Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಲಿಂಗಾಯತ ಸಮಾಜ ಒಡೆಯುವ ಮಾತು : ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದ್ದೇನು..?

---Advertisement---

ಚಿತ್ರದುರ್ಗ: ರಾಜ್ಯದಲ್ಲಿ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಕೇಳಿಸ್ತಾ ಇದೆ. ಪಂಚಪೀಠಾಧೀಶರರ ನಿರ್ಣಯಕ್ಕೆ ಸ್ವಾಮೀಜಿಗಳು ಕಿಡಿಕಾರುತ್ತಾ ಇದ್ದಾರೆ. ಅದರಲ್ಲೂ ಲಿಂಗಾಯತ ಸ್ವಾಮೀಜಿಗಳಿಂದಾನೆ ಅಸಮಾಧಾನ ವ್ಯಕ್ತವಾಗ್ತಾ ಇದೆ. ಒಂದು ಕಡೆ ರಂಭಾಪುರಿ ಶ್ರೀಗಳು ಹೇಳ್ತಾರೆ ಸಮಾಜ ಒಡೆಯುವ ಯತ್ನ ಆಗ್ತಾ ಇದೆ ಅಂತ. ಈ ವಿಚಾರಕ್ಕೆ ವಚನಾನಂದ ಶ್ರೀಗಳು ಹೇಳ್ತಾರೆ ಪೀಠ ಉಗಮ ಆಗಿದ್ದೇಗೆ ಮತ್ತೆ ಅಂತ ಬಹಿರಂಗವಾಗಿಯೇ ತಿರುಗೇಟು ನೀಡಿದ್ದಾರೆ.

ವೀರಶೈವ ಶಿವಾಚಾರ್ಯರ ಶೃಂಗಸಭೆಯಲ್ಲಿ ಒಂದು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಶಿವಾಚಾರ್ಯರ ಶೃಂಗಸಭೆಯಲ್ಲಿ ಹನ್ನೆರಡನೆಯ ನಿರ್ಣಯವನ್ನ ಕೈಗೊಂಡರು. ಜಾತಿಗಣತಿ ವೇಳೆ ವೀರಶೈವ ಲಿಂಗಾಯತ ಅಂತ ಬರೆಸಬೇಕು. ಉಪಜಾತಿ ಯಾವುದೇ ಇದ್ದರು ವೀರಶೈವರು ಒಗ್ಗಟ್ಟಾಗಿರಬೇಕು ಎಂಬ ನಿರ್ಣಯವನ್ನು ಕೈಗೊಂಡಿದ್ದಾರೆ.

ದಾವಣಗೆರೆಯಲ್ಲಿ ನಡೆದ ಪಂಚಪೀಠಾಧೀಶರ ಶೃಂಗಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿದ್ದಾರೆ. ದಾವಣಗೆರೆಯಲ್ಲಿ ಮೂರು ದಿನಗಳ ಕಾಲ ಪಂಚಾಪೀಠಾಧೀಶರರ ಸಭೆ ನಡೆದಿದೆ. ಅಲ್ಲಿ ಅವರು ಆಡಿದ ಮಾತುಗಳು ಲಿಂಗಾಯತ ಸಮುದಾಯವನ್ನ ಒಡೆಯುವ ಮಾತುಗಳೇ ವಿನಃ ಕಟ್ಟುವ ಮಾತುಗಳಲ್ಲ. ಅಖಿಲ ಭಾರತ ಲಿಂಗಾಯತ ವೀರಶೈವ ಅಂತಾರೆ. ಆದರೆ ಅಲ್ಲೊಂದು ಬಸವಣ್ಣನ ಭಾವಚಿತ್ರವನ್ನಾದರೂ ಹಾಕಬೇಕಿತ್ತು. ಲಿಂಗಾಯತ ಸಮುದಾಯವನ್ನ ಕಟ್ಟುವ ಮಾತುಗಳನ್ನ ಆಡಿ, ಅದನ್ನ ಬಿಟ್ಟು ಒಡೆಯುವ ಮಾತುಗಳನ್ನ ಆಡಬೇಡಿ. ಶೃಂಗಸಭೆಯಲ್ಲಿ ಬಸವಣ್ಣನವರ ಭಾವಚಿತ್ರವನ್ನು ಹಾಕಿರಲಿಲ್ಲ ಬಸವಣ್ಣನವರ ತತ್ವಗಳನ್ನು ಪಂಚಪೀಠಾಧೀಸರು ಹೇಳ್ತಿಲ್ಲ. ಬಸವಣ್ಣ ಭಕ್ತ ಎಂದು ಪಂಚಪೀಠಾಧೀಶರು ಹೇಳುತ್ತಿದ್ದಾರೆ. ಬದಲಾಗಿ ಏನು ಸಂಘಟನೆ ಮಾಡಲು ಹೊರಟಿದ್ದಾರೆ ಒಗ್ಗಡೂಸುವ ಕೆಲಸ ಆಗ್ತಿಲ್ಲ ಅಂತ ಪೀಠಾಧೀಶರರ ಮೇಲೆ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಗರಂ ಆಗಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment