೈತರಿಗೆ ಅನುಕೂಲವಾಗುವಂತ ಯೋಜನೆಗಳನ್ನ ನೀಡುತ್ತಾ ಇರುತ್ತದೆ. ಸಹಾಯಧನಗಳನ್ನು ಕೊಡ್ತಾ ಇರುತ್ತದೆ. ಇದೊಇಗ ತೋಟಗಾರಿಕಾ ಇಲಾಖೆಯಿಂದ ತೆಂಗು ನಾಟಿನಮಾಡಿದವರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಸಹಾಯಧನದ ರೂಪದಲ್ಲಿ 56 ಸಾವಿರ ರೂಪಾಯಿ ಸಿಗಲಿದೆ. ಅದೇಗೆ..? ಅದಕ್ಕೆ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
2025ನೇ ಸಾಲಿನ ತೆಂಗು ಅಭಿವೃದ್ಧಿ ಮಂಡಳಿ ಯೋಜನೆಯಡಿ ಹೊಸದಾಗಿ ತೆಂಗು ನಾಟಿ ಮಾಡಿದವರಿಗೆ ಈ ಸಹಾಯಧನ ಸಿಗುತ್ತಿದೆ. ಹೊಸ ಭಾಗಗಳಲ್ಲಿ ತೆಂಗು ನಾಟಿ ಮಾಡಿದರೆ 28 ಸಾವಿರ ರೂಪಾಯಿ ಪ್ರತಿ ಹೆಕ್ಟೇರ್ ಗೆ ನೀಡಲಾಗುತ್ತದೆ. ವರ್ಷಕ್ಕೆ ಒಟ್ಟಾರೆ 56 ಸಾವಿರ ರೂಪಾಯಿ ಸಹಾಯಧನ ಸಿಗಲಿದೆ. ತೆಂಗು ಬೆಳೆಯನ್ನ ಹೊಸ ಪ್ರದೇಶದಲ್ಲಿ ನಾಟಿ ಮಾಡಿದರೆ ಮಾತ್ರ ಸಹಾಯಧನಕ್ಕೆ ಅರ್ಹರಾಗಿರುತ್ತಾರೆ.
ಇಲ್ಲಿ ಷರತ್ತುಗಳು ಅನ್ವಯವಾಗುತ್ತವೆ. ಬದುಗಳ ಅಂಚಿನಲ್ಲಿ ನಾಟಿ ಮಾಡಿದರೆ ಅದನ್ನು ಪರಿಗಣಿಸುವುದಿಲ್ಲ. ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, ರಾಷ್ಟ್ರೀಕೃತ ಬ್ಯಾಂಕ್ ನ ಪಾಸ್ ಪುಸ್ತಕದ ಜೆರಾಕ್ಸ್, ಅಧಿಕೃತ ಸಸ್ಯ ನಾಟು ಮಾಡುವುದರಿಂದ ಖರೀದಿಸಿದ ಸಸಿ ಖರೀದಿ ಬಿಲ್ಲು ಹಾಗೂ ಅರ್ಜಿಯೊಂದಿಗೆ ತಮ್ಮ ತಾಲೂಕು ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಅಥವಾ ತಮ್ಮ ಊರ ಬಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಯನ್ನು ಸಂಪರ್ಕ ಮಾಡುವುದಕ್ಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ. ಒಟ್ಟಾರೆ ಹೊಸದಾಗಿ ತೆಂಗು ನಾಟಿ ಮಾಡುವವರಿಗೆ ಸ್ವಲ್ಪ ಹಣದ ಸಹಾಯ ಈ ಮೂಲಕ ಆಗಲಿದೆ. ರೈತರು ಈಗಲೇ ತಮ್ಮ ಹತ್ತಿರದ ಕೃಷಿ ಇಲಾಖೆಗೆ ಸಂಪರ್ಕ ಮಾಡುವುದು ಒಳ್ಳೆಯದು.










