ಜಮೀರ್ ಅಹ್ಮದ್ ಖಾನ್ ಆಪ್ತ ಸರ್ಫರಾಜ್ ಖಾನ್ ನೀಡಿದ ದೂರಿನ ಹಿನ್ನೆಲೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರನ್ನು ಅರೆಸ್ಟ್ ಮಾಡಲಾಗಿದೆ. ಸರ್ಫರಾಜ್ ಖಾನ್ ಅವರು ರೂಪೇಶ್ ರಾಜಣ್ಣ ಅವರ ಮೇಲೆ ಗಂಭೀರ ಆರೋಪ ಮಾಡಲಾಗಿತ್ತು. ಅದರ ಬಗ್ಗೆ ಕೇಳುವುದಕ್ಕೆಂದು ಬಂದಾಗ ರಾಜಣ್ಣ ಅವರ ಬಂಧನವಾಗಿದೆ.
ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ನಲ್ಲಿರುವ ಸಚಿವ ಜಮೀರ್ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದ ರೂಪೇಶ್ ರಾಜಣ್ಣ, ನನ್ನ ಮೇಲೆ ಸಚಿವರ ಪಿಎ ಸರ್ಫರಾಜ್ ಖಾನ್ ಸುಳ್ಳು ಆರೋಪ ಮಾಡಿದ್ದಾರೆ. ನೀವೂ ಸತ್ಯ ತಿಳಿಸದೆ ನಾನು ಹಿಂದೆ ಸರಿಯಲ್ಲ. ನೀವು ಹೇಳಿರುವುದು ಸತ್ಯ ಅಂತ ದಾಖಲೆ ಸಹಿತ ನಿರೂಪಿಸಿ ಎಂದು ರೂಪೇಶ್ ರಾಜಣ್ಣ ಪಟ್ಟು ಹಿಡಿದಿದ್ದರು. ರೂಪೇಶ್ ರಾಜಣ್ಣ ಆಗಮನ ಹಿನ್ನೆಲೆಯಲ್ಲಿ ಸಚಿವ ಜಮೀರ್ ಸರ್ಕಾರಿ ನಿವಾಸಕ್ಕೆ ಪೊಲೀಸರು ಭದ್ರತೆ ನೀಡಿದ್ದರು. ಇದೇ ವೇಳೆ ಜಮೀರ್ ಸರ್ಕಾರಿ ನಿವಾಸದ ಮುಂದೆ ಹೈಡ್ರಾಮಾ ನಡೆದಿದೆ.
ಅಲ್ಲದೆ ಜಮೀರ್ ಪಿಎ ವಿರುದ್ಧ ರೂಪೇಶ್ ರಾಜಣ್ಣ ಕಿಡಿಕಾರಿದ್ದಾರೆ. ಹೇಡಿಗಳಂತೆ ಪೊಲೀಸರನ್ನು ಹಾಕಿ ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ. ಹೇಡಿಗಳಂತೆ ಪೊಲೀಸರನ್ನ ಹಾಕಿ ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆಂದು ಕೂಗುತ್ತಿದ್ದ ರೂಪೇಶ್ ರಾಜಣ್ಣ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಸರ್ಫರಾಜ್ ಖಾನ್, ಯಾರೋ ಒಬ್ಬ ರೂಪೇಶ್ ರಾಜಣ್ಣ ಅಂತ ಹುಟ್ಟಿಕೊಂಡಿದ್ದಾನೆ. ಅವನು ನನ್ನ ಕಚೇರಿಗೆ ಬಂದಿದ್ದ. ನಾನು ಹಿಜಾಬ್ ಬಗ್ಗೆ ಕೆಲಸ ಮಾಡುತ್ತೇನೆ. ಹಣ ನೀಡಿ ಎಂದು ಕೇಳಿದ್ದ. ನಾನು ಬಿಗ್ಬಾಸ್ಗೆ ಹೋಗಿದ್ದೆ, ಅಲ್ಲಿಂದ ನಾನೊಬ್ಬ ಸ್ಟಾರ್ ಸೆಲೆಬ್ರಿಟಿ ಅಂದುಕೊಂಡು ಹಣ ಕೇಳಿದ್ದ. ಈ ರೀತಿ ಬ್ಲ್ಯಾಕ್ ಮೇಲ್ ಮಾಡುವವರು ಸಮಾಜದಲ್ಲಿ ಉಳಿದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











