ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಬೆಂಗಳೂರು: ಸಹಕಾರಿ ಸಚಿವ ಕೆ.ಎನ್.ರಾಜಣ್ಣ ನಿನ್ನೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿ ಮಾಡಿದ್ದಾರೆ. ಸೆಪ್ಟೆಂಬರ್ ನಲ್ಲಿ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯೇ ನಡೆಯಲಿದೆ ಎಂದು ನಿನ್ನೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಹಲವು ವಿಚಾರಗಳು ಚರ್ಚೆ ಹುಟ್ಟು ಹಾಕಿದ್ದವು. ಆದರೆ ಯಾರಿಗೂ ಯಾವ ರೀತಿಯ ಬದಲಾವಣೆ ಅನ್ನೋದನ್ನ ಮಾತ್ರ ಕ್ಲಾರಿಟಿ ಕೊಟ್ಟಿಲ್ಲ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ಹಾಗೂ ಕೆ.ಎನ್. ರಾಜಣ್ಣ ಆಪ್ತರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ರಾಜಣ್ಣ ಅವರ ಹೇಳಿಕೆಯನ್ನ ನಿರ್ಲಕ್ಷ್ಯ ಮಾಡುವುದು ಉತ್ತಮ ಎನ್ನುತ್ತಿದ್ದಾರೆ. ಇಂದು ಕೆಂಪೇಗೌಡರ ಜಯಂತಿ ಆಚರಣೆಯ ಬಳಿಕ ಈ ಸಂಬಂಧ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಅದನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದು ಎಂದಿದ್ದಾರೆ.

ರಾಜಣ್ಣ ಬದಲಾವಣೆಯಾಗಬಹುದು ಅಂತ ಹೇಳಿದ್ದಾರೆ ಅಷ್ಟೇ. ಹೀಗೆ ಆಗುತ್ತೆ ಅಂತ ಹೇಳಿಲ್ಲ ಅಲ್ವಾ. ನೀವೂ ಊಹೆ ಮಾಡ್ಕೊಂಡು ಹಿಂಗಿಂಗೆ ಆಗುತ್ತೆ ಅಂತ ಬರೆದ್ರೆ ಏನ್ ಮಾಡೋದಕ್ಕೆ ಆಗುತ್ತೆ. ಬೆಟರ್ ಅಂದ್ರೆ ಆ ಹೇಳಿಕೆಯನ್ನ ನಿರ್ಲಕ್ಷ್ಯ ಮಾಡಿ. ನಾನು ಜರ್ನಲಿಸ್ಟ್ ಅಲ್ಲ ಎಂದು ಕೆ ಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆಗಸ್ಟ್ – ಸೆಪ್ಟೆಂಬರ್ ನಲ್ಲಿ ಭಾರೀ ಬದಲಾವಣೆಯಾಗಲಿದೆ. ಆಶ್ಚರ್ಯಕರ ಬದಲಾವಣೆಯಾಗಲಿದೆ. ಈಗ ತಣ್ಣಗೆ ಗಾಳಿ ಬೀಸುತ್ತಾ ಇದೆ. ಸೆಪ್ಟೆಂಬರ್ ಕಳಿಲಿ ನೋಡಿವ್ರಂತೆ. ಕಾಂಗ್ರೆಸ್ ನಲ್ಲಿ ಪವರ್ ಸೆಂಟರ್ ಜಾಸ್ತಿಯಾಗಿದೆ. ಮೊದಲು 13-18 ಅಷ್ಟೇ ಒವರ್ ಸೆಂಟರ್ ಇದ್ದವು. ಈಗ ಪವರ್ ಸೆಂಟರ್ ಗಳು ಜಾಸ್ತಿಯಾಗಿವೆ. ಪವರ್ ಸೆಂಟರ್ ಗಳು ಜಾಸ್ತಿಯಿದ್ದಾಗ ಜಂಜಾಟಗಳು ಜಾಸ್ತಿಯಾಗುತ್ತವೆ. ಆ ಹಿನ್ನೆಲೆಯಲ್ಲಿ ಆ ಪರಿಸ್ಥಿತಿಗೆ ಅನುಗುಣವಾಗಿ ಅವರು ಸರ್ಕಾರವನ್ನು, ಪಕ್ಷವನ್ನು ನಡೆಸಬೇಕಾಗುತ್ತದೆ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್