Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಣಿಗಾರಿಕೆ ಲಾರಿಗಳ ಓಡಾಟ : ವಿ. ಪಾಳ್ಯ ಗ್ರಾಮಸ್ಥರಿಂದ ಪ್ರತಿಭಟನೆ

---Advertisement---

 

ಸುದ್ದಿಒನ್, ಚಿತ್ರದುರ್ಗ, ಜುಲೈ. 02 : ತಾಲ್ಲೂಕಿನ ವಿ ಪಾಳ್ಯ ಗ್ರಾಮಸ್ಥರು ಇಂದು (ಬುಧವಾರ,ಜುಲೈ. 02 ) ಮುಂಜಾನೆ 5:00 ಗಂಟೆಯಿಂದ ಸಂಜೆವರೆಗೂ ಗಣಿಗಾರಿಕೆಯ ಲಾರಿ ಮತ್ತು ಬಸ್ಸು ತಡೆದು ಪ್ರತಿಭಟನೆ ನಡೆಸಿದರು.

ಚಿತ್ರದುರ್ಗದಿಂದ ಬಿದುರ್ಗ, ಸಂತೆಬೆನ್ನೂರು, ಹೊಳಲ್ಕೆರೆ ಚನ್ನಗಿರಿ, ಶಿವಮೊಗ್ಗ, ಹೊನ್ನಾಳಿ ಹಾಗೂ ಕುಂಟ ಸೇರುವ ರಸ್ತೆ ಇದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಜಿಲ್ಲೆಗೆ ತಾಲೂಕುಗಳಿಗೆ ಸಾರ್ವಜನಿಕರು ಇದೇ ಮಾರ್ಗದಲ್ಲಿ ಓಡಾಡುತ್ತಾರೆ.

ಈ ರಸ್ತೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಬೈಕ್ ಸವಾರರು ಗುಂಡಿಯಲ್ಲಿ ಬಿದ್ದು ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿದೆ.
ಹತ್ತಕ್ಕೂ ಹೆಚ್ಚು ಕಾರುಗಳ ಟೈಯರ್ ಒಡೆದು ಹೋಗಿದೆ‌
ಭೀಮಸಮುದ್ರದಿಂದ ವಿ ಪಾಳ್ಯದವರೆಗೆ ರಸ್ತೆ ಅದೇ ಹದಗೆಟ್ಟಿದ್ದು ಇದರ ಬಗ್ಗೆ ಅಧಿಕಾರಿಗಳು ಮತ್ತು ಸರ್ಕಾರ ಗಮನ ಹರಿಸುತ್ತಿಲ್ಲ. ಸುಮಾರು 30ಕ್ಕೂ ಹೆಚ್ಚು ಜನ ರಾತ್ರಿ ಓಡಾಡುವಾಗ ಗುಂಡಿಗಳಲ್ಲಿ ಬಿದ್ದು ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿದೆ. ಹೀಗಾದರೆ ಸರ್ಕಾರ ಏನು ಗಮನ ಹರಿಸುತ್ತದೆ ಎಂದು ಈ ಪಾಳ್ಯ ಗ್ರಾಮಸ್ಥರು ರಸ್ತೆ ತಡೆ ಮಾಡಿ ಬಂದ್ ಮಾಡಿದ್ದರು.

ವಿ ಪಾಳ್ಯ. ಗ್ರಾಮಸ್ಥರಾದ ನವೀನ್ ಕುಮಾರ್ ಮಾತನಾಡಿ
ಈ ಮಾರ್ಗದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಗಣಿಗಾರಿಕಾ ಕಂಪನಿಗಳ ಲಾರಿಗಳು ಓಡಾಡುತ್ತವೆ. ಆದರೆ ಗಣಿಗಾರಿಕೆಯಿಂದ ಬಹುತೇಕ ಹೆಚ್ಚು ಹಣ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ. ಆದರೂ ಕೂಡ ರಸ್ತೆ ಸರಿಪಡಿಸದಿರುವುದು ವಿಷಾಧಕರ ಸಂಗತಿ‌. ಸುತ್ತಮುತ್ತಲಿರುವ ಪಾಳ್ಯ, ಮಳಲಿ, ನೆಲ್ಲಿಕಟ್ಟೆ, ಕಂದವಾಡಿ ಸಾರ್ವಜನಿಕರು ಸುಮಾರು 15 ರಿಂದ 20 ಜನರು ಗುಂಡಿಯಲ್ಲಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸುತ್ತಮುತ್ತಲಿರುವ ಗ್ರಾಮಗಳಿಗೆ ಕಂಪನಿಗಳಿಂದ ಯಾವುದೇ ರೀತಿಯ ಸಹಕಾರ ಸಿಕ್ಕಿಲ್ಲ. ಈ ಮಾರ್ಗವಾಗಿ 4 ಗಣಿಗಾರಿಕೆಯ ಕಂಪನಿಗಳು ಲಾರಿಗಳು ಹಾಗೂ ಕೆಲಸಗಾರರ ಬಸ್ಸುಗಳು ಸಂಚರಿಸುತ್ತವೆ. ಆದರೂ ಕೂಡ ಕಂಪನಿಯವರು ಎಚ್ಚೆತ್ತುಕೊಳ್ಳುತ್ತಿಲ್ಲ. ಆದಷ್ಟು ಬೇಗ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನಾದರೂ ಮುಚ್ಚಲಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳು ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಮಾಡುತ್ತೇವೆ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿ ಪಾಳ್ಯ ಗ್ರಾಮಸ್ಥರಾದ ಬೋಜರಾಜು, ಸ್ವಾಮಿ, ಮಾರುತಿ, ತಿಮ್ಮರಾಜು, ಎಲ್ಲಪ್ಪ, ಹನುಮಂತಪ್ಪ, ಮಂಜುನಾಥ ಹಾಗೂ ನೆಲ್ಲಿಕಟ್ಟೆ, ವಿ ಪಾಳ್ಯ, ಮಳಲಿ, ಗ್ರಾಮಸ್ಥರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment