ಇಂದು ಚಿನ್ನದ ಬೆಲೆಯಲ್ಲಿ 60 ರೂಪಾಯಿ ಇಳಿಕೆ..!

1 Min Read

ಬೆಂಗಳೂರು: ಚಿನ್ನದ ದರದಲ್ಲಿ ಇಂದು ಸ್ವಲ್ಪ ಇಳಿಕೆಯಾಗಿದೆ. ಇಂದು 22 ಕ್ಯಾರಟ್ ನ ಒಂದು ಗ್ರಾಂಗೆ 60 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರಟ್ ನ ಒಂದು ಗ್ರಾಂ 9,000 ರೂಪಾಯಿ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನ ಕೂಡ 66 ರೂಪಾಯಿ ಇಳಿಕೆಯಾಗಿದ್ದು, ಈ ಮೂಲಕ 9,818 ರೂಪಾಯಿ ಆಗಿದೆ. 22 ಕ್ಯಾರಟ್ ಹತ್ತು ಗ್ರಾಂಗೆ 90,000 ರೂಪಾಯಿ ಆಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಚಿನ್ನ 98,180 ರೂಪಾಯಿ ಆಗಿದೆ.

 

ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ, ಬೆಂಗಳೂರು, ಚೆನ್ನೈ, ಕೇರಳ, ಹೈದ್ರಾಬಾದ್, ಕೊಲ್ಕತ್ತಾ, ಮುಂಬೈ ನಗರದಲ್ಲಿ 90,000 ರೂಪಾಯಿ ಒಂದು ಗ್ರಾಂ ಚಿನ್ನದ ಬೆಲೆಯಾಗಿದೆ. ದಿಲ್ಲಿಯಲ್ಲಿ 90,150 ರೂಪಾಯಿ ಇದೆ. ಇನ್ನು ವಿದೇಶಗಳಲ್ಲಿ ಚಿನ್ನದ ದರ ಹೀಗಿದೆ. ದುಬೈನಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನ 86,530 ರೂಪಾಯಿ ಇದೆ. ಅಮೆರಿಕಾದಲ್ಲಿ 88,020 ಇದೆ. ಸೌದಿಯಲ್ಲಿ 86,090 ಇದೆ.

ಬೆಳ್ಳಿ ಬೆಲೆಯಲ್ಲೂ ಯಾವುದೇ ವ್ಯತ್ಯಯವಾಗಿಲ್ಲ. ಹೀಗಾಗಿ ಇಂದಿನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ 110 ರೂಪಾಯಿ ಇದೆ. ಹಾಗೇ 100 ಗ್ರಾಂ ಬೆಳ್ಳಿಯ ಬೆಲೆ 11,000 ರೂಪಾಯಿ ಆಗಿದೆ. ಚೆನ್ನೈ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ, ಲಕ್ನೋ, ಪುಣೆ ನಗರದಲ್ಲಿ ಬೆಳ್ಳಿಯ ಬೆಲೆ 11,000 ಇದ್ರೆ, ಕೇರಳ, ಭುವನೇಶ್ವರ, ಚೆನ್ನೈನಲ್ಲಿ 12,000 ರೂಪಾಯಿ ಇದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks