ರಾಜ್ಯದ ತೆಂಗು ಬೆಳೆಗಾರರಿಗೆ ಫುಲ್ ಖುಷಿ ಸುದ್ದಿಯೊಂದು ಸಿಕ್ಕಿದೆ. ಅದು ಕೊಬ್ಬರಿ ಬೆಳೆಗೆ ಒಳ್ಳೆ ಬೆಲೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನು ಏರಿಕೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸ್ತಾ ಇದಾವೆ. ಬಯಲು ಸೀಮೆಯ ರೈತರು ತೆಂಗು ಬೆಳೆಗೆ ಬೆಲೆ ಕುಸೊತ ಕಂಡು ಕಂಗಾಲಾಗಿದ್ದರು. ಬೆಲೆ ಏರಿಕೆಯಿಂದಾಗಿ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಅದರಲ್ಲೂ ರಾಜ್ಯದ ಪ್ರಸಿದ್ಧ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯು 2 ತಿಂಗಳಲ್ಲಿ ಕ್ವಿಂಟಾಲ್ ಗೆ 11 ಸಾವಿರ ರೂಪಾಯಿ ಏರಿಕೆಯಾಗಿದೆ. ತಿಪಟೂರು ಎಪಿಎಂಸಿಯಲ್ಲಿ ಗುರುವಾರ ನಡೆದ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ 29 ಸಾವುರ ರೂಪಾಯಿಗರ ಏರಿಕೆಯಾಗಿರುವುದು ವಿಶೇಷವಾಗಿದೆ.
ಕೇವಲ ಮೂರೇ ಮೂರು ದಿನದ ಅಂತರದಲ್ಲಿ 3 ಸಾವಿರ ರೂಪಾಹಿ ಏರಿಕೆಯಾಗಿದೆ. ಕಳೆದ ವಾರ ಅಂದ್ರೆ ಜೂನ್ 26ರಂದು ಕೊಬ್ಬರಿ ಬೆಲೆ 29,118 ರೂಪಾಯಿಗೆ ಏರಿಕೆಯಾಗಿದೆ. ಕೊಬ್ಬರಿಗೆ ಕ್ವಿಂಟಾಲ್ ಗೆ 15 ಸಾವಿರ ಬೆಂಬಲ ಬೆಲೆ ನೀಡಿ ಎಂದು ರೈತರು ಕೇಂದ್ರ ಸರ್ಕಾರವನ್ನು ಕೇಳುತ್ತಿದ್ದರು. ಆದರೆ ಈಗ ಅದರಪಟ್ಟು ಬೆಲೆ ಜಾಸ್ತಿಯಾಗಿದೆ.
ಕೊಬ್ಬರಿಗೆ ಬೆಲೆ ಬಂದಿರುವುದು ಒಂದು ಕಡೆ ಖುಷಿಯಾದರೆ ಮತ್ತೊಂದು ಕಡೆ ಅದರ ಚಿಪ್ಪಿಗೆ ಬೆಲೆ ಬಂದಿರುವುದು. ತೆಂಗಿನಕಾಯಿ ಬಳಸಿ ಇನ್ಮುಂದೆ ಚಿಪ್ಪನ್ನ ಎಸೆಯುವ ಅವಶ್ಯಕತೆ ಇಲ್ಲ. ಯಾಕಂದ್ರೆ ಖಾಲಿ ಚಿಪ್ಪಿನ ಟನ್ ಗೆ 34 ಸಾವಿರ ರೂಪಾಯಿ ಬೆಲೆ ಇದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ನಲ್ಲಿ ತೆಂಗಿನ ಖಾಲಿ ಚಿಪ್ಪು 34 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಹೀಗಾಗಿ ಚಿಪ್ಪನ್ನು ಬಿಸಾಡುವ ಬದಲು ಅದನ್ನು ಉಳಿಸಿ, ಹಣ ಗಳಿಸಿ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










