Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಲೆಕ್ಕಪತ್ರವನ್ನು ಬಹಿರಂಗಪಡಿಸುವ ಪದ್ಧತಿ ವಿಶ್ವ ಹಿಂದೂ ಪರಿಷತ್‍ನಲ್ಲಿಲ್ಲ : ಪಂಪ್‌ವೆಲ್‌

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 25 : ಹಿಂದೂ ಮಹಾಗಣಪತಿ ಉತ್ಸವ ಮುಗಿದ ನಂತರ ನಡೆಯುವ ಸಭೆಯಲ್ಲಿ ಸಮಿತಿಯವರು ಲೆಕ್ಕಪತ್ರವನ್ನು ನೀಡುತ್ತಾರೆ. ಲೆಕ್ಕಪತ್ರವನ್ನು ಬಹಿರಂಗಪಡಿಸುವ ಪದ್ಧತಿ ವಿಶ್ವ ಹಿಂದೂ ಪರಿಷತ್‍ನಲ್ಲಿ ಇಲ್ಲ. ಯಾರಿಗಾದರೂ ಲೆಕ್ಕಪತ್ರದ ಬಗ್ಗೆ ಮಾಹಿತಿ ಬೇಕಾದರೆ ವಿಶ್ವ ಹಿಂದೂ ಪರಿಷತ್ತನ್ನು ಸಂಪರ್ಕಿಸಿದರೆ ಅವರಿಗೆ ವೈಯಕ್ತಿಕವಾಗಿ ಮಾಹಿತಿ ನೀಡಲಿದ್ದೇವೆ ಎಂದು ವಿಶ್ವ ಹಿಂದೂಪರಿಷತ್‍ನ ಪ್ರಾಂತ್ಯ ಕಾರ್ಯದರ್ಶಿಯಾದ ಪಂಪ್‌ವೆಲ್‌ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉತ್ಸವ ಮುಗಿದ ನಂತರ ಸರಿಯಾದ ಲೆಕ್ಕ ಪತ್ರ ನೀಡುವುದಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ. ಸಾರ್ವಜನಿಕವಾಗಿ ಲೆಕ್ಕ ಪತ್ರ ನೀಡಿ ಎಂಬ ಪ್ರಶ್ನೆಗೆ ಉತ್ತರಿಸಿ ವಿಶ್ವ ಹಿಂದೂ ಪರಿಷತ್‍ನಲ್ಲಿ ಈ ಪದ್ಧತಿ ಇಲ್ಲ.. ಇದರ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿ. ನಮ್ಮ ಸಮಿತಿಯ ಮೇಲೆ ಹಿಂದಿನ ವರ್ಷ ಆರೋಪಗಳು ಬಂದಿರುವುದು ನಿಜ.  ಕಳೆದ ಬಾರಿಯ ಲೆಕ್ಕಪತ್ರ ಮಂಡನೆ ಮಾಡಿದಾಗ ನಾನು ಇದ್ದೇ. ಅದರ ಬಗ್ಗೆ ಪರಿಶೀಲನೆ ಸಹ ಮಾಡಿದ್ದೇವೆ. ಯಾವ ಅವ್ಯವಹಾರ ಕಂಡುಬಂದಿಲ್ಲ.ಅವರ ಆರೋಪಗಳು ಕೇವಲ ಸುಳ್ಳು ಅಷ್ಟೇ… ಆರೋಪ ಮಾಡುವವರು ವೈಯಕ್ತಿಕವಾಗಿ ಬಂದು ಸಮಸ್ಯೆ ಹೇಳಿಕೊಂಡರೆ ಲೆಕ್ಕ ಕೊಡುತ್ತೇವೆ. ಸಾರ್ವಜನಿಕವಾಗಿ ಎಲ್ಲಿಯೂ ನಮ್ಮ ಹಣಕಾಸಿನ ಬಗ್ಗೆ ಬಹಿರಂಗ ಮಾಡುವ ಪದ್ಧತಿ ಇಲ್ಲ. ಹಣಕಾಸಿನ ವಿಚಾರವಾಗಿ ಬಹಿರಂಗ ಪಡಿಸುವ ಸಾರ್ವಜನಿಕರ ಸಲಹೆಯನ್ನು ನಮ್ಮ ಸಮಿತಿಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ನಮ್ಮದು ವ್ಯಕ್ತಿ ಪ್ರಧಾನವಾದ ಸಂಘಟನೆ ಅಲ್ಲ.ವ್ಯಕ್ತಿ ಪ್ರಧಾನವಾದ ಕಾರ್ಯಕ್ರಮವಲ್ಲ.ವ್ಯಕ್ತಿ ಪ್ರಧಾನವಾಗಿ ಈ ಗಣೇಶ ಉತ್ಸವ ನಡೆಯಲ್ಲ.ನಾನು ಭಿನ್ನರಲ್ಲಿ ವೈಯಕ್ತಿಕವಾಗಿ  ಮಾತನಾಡಿದ್ದೇನೆ.ಯಾರನ್ನು ಕೈ ಬಿಡುವಂತಿಲ್ಲ. ಎಲ್ಲರನ್ನೂ(ಭಿನ್ನರನ್ನು) ಸೇರಿಸಿಕೊಂಡು ಕಾರ್ಯಕ್ರಮ ಮಾಡುತ್ತೇವೆ ಹಾಗೂ ಕಾರ್ಯಕ್ರಮವನ್ನು ಯಶಸ್ವಿಯಾಗಿ  ಮಾಡುತ್ತೇವೆ ಎಂದರು.
ಗೋಷ್ಟಿಯಲ್ಲಿ ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾಧ್ಯಕ್ಷರಾದ ಷಡಾಕ್ಷರಯ್ಯ, ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷರಾದ ಡಾ.ಮಂಜುನಾಥ್, ವಿಭಾಗ ಕಾರ್ಯದರ್ಶಿ ಚಂದ್ರಶೇಖರ್ ಚಿತ್ರದುರ್ಗ ಕಾರ್ಯದರ್ಶಿ ಕೇಶವ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...