Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರೆ ಮುಂದುವರೆದರೆ ಮುಂದೇನು..? ಕುಮಾರ್ ಬಂಗಾರಪ್ಪ ಕೊಟ್ಟ ಉತ್ತರವೇನು..?

---Advertisement---

ದೆಹಲಿ: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರ ವಿರೋಧಿ ಬಣ ಬಹಳ ದೊಡ್ಡದಾಗಿನೇ ಇದೆ. ಈಗಾಗಲೇ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಅದರಲ್ಲೂ ಕುಮಾರ್ ಬಂಗಾರಪ್ಪ ಕೂಡ ಇದ್ದಾರೆ. ಈಗಲೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರು ಬೇಡ ಅಂತಾನೇ ಹೇಳ್ತಾ ಇದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಲ ಅವರು, ಹೈಕಮಾಂಡ್ ಕೊಡುವ ತೀರ್ಮಾನಕ್ಕೆ ನಾವೂ ಯಾವಾಗಲೂ ಬದ್ಧರೆ. ಯಾವುದೇ ಕಾರಣಕ್ಕೂ ಹೈಕಮಾಂಡ್ ವರಿಷ್ಠರ ಮಾತುಗಳಿಗೆ, ನಾಯಕತ್ವಕ್ಕೆ ನಾವೂ ಯಾರೂ ಕೂಡ ವಿರೋಧಿಗಳಲ್ಲ ಎಂದಿದ್ದಾರೆ.

 

ಇಷ್ಟು ದಿನ ತಗೊಂಡಿದ್ದಾರೆ ಅಂದ್ರೆ ಒಂದು ಉದ್ದೇಶ ಇರುತ್ತೆ, ಮಾಡಿದ್ದಾರೆ ಅದಕ್ಕೆ ಒಂದು ಉದ್ದೇಶ ಇರುತ್ತೆ. ಯಾತಕ್ಕೆ ಮಾಡಿಲ್ಲ ಅನ್ನೋದಕ್ಕೆ ಅದರ ಪರಿಪೂರ್ಣ ಮಾಹಿತಿಗಾಗಿ ಕಾಯ್ತಾ ಇದ್ದೀವಿ. ಮೂರ್ನಾಲ್ಕು ರಾಜ್ಯ ಮಾತ್ರ ಉಳಿದಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಮತ್ತೆ ಕರ್ನಾಟಕ. ಈ ನಾಲ್ಕು ರಾಜ್ಯಾಧ್ಯಕ್ಷರನ್ನ ಮಾಡುವ ಹೊತ್ತಿಗೆ, ಅವರು ಗುಜರಾತ್ ತೆಗೆದು ಕರ್ನಾಟಕಕ್ಕೇನು ತೂಗಲ್ಲ. ಕರ್ನಾಟಕ ಲದ್ದೇ ಒಂದು ವಿಶೇಷವಾದದ್ದು. ಇಡೀ ದಕ್ಷಿಣ ಭಾರತಕ್ಕೆ, ಬಿಜೆಪಿಗೆ ಕರ್ನಾಟಕವೇ ಹೆಬ್ಬಾಗಿಲು ಇದ್ದಂತೆ. ಸರ್ಕಾರವನ್ನು ಮಾಡಿರುವ ಹೆಗ್ಗಳಿಕೆ ಕರ್ನಾಟಕಕ್ಕೆ ಇದೆ. ಆ ಕಾರಣಕ್ಕೋಸ್ಕರ ಸ್ವಲ್ಪ ಸೂಕ್ಷ್ಮತೆಗಳು ಇರಬಹುದು. ಅದೆಲ್ಲವನ್ನು ನೋಡಿ ಒಳ್ಳೆಯ ನಾಯಕತ್ವವನ್ನು ಕೊಡ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಎಲ್ಲ ಒಂದು ಬಣವಾಗಿದ್ದರು. ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಗ್ಗೆ ಮಾತನಾಡಿದ್ದಕ್ಕೆ ಯತ್ನಾಳ್ ಅವರನ್ನ ಈಗಾಗಲೇ ಉಚ್ಛಾಟನೆ ಮಾಡಲಾಗಿದೆ. ಮುಂದೆ ರಾಜ್ಯಾಧ್ಯಕ್ಷರನ್ನಾಗಿ ಯಾರನ್ನ ಆಯ್ಕೆ‌ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...