Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದಲ್ಲಿ ಯಾವುದೇ ಆಭಿವೃದ್ದಿಯಾಗುತ್ತಿಲ್ಲ, ಓಬಿಸಿ ಜನಾಂಗಕ್ಕೆ ಅನ್ಯಾಯ ಮಾಡುತ್ತಿದೆ : ಸುಧಾಕರ್ ರೆಡ್ಡಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 19 : ಕೇಂದ್ರ ಸರ್ಕಾರ 2026ರಲ್ಲಿ ನಡೆಸಲಿರುವ ಜನ-ಜಾತಿಗಣತಿಯಲ್ಲಿ ಎಲ್ಲರು ಸಹಾ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ತಮ್ಮ ಮಾಹಿತಿಯನ್ನು ನೀಡಿ ಮುಂದಿನ ದಿನದಲ್ಲಿ ಸರ್ಕಾರದಿಂದ ಸಿಗುವಂತ ವಿವಿಧ ರೀತಿಯ ಸೌಲಭ್ಯಗಳನ್ನು ಮುಂದಾಗುವಂತೆ ಸಹಾ ಉಸ್ತುವಾರಿ ಸುಧಾಕರ್ ರೆಡ್ಡಿ ಕರೆ ನೀಡಿದರು.

ಕರ್ನಾಟಕ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಚಿತ್ರದುರ್ಗದವತಿಯಿಂದ ಕೇಂದ್ರ ಸರ್ಕಾರ ಘೋಷಿಸಿರುವ ಜಾತಿ ಜನಗಣತಿ ಕಾರ್ಯದ ಬಗ್ಗೆ  ಹಿಂದುಳಿದ ವರ್ಗಗಳ ಜನಜಾಗೃತಿ ಮೂಡಿಸುವ ಕುರಿತು ತಿರುಮಲ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಹಿಂದುಳಿದ ವರ್ಗಗಳ ವಿಭಾಗ ಮಟ್ಟದ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಠ ಸರ್ಕಾರವಾಗಿದೆ ಜನತೆಯಿಂದ ರಕ್ತವನ್ನು ಹಿರುವುದರ ಮೂಲಕ ತೆರಿಗೆಯ ರೂಪದಲ್ಲಿ ಹಣವನ್ನು ವಸೂಲಿ ಮಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳ ಸೇರಿ ಜನರೊಂದಿಗೆ ಜೂಜಾಟವನ್ನು ಆಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಆಭೀವೃದ್ದಿಯಾಗುತ್ತಿಲ್ಲ, ಓಬಿಸಿ ಜನಾಂಗಕ್ಕೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ಏನು ಬೇಕಾದರೂ ಸಹಾ ಮಾಡುವಂತ ಕಾರ್ಯವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಭ್ರಷ್ಠಾಚಾರದಿಂದ ಮಾರುಕಟ್ಟೆಯಲ್ಲಿ ದರಗಳು ಏರಿಕೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಜನ ಹಿತಕ್ಕಿಂತ ತಮ್ಮ ಅಧಿಕಾರದ ಹಿತ ಹೆಚ್ಚಾಗಿದೆ. ಜನತೆ ತೊಂದರೆ ಪಟ್ಟವರು ಸಹಾ ತಾವು ಮಾತ್ರ ಚನ್ನಾಗಿ ಇರಬೇಕೆಂದು ಬಯಸುತ್ತಾರೆ. ತಮ್ಮ ಪಕ್ಷದ ಶಾಸಕರೇ ಸರ್ಕಾರದ ಬಗ್ಗೆ ತೆಗಳುತ್ತಿದ್ದರು ಸಹಾ ಮುಖ್ಯಮಂತ್ರಿಗಳು ಕಾರೇ ಎನ್ನುತ್ತಿಲ್ಲ, ತಮ್ಮ ಪಂಚ ಗ್ಯಾರೆಂಟಿಗಾಗಿ ತೆರಿಗೆಯನ್ನು ಹೆಚ್ಚಳ ಮಾಡಿ ಜನತೆಯನ್ನು ಲೂಟಿ ಮಾಡುತ್ತಿದೆ ಎಂದ ಅವರು, ಪ್ರಪಂಚದಲ್ಲಿ ಬಹುತೇಕ ರಾಷ್ಟ್ರಗಳು ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೀದಿಯರವನ್ನು ಒಪ್ಪಿಕೊಂಡಿದ್ದಾರೆ. ಕೇಂದ್ರದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಎನ್.ಡಿ,ಎ ಸರ್ಕಾರದಿಂದ ಮಾತ್ರ ಓಬಿಸಿ ಜನಾಂಗಕ್ಕೆ ನ್ಯಾಯ ಸಿಗಲು ಸಾಧ್ಯವಿದೆ. ಮೋದಿಯವರು ಎಲ್ಲಾ ಜನಾಂಗವನ್ನು ಸಹಾ ಜೊತೆಯಲ್ಲಿ ತೆಗೆದುಕೊಂಡು ಹೋಗುವುದರ ಮೂಲಕ ಸರ್ವರನ್ನು ಬಾಳಲು ಅವಕಾಶವನ್ನು ಕಲ್ಪಿಸಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯರುಗಳಾದ ಕೇಶವ ಪ್ರಸಾದ್ ಮಾತನಾಡಿ, ಜಾತಿ ಗಣತಿಯನ್ನು ಪ್ರತಿ 10 ವರ್ಷಕ್ಕೊಮ್ಮೆ ನಡೆಸಬೇಕು ಎಂದಿದ್ದರು ಸಹಾ ಹಿಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರ ಸರಿಯಾದ ರೀತಿಯಲ್ಲಿ ಜಾತಿಗಣತಿಯನ್ನು ನಡೆಸದೇ ಇದರ ಬಗ್ಗೆ ನಿರಾಸಕ್ತಿಯನ್ನು ತೋರಿತ್ತು, ನೆಹರು ಜಾತಿಗಣತಿಗೆ ವಿರೋಧ ಇದ್ದರು. ಇಂದಿರಾಗಾಂಧಿ, ರಾಜೀವಗಾಂಧಿ, ನರಸಿಂಗರಾವ್, ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಗಳು ಜಾಗತಿಗಣತಿಯನ್ನು ಮಾಡುವಲ್ಲಿ ನಿರಾಸಕ್ತಿಯನ್ನು ಮೂಡಿಸಿದ್ದರು. ರಾಜ್ಯ ಸರ್ಕಾರ ಜಾತಿಗಣತಿಗಾಗಿ ಹಲವಾರು ಆಯೋಗಗಳನ್ನು ರಚನೆ ಮಾಡಿ ಅವರಿಂದ ವರದಿಯನ್ನು ಪಡೆದರು ಸಹಾ ಜಾರಿ ಮಾಡುವಲ್ಲಿ ಮಾತ್ರ ಹಿನ್ನಡೆಯಾಗಿದೆ. 802 ಜಾತಿಗಳಲ್ಲಿ ಕೇವಲ 156 ಜಾತಿಗಳಿಗೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ ಉಳಿದ ಜಾತಿಗಳಿಗೆ ಯಾವ ಪ್ರಾತಿನಿದ್ಯವೂ ಸಹಾ ಸಿಕಿಲ್ಲ, ಕೇಂದ್ರ ಸರ್ಕಾರ 2026ರಲ್ಲಿ 13000 ಕೋಟಿ ವೆಚ್ಚದಲ್ಲಿ ಜಾತಿ-ಜನಗಣತಿಯನ್ನು ಮಾಡಲು ಮುಂದಾಗಿದೆ. ರಾಜ್ಯ ಸರ್ಕಾರಗಳಿಗೆ ಯಾವುದೇ ಜಾತಿ-ಜನಗಣತಿಯನ್ನು ಮಾಡುವ ಅಧಿಕಾರ ಇಲ್ಲ ಎಂದು ತಿಳಿಸಿದರು.

ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಚಿತ್ರದುರ್ಗದಲ್ಲಿ ಶೇ.80 ರಷ್ಟು ಹಿಂದುಳಿದ ವರ್ಗದವರು ಇದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೆ ಸಮಯದಲ್ಲಿ ಜಾತಿ ಗಣತಿಯನ್ನು ಮಾಡಿಸಿಲ್ಲ, ಈಗ ನಮ್ಮ ಮೋದಿಯವರು ಈ ಕೆಲಸವನ್ನು ಪ್ರಾರಂಭ ಮಾಡಲಿದ್ದಾರೆ. ರಾಜ್ಯ ಸರ್ಕಾರಕ್ಕೆ ಜಾತಿಗಣತಿಯನ್ನು ಮಾಡುವ ಅಧಿಕಾರ ಇಲ್ಲ ಆದರೂ ಸಹಾ ಮತಕ್ಕಾಗಿ ಜನತೆಗೆ ಮೋಸ ಮಾಡುವ ಉದ್ದೇಶದಿಂದ ಜಾತಿಗಣತಿ ನೆಪದಲ್ಲಿ ಹಣವನ್ನು ವ್ಯಯ ಮಾಡುತ್ತಿದೆ. ಮೀಸಲಾತಿಯನ್ನು ಪಡೆಯಲು ಜಾತಿಗಣತಿ ಅನಿವಾರ್ಯವಾಗಿದೆ. ಇದನ್ನು ಮಾಡುವುದರಿಂದ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ತಿಳಿಯಬಹುದಾಗಿದೆ. ಜಾತಿ-ಜನಗಣತಿಯ ಬಗ್ಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಸಮಾವೇಶ ನಡೆದಿದ್ದು ಈಗ ವಿಭಾಗವಾರು ಮಟ್ಟದಲ್ಲಿ ನಡೆಯುತ್ತಿದ್ದು ಮುಂದಿನ ದಿನಮಾನದಲ್ಲಿ ಜಿಲ್ಲಾ, ತಾಲ್ಲೂಕು ಹೋಬಳಿ ಮಟ್ಟದಲ್ಲಿ ಸಮಾವೇಶ ನಡೆಯಲಿದೆ ಎಂದರು.

ಮಾಜಿ ಸಚಿವರಾದ ಹರತಾಳ್ ಹಾಲಪ್ಪ ಮಾತನಾಡಿ, ಈಗ ಎಲ್ಲಾ ಸಮುದಾಯಕ್ಕೆ  ಪರ್ವ ಕಾಲ ಪ್ರಾರಂಭವಾಗಿದೆ. ಮೀಸಲಾತಿಯಿಂದಾಗಿ ಮಾನವರಾಗಿ ಶಿಕ್ಷಣವನ್ನು ಪಡೆಯಲಾಗಿದೆ. ಸಿದ್ದರಾಮಯ್ಯ ರವರು ಜಾತಿ ಗಣತಿಯ ವರದಿಯನ್ನು ಜಾರಿ ಮಾಡುತ್ತಾರೆ ಎಂಬ ನಂಬಿಕೆ ಇತ್ತು ಆದರೆ ಈಗ ಈ ನಂಬಿಕೆ ಇಲ್ಲವಾಗಿದೆ ಏಕೆಂದರೆ ಸಿದ್ದರಾಮಯ್ಯ ರವರು ತಮ್ಮ ಅಧಿಕಾರಕ್ಕಾಗಿ ವರದಿಯನ್ನು ಮೂಲೆಗೆ ತಳ್ಳಿದ್ದಾರೆ. 2026ರಲ್ಲಿ ನಡೆಯುವ ಜಾತಿ-ಜನಗಣಿತಿಯಲ್ಲಿ ಸರಿಯಾದ ರೀತಿಯ ಮಾಹಿತಿಯನ್ನು ನೀಡುವುದರ ಮೂಲಕ ನಿಮ್ಮ ತೆರಿಗೆಯ ಪಾಲನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಎನ್ ರವಿಕುಮಾರ್, ಶಾಸಕರಾದ ಎಂ ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ. ಕುಮಾರಸ್ವಾಮಿ, ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ್, ಅಂಬಿಕಾ ಹುಲಿನಾಯ್ಕರ್, ಸೋಮಶೇಖರ್, ಬಿಜೆಪಿ ಮಾಜಿ ಅಧ್ಯಕ್ಷರಾದ ಮುರಳಿ, ಬಾಬು ಪತ್ತರ್, ಲಕ್ಷ್ಮೀಕಾಂತ್, ವೆಂಕಟೇಶ್ ಯಾದವ್, ತಿಮ್ಮಣ್ಣ, ಕಲ್ಲೇಶ್, ಸುಂದೀಪು ಗುಡಾರ್ಪಿ, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಅಭೀನಂದನ್, ಮಹಾಲಿಂಗಪ್ಪ, ರಾಮಣ್ಣ, ಲಿಂಗರಾಜು, ಪ್ರಸಾದ್, ಶಂಕರ್ ಚಾರ್, ಗೋವಿಂದಪ್ಪ, ಗೋಪಾಲ ಜಾಧವ್ ಹಾಗೂ ಓಬಿಸಿ ಸಮುದಾಯದ ಎಲ್ಲಾ ಮುಖಂಡರುಗಳು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...