ಮಳೆಗಾಲದಲ್ಲಿ ಒಂದಷ್ಟು ರೋಗಗಳು ಹೆಚ್ಚಾಗುತ್ತವೆ. ನಿಂತ ನೀರಿನಿಂದ ವೈರಸ್ ಗಳು ಉದ್ಭವವಾಗುತ್ತವೆ. ಅದರ ಪರಿಣಾಮವೇ ದೇಹದಲ್ಲಿ ಹಲವು ಕಾಯಿಲೆಗಳು ಕಾಣಿಸಿಕೊಳ್ಳುವುದು. ಅದರಲ್ಲಿ ಮಲೇರಿಯಾ ಕೂಡ ಒಂದು. ಸೋಂಕಿತ ಸೊಳ್ಳೆಗಳು ಕಚ್ಚುವುದರಿಂದ ಈ ರೋಗ ಬರುತ್ತದೆ. ಈ ಮಲೇರಿಯಾಗೆ ಇಷ್ಟು ದಿನ ಯಾವುದೇ ರೀತಿಯ ಔಷಧ ಇರಲಿಲ್ಲ. ಇದೀಗ ಔಷಧವನ್ನ ಕಂಡು ಹಿಡಿದಿದ್ದಾರೆ.
ಈ ಮೂಲಕ ಭಾರತ ಮಹತ್ವದ ಹೆಜ್ಜೆಯನ್ನ ಇಟ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದೇಶದ ಮೊದಲ ಮಲೇರಿಯಾ ಲಸಿಕೆ ಆಡ್ ಪಾಲ್ಸಿವಾಕ್ಸ್ ಅನ್ನು ಕಂಡು ಹಿಡಿದಿದೆ. ಈ ಲಸಿಕೆ ಮಲೇರಿಯಾ ಸೋಂಕುಗಳಲ್ಲಿ ಅತ್ಯಂತ ಮಾರಕ ಎಂದು ಎಂದು ಪರಿಗಣಿಸಲಾಗಿರುವ ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ ಫಾಲ್ಸಿಪ್ಯಾರಮ್ ಅನ್ನು ನಾಶಪಡಿಸುವ ಮೂಲಕ ಮಲೇರಿಯಾ ಬರದಂತೆ ತಡೆಯುತ್ತದೆ. ಹಾಗಾದ್ಋ ಈ ಲಸಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.
ಈ ಲಸಿಕೆ ಮಲೇರಿಯಾ ಸೋಂಕು ನಮ್ಮ ದೇಹವನ್ನು ಪ್ರವೇಶಿಸುವುದನ್ನು ತಡೆಯುವ ಲಸಿಕೆಯಾಗಿದೆ. ಹೆಚ್ಚುವರಿಯಾಗಿ, ಈ ಲಸಿಕೆಯು ನಮ ದೇಹವನ್ನು ರಕ್ಷಿಸುವುದಲ್ಲದೆ ಮಲೇರಿಯಾ ಹರಡುವುದನ್ನು ತಪ್ಪಿಸುತ್ತದೆ. ಅಷ್ಟೇ ಅಲ್ಲ ಮಲೇರಿಯಾ ಮತ್ತೆ ದೇಹವನ್ನು ಪ್ರವೇಶಿಸುವುದನ್ನು ತಡೆಯುವ ಒಂದು ರೀತಿಯ ರೋಗನಿರೋಧಕ ಶಕ್ತಿಯನ್ನು ದೇಹದಲ್ಲಿ ಸೃಷ್ಟಿಸುವಂತೆ ಈ ಲಸಿಕೆ ಮಾಡುತ್ತದೆ. ಈ ಲಸಿಕೆಯನ್ನು ಭಾರತದಲ್ಲಿಯೇ ಸಂಪೂರ್ಣವಾಗಿ ತಯಾರಿಸಲಾಗಿದೆ. ಹೀಗಾಗಿ ಮೇಕ್ ಇನ್ ಇಂಡಿಯಾ ಉಪಕ್ರಮದ ಒಂದು ಭಾಗವಾಗಿದೆ. ಇದರರ್ಥ ಭಾರತವು ಇನ್ನು ಮುಂದೆ ಮಲೇರಿಯಾ ಲಸಿಕೆಗಾಗಿ ವಿದೇಶಗಳನ್ನು ಅವಲಂಬಿಸುವುದಿಲ್ಲ. ಬದಲಾಗಿ ನಮ್ಮ ದೇಶದಲ್ಲಿಯೇ ಅದನ್ನು ತಯಾರಿಸಿ ಎಷ್ಟು ಪ್ರಮಾಣದಲ್ಲಿ ಬೇಕಾದರೂ ಅದು ಲಭ್ಯವಿರುವಂತೆ ನೋಡಿಕೊಳ್ಳುತ್ತದೆ.










