Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಒಂದು ಕಡೆ ಪ್ರಥಮ್.. ಮತ್ತೊಂದು ಕಡೆ ರಮ್ಯಾ : ಏನಿದು ದರ್ಶನ್ ಫ್ಯಾನ್ಸ್ ವಿರುದ್ಧ ಕೆಂಡಾಮಂಡಲ..?

---Advertisement---

ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್ ಆಗಾಗ ದರ್ಶನ್ ಫ್ಯಾನ್ಸ್ ಹಲ್ಲೆ ಮಾಡಿದ್ರು, ಬೆದರಿಕೆ ಹಾಕಿದ್ರು ಅಂತ ಹೇಳ್ತಾನೇ ಇರ್ತಾರೆ. ಇತ್ತೀಚೆಗಷ್ಟೇ ದರ್ಶನ್ ಫ್ಯಾನ್ಸ್ ವಿರುದ್ಧ ಸ್ಟೇ ಕೂಡ ತಂದಿದ್ರು. ಇದೀಗ ನಿನ್ನೆಯಿಂದಾನೂ ದರ್ಶನ್ ಫ್ಯಾನ್ಸ್ ಹಲ್ಲೆ‌ಮಾಡಿದ್ರು. ಅಲ್ಲಿಯೇ ಇದ್ದ ರಕ್ಷಕ್ ಬುಲೆಟ್ ಸಹಾಯಕ್ಕೆ ಬರಲಿಲ್ಲ ಅಂತೆಲ್ಲಾ ಹೇಳಿರುವ ಆಡಿಯೋ ವೈರಲ್ ಆಗಿದೆ. ಇದರ ನಡುವೆ ದರ್ಶನ್ ಅಭಿಮಾನಿಗಳಿಗೆ ಮೋಹಕ ತಾರೆ ರಮ್ಯಾ ಕೂಡ ಖಡಕ್ ಆಗಿಯೇ, ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಅಶ್ಲೀಲ ಮೆಸೇಜ್ ಗಳ ಪೋಸ್ಟ್ ಹಂಚಿಕೊಂಡಿರುವ ರಮ್ಯಾ, ರೇಣುಕಾಸ್ವಾಮಿ ಮೆಸೇಜ್ ಗೂ, ಡಿ ಬಾಸ್ ಫ್ಯಾನ್ಸ್ ಗೂ ವ್ಯತ್ಯಾಸವೇನು ಇಲ್ಲ. ಡಿ ಫ್ಯಾನ್ಸ್ ಗಳು ಸ್ತ್ರೀ ದ್ವೇಷದ ಮನಸ್ಥಿತಿ ಹೊಂದಿದ್ದಾರೆ. ಟ್ರೋಲ್ ಗಳಿಂದ ಮಹಿಳೆಯರು, ಯುವತಿಯರಿಗೆ ಕಿರುಕುಳ ಶುರುವಾಗಿದೆ ಅಂತ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಕಿಡಿಕಾರಿದ್ದಾರೆ.

ಇದೇ ವಿಚಾರದಲ್ಲಿ ರಮ್ಯಾ, ದರ್ಶನ್ ಫ್ಯಾನ್ಸ್ ನೇರವಾಗಿಯೇ ಸವಾಲೊಂದನ್ನ ಹಾಕಿದ್ದಾರೆ. ಎಲ್ಲಾ ಡಿ ಬಾಸ್ ಅಭಿಮಾನಿಗಳಿಗೆ ನನ್ನ ಇನ್ಸ್ಟಾಗ್ರಾಮ್ ಗೆ ಸ್ವಾಗತ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಏಕೆ ಬೇಕು ಎಂಬುದಕ್ಕೆ ನಿಮ್ಮ ಕಮೆಂಟ್ ಗಳೇ ಸಾಕ್ಷಿ ಎಂದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ದರ್ಶನ್ ಅಭಿಮಾನಿಗಳಿಗೆ ಸವಾಲನ್ನ ಹಾಕಿದ್ದಾರೆ. ಈ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಹಾಗೂ ರಮ್ಯಾ ನಡುವೆ ವಾರ್ ಜೋರಾಗಿದೆ. ಆ ಕಡೆ ಒಳ್ಳೆ ಹುಡುಗ ಪ್ರಥಮ್ ಕೂಡ ದರ್ಶನ್ ಫ್ಯಾನ್ ಮೇಲೆ ಗರಂ ಆಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...