ಕಳೆದ ಕೆಲವು ದಿನಗಳಿಂದ ರಾಯಚೂರಿನ ಗಂಡ – ಹೆಂಡತಿ ವಿಡಿಯೋ ವೈರಲ್ ಆಗಿರೋದು ಎಲ್ಲರು ನೋಡಿಯೇ ಇರ್ತೀರಾ. ಗದ್ದೆಮ್ಮ ಹಾಗೂ ತಾತಪ್ಪ ದಂಪತಿಯ ಕಥೆ ಇದು. ಮದುವೆಯಾಗಿ ಕೇವಲ ಮೂರು ತಿಂಗಳಾಗಿದೆ ಅಷ್ಟೇ. ಆದರೆ ಈಗ ಇಬ್ಬರು ಡಿವೋರ್ಸ್ ತನಕ ಹೋಗಿದ್ದಾರೆ. ಗಂಡನ ಮನೆಗೆ ಹೋಗುವಾಗ, ನದಿಯ ಬಳಿ ಫೋಟೋ ತೆಗೆದುಕೊಳ್ಳಲು ಹೋಗಿ, ಗಂಡನನ್ನು ನದಿಗೆ ತಳ್ಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಂಡ ತಾತಪ್ಪ ಕೂಡ ಹೆಂಡತಿ ಗದ್ದೆಮ್ಮನ ಮೇಲೆ ಆರೋಪ ಮಾಡಿದ್ದಾರೆ. ಇದೀಗ ತಾತಪ್ಪ ಮನೆಯವರು ಶಾಕಿಂಗ್ ನ್ಯೂಸ್ ಒಂದನ್ನ ಹೇಳಿದ್ದಾರೆ. ಇದು ನಿನ್ನೆ ಮೊನ್ನೆಯದ್ದಲ್ಲ, 35 ವರ್ಷಗಳ ದ್ವೇಷ ಎಂಬ ವಿಚಾರ ಹೇಳಿದ್ದಾರೆ.
ಒಂದು ಹೆಣ್ಣಿನ ಬಾಳು ಹಾಳು ಮಾಡಬಾರದು ಎಂಬ ಕಾರಣಕ್ಕೆ ಕೇಸ್ ಮಾಡದೆ, ಆಕೆಯ ಮನೆಗೆ ಬಿಟ್ಟು ಬಂದಿದ್ದೀವಿ. ತಾತಪ್ಪನನ್ನು ನದಿಗೆ ತಳ್ಳಿದ ಗದ್ದೆಮ್ಮ, ಬ್ಯಾರೇಜ್ ಮೇಲೆ ನಿಂತು ಚಪ್ಪಲಿ ತೋರಿಸಿದ್ದಳಂತೆ. ಇದು ತಾತಪ್ಪನ ಮನಸ್ಸಿಗೆ ಬಹಳಷ್ಟು ನೋವು ತಂದಿದೆ. ಅದನ್ನು ಕ್ಷಮಿಸಿಬಿಡೋಣಾ. ಆದರೆ ನನ್ನ ಜೀವನ ತೆಗೆಯುವುದಕ್ಕೆ ಹೋಗಿದ್ದು ಎಷ್ಟು ಸರಿ ಎಂದಿದ್ದಾರೆ.
ಗದ್ದೆಮ್ಮನಿಗೆ ಈ ಮದುವೆ ಇಷ್ಟವಿರಲಿಲ್ಲವಂತೆ. ಮೊದಲೇ ಹೇಳದೆ ಮದುವೆಯಾದ ಮೇಲೆ ಹೇಳಿದಕ್ಕೆ, ತಾತಪ್ಪ ಎಲ್ಲರ ಎದುರು ಮದುವೆ ನಡೆದೋಗಿದೆ, ಹೊಂದಿಕೊಂಡು ಬಾಳೋಣಾ ಎಂದು ಸುಮ್ಮನಾಗಿದ್ದನಂತೆ. ಇದೇ ಸಂದರ್ಭದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಕಳೆದ 35 ವರ್ಷದ ಹಿಂದೆ ಗದ್ದೆಮ್ಮ ಹಾಗೂ ತಾತಪ್ಪ ಫ್ಯಾಮಿಲಿಯ ನಡುವೆ ಮಾತುಕತೆ ಇರಲಿಲ್ಲ. ಆದರೆ ಈ ಸಂಬಂಧದಿಂದ ಎಲ್ಲವೂ ಸರಿಯಾಗಲಿ ಎಂದೇ ಎಲ್ಲರೂ ಭಾವಿಸಿ ಮದುವೆ ಮಾಡಿದ್ದರಂತೆ. ಆದರೆ ಈಗ ನೋಡಿದ್ರೆ ಪ್ರಾಣ ತೆಗೆದಯುವುದಕ್ಕೆ ಹೋಗಿದ್ದಾರೆಂದು ತಾತಪ್ಪ ಸಹೋದರ ಆರೋಪ ಮಾಡಿದ್ದಾರೆ.


