ದಾವಣಗೆರೆ: ಇಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಪ್ರತಾಪ್ ಸಿಂಹ ಕೂಡ ಈ ಆಚರಣೆಯಲ್ಲಿ ಭಾಗಿಯಾಗಿದ್ದರು. ಮಲ್ಲಿಕಾರ್ಜುನ್ ಅವರಿಗೆ ಶುಭಾಶಯವನ್ನು ಕೋರಿದ್ದಾರೆ. ಈ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ನಮ್ಮ ಪಕ್ಷದ ಹಿರಿಯ ನೇತಾರರು, ದಾವಣಗೆರೆಯ ಈ ಭಾಗದಲ್ಲಿ ಪಕ್ಷವನ್ನ ಕಟ್ಟಿ ಬಲವಾಗಿ ಬೆಳೆಸಿರುವಂತ ಮಾಜಿ ಸಂಸದರು, ಮಾಜಿ ಕೇಂದ್ರ ಸಚಿವರು ಆಗಿರುವಂತ ಸಿದ್ದೇಶಣ್ಣ ಅವರ ಹುಟ್ಟುಹಬ್ಬ. ಈ ಪ್ರಯುಕ್ತ ಕಾರ್ಯಕ್ರಮವೊಂದನ್ನ ಹಮ್ಮಿಕೊಳ್ಳಲಾಗಿದೆ. ಸಿದ್ದೇಶಣ್ಣರ ಜೊತೆಗೆ ಸುಮಾರು ಹತ್ತು ವರ್ಷಗಳ ಕಾಲ ಸಂಸದನಾಗಿ ಪಾರ್ಲಿಮೆಂಟ್ ನಲ್ಲಿ ಒಂದೇ ಹೌಸ್ ನಲ್ಲಿ ಕುಳಿತುಕೊಳ್ಳುವ ಅವಕಾಶ ಲಭ್ಯವಾಗಿತ್ತು. ಕೇಂದ್ರ ಸಚಿವರಾಗಿದ್ದಾಗ ಮೈಸೂರು ವಿಮಾನ ನಿಲ್ದಾಣ ಪುನರ್ ನಿರ್ಮಾಣ ಆಗುವುದಕ್ಕೆ ಅವಕಾಶ ಮಾಡಿಕೊಟ್ರು. ಹೀಗಾಗಿ ಅವರ ಋಣ ನನ್ನ ಮೇಲಿದೆ ಎಂದಿದ್ದಾರೆ.
ಇದೆ ವೇಳೆ ರಾಜ್ಯಾಧ್ಯಕ್ಷರ ಬದಲಾವಣೆಯ ಬಗ್ಗೆ ಮಾತನಾಡಿ, ಇಂಥ ವಿಚಾರಗಳ ಬಗ್ಗೆ ನಾನು ಎಂದು ಮಾತನಾಡಿಲ್ಲ. ವಿಜಯೇಂದ್ರ ಅವರು ನಮ್ಮ ರಾಜ್ಯಾಧ್ಯಕ್ಷರು. ಕಳೆದ ಒಂದೂವರೆ ವರ್ಷದಿಂದ ಅವರು ಕೂಡ ಸಕ್ರೀಯವಾಗಿ, ಶಕ್ತಿಮೀರಿ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ನಿಯುಕ್ತಿಯನ್ನು ಮಾಡಿರುವುದು ಕೇಂದ್ರದ ನಾಯಕರು. ಅವರ ಸಲಹೆಯಂತೆ ನಾವೂ ಕೂಡ ಪಕ್ಷದ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ. ಇದರ ಆಚೆಗೆ ನನಗೆ ಬೇರೆ ಯಾವ ರಾಜಕಾರಣವೂ ಗೊತ್ತಿಲ್ಲ ಎಂದಿದ್ದಾರೆ.
ಇದೆ ವೇಳೆ ಕಾಂಗ್ರೆಸ್ ಬಗ್ಗೆ ವಾಗ್ದಾಳಿ ನಡೆಸಿದ್ದು, ಬಸವರಾಜ್ ರಾಯರೆಡ್ಡಿ ಅವರು ಹೇಳಿರುವಂತದ್ದು ಪರಿಸ್ಥಿತಿಯ ಸ್ಪಷ್ಟ ಚಿತ್ರಣವನ್ನ ಕೊಟ್ಟಿದ್ದಾರೆ. 136 ಸೀಟ್ ಗಳನ್ನ ಕೊಟ್ಟಾದ ಮೇಲೆ ನಿಮ್ಮ ನಂಬಿಕೆ ಉಳಿಸಿಕೊಳ್ಳಬೇಕು ಅಲ್ವಾ. ಪ್ರಿಯಾಂಕ್ ಖರ್ಗೆ ಸಾಹೇಬ್ರೆ ನೀವೂ ಯಾವ ಕೆಟ್ಟ ಪ್ರಾಣಿಗೆ ಬೇಕಾದ್ರೂ ಹೋಲಿಕೆ ಮಾಡಿ. ಪ್ರತಾಪ್ ಸಿಂಹನನ್ನು ಡೈಲಿ ಬೈರಿ. ನಿರುದ್ಯೋಗ ಭತಗಯೆ ಕೊಡ್ತೀವಿ ಅಂತ ಹೇಳಿ ಸುಮ್ನೆ ಆದ್ರೆ ಆ ಮಕ್ಕಳ ಕಥೆ ಏನು. ನಿಮ್ಮ ಥರ ಎಲ್ಲಾ ಅದೃಷ್ಟವಂತರಲ್ಲ. ಎಸ್ಎಸ್ಎಲ್ಸಿ, ಪಿಯುಸಿ ಓದಿ ನಿಮ್ ಥರ ಕೋಟ್ಯಾಧೀಶ್ವರ ಒಡೆಯರಲ್ಲ ಸರ್ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











