ಸುದ್ದಿಒನ್, ಹಿರಿಯೂರು, ಜುಲೈ. 07 : ತಾಲೂಕಿನ ಗುಯಿಲಾಳ್ ಟೋಲ್ ಬಳಿ ಇರುವ ಶ್ರೀ ಸದ್ಗುರು ಸಾಯಿ ದತ್ತಾಶ್ರಮದಲ್ಲಿ ಜುಲೈ 10ರಂದು ಗುರುವಾರ ಬೆಳಗ್ಗೆ ಗುರು ಪೌರ್ಣಮಿ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸದ್ಗುರು ಸಾಯಿ ದತ್ತಾಶ್ರಮದ ಪೀಠಾಧ್ಯಕ್ಷರು ಹಾಗೂ ಆಧ್ಯಾತ್ಮಿಕ ಚಿಂತಕರಾದ ಪರಮಪೂಜ್ಯ ಶ್ರೀ ಗುರುಮೂರ್ತಿ ಗುರೂಜಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರು ಪೌರ್ಣಮಿ ಮಹೋತ್ಸವ ಅಂಗವಾಗಿ ಅಂದು ಸಾಯಿಬಾಬಾ ಮಂದಿರ ದೇವಸ್ಥಾನದಲ್ಲಿ ಬೆಳಿಗ್ಗೆ 8 ಗಂಟೆಗೆ ಗಂಗಾಪೂಜೆ, 8.30ಕ್ಕೆ ವ್ಯಾಸಪೂಜೆ, 9ಕ್ಕೆ ಭಿಕ್ಷಾವಂದನೆ ಮತ್ತು ಆಶೀರ್ವಚನ, 10ಕ್ಕೆ ಕುಂಭಾಭಿಷೇಕ, ಮಧ್ಯಾಹ್ನ 12ಕ್ಕೆ ಆರತಿ ಹಾಗೂ 12.30ಕ್ಕೆ ಪ್ರಸಾದ ವಿತರಣೆ ಮತ್ತು ಅನ್ನದಾಸೋಹ ಕಾರ್ಯಕ್ರಮ ಜರುಗಲಿದೆ. ಬಳಿಕ ಸಂಜೆ 6:30ಕ್ಕೆ ಸಂಜೆ ಆರತಿ, 7ಕ್ಕೆ ಶ್ರೀ ಸಾಯಿ ಬಾಬಾರ ಪಾದಸ್ಪರ್ಶ ಹಾಗೂ ರಾತ್ರಿ 8ಗಂಟೆಗೆ ಶೇಜಾ ಆರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಗುರು ಪೌರ್ಣಮಿ ಅಂಗವಾಗಿ 5ಸಾವಿರ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿದ್ದು, ತಾಲೂಕಿನ ಸಮಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಸಾಯಿಬಾಬಾರ ಗುರು ಪೌರ್ಣಮಿ ಮಹೋತ್ಸವದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರೀ ಗುರುಮೂರ್ತಿ ಗುರೂಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










