ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಈ ಹಾರ್ಟ್ ಅಟ್ಯಾಕ್ ಎಂಬ ಭೂತ ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡಿದೆ. ಹಾರ್ಟ್ ಅಟ್ಯಾಕ್ ನಿಂದ ಸಾವಿನ ಸಂಖ್ಯೆ ಮುಂದುವರೆಯುತ್ತಲೆ ಇದೆ. ಅದರಲ್ಲೂ ಹಾಸನದಲ್ಲಿ ಪ್ರತಿದಿನ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪುತ್ತಿದ್ದಾರೆ. ಅದಕ್ಕೆ ಕಾರಣವೇನು ಅನ್ನೋದು ಮಾತ್ರ ಇನ್ನು ತಿಳಿದು ಬಂದಿಲ್ಲ. ಇದರ ನಡುವೆ ಇಂದು ಶಿವಮೊಗ್ಗದಲ್ಲೂ ಹಾರ್ಟ್ ಅಟ್ಯಾಕ್ ಸದ್ದು ಮಾಡಿದೆ. ಚಿಕ್ಕ ವಯಸ್ಸಿನವರೇ ಸಾವನ್ನಪ್ಪಿದ್ದಾರೆ.
ಮಕ್ಕಳ ಬಗ್ಗೆ ತಂದೆ ತಾಯಂದಿರು ದೊಡ್ಡ ಕನಸ್ಸನ್ನೇ ಕಂಡಿರುತ್ತಾರೆ. ಮಕ್ಕಳ ಭವಿಷ್ಯ ಉಜ್ವಲವಾಗಲಿ, ದೊಡ್ಡ ಮಟ್ಟಕ್ಕೆ ಬೆಳೆಯಲಿ ಅಂತ ಅವರು ಕೇಳಿದ್ದೆಲ್ಲವನ್ನು ಕೊಟ್ಟು, ಇಷ್ಟವಾಗಿದ್ದನ್ನ ಓದಿಸುತ್ತಾನೇ ಇರ್ತಾರೆ. ಆದರೆ ಕನಸು ನನಸಾಗುವ ಮುನ್ನವೇ ವಿಧಿ ಮಕ್ಕಳ ಬಾಳಲ್ಲಿ ಆಟವಾಡಿದರೆ ತಂದೆ – ತಾಯಂದಿರ ಮನಸ್ಥಿತಿ ಏನಾಗಬಹುದು. ಆ ನೋವನ್ನ ಸಹಿಸಿಕೊಳ್ಳುವುದಾದರೂ ಹೇಗೆ ಹೇಳಿ. ಶಿವಮೊಗ್ಗ ನಗರ ಹೊರವಲಯದ ಬಸವನ ಗಂಗೂರು ಗ್ರಾಮದಲ್ಲಿ ನಡೆದಿದೆ.
20 ವರ್ಷದ ಶ್ರೀನಿಧಿ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾರೆ. ನಗರದ ಡಿವಿಎಸ್ ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ಪದವಿ ಮಾಡ್ತಾ ಇದ್ದರು. ಆದರೆ ಈಗ ಜೀವಂತವಾಗಿಲ್ಲ ಎಂಬುದನ್ನು ಕೇಳುವುದಕ್ಕೇನೆ ಸಂಕಟವಾಗುತ್ತಿದೆ. ಇಡೀ ಗೆಳೆಯರ ಬಳಗ ದುಃಖತಪ್ತರಾಗಿದ್ದಾರೆ. ಶ್ರೀನಿಧಿಗೆ ಭಾನುವಾರ ಬೆಳಗ್ಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದರಿಂದ ಗಾಬರಿಗೊಂಡ ಪೋಷಕರು ತಕ್ಷಣವೇ ಮಗನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಹಾರ್ಟ್ ಅಟ್ಯಾಕ್ ಜೊತೆಗೆ ಶ್ರೀನಿಧಿಗೆ ನ್ಯೂಮೋನಿಯಾ ಸಮಸ್ಯೆ ಕೂಡ ಇತ್ತಂತೆ. ಈ ಎರೆಉ ಸಮಸ್ಯೆಯಿಂದ ಶ್ರೀನಿಧಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











