Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಿವಮೊಗ್ಗದಲ್ಲಿ ಸ್ನೇಹಿತನ ತಂಗಿ ಮಗು ನೋಡಲು ಹೋದವರ ದುರಂತ ಅಂತ್ಯ..!

---Advertisement---

ಶಿವಮೊಗ್ಗ: ಸಾವು ಯಾವಾಗ, ಹೇಗೆ ಬರುತ್ತೆ ಎಂಬುದನ್ನ ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ. ಈಗಂತು ಕುಂತಲ್ಲಿ ನಿಂತಲ್ಲಿ ಹಾರ್ಟ್ ಅಟ್ಯಾಕ್ ಆಗ್ತಾ ಇದೆ. ಇದು ಆಕಸ್ಮಿಕವಾದರೆ ಕೆಲವೊಮ್ಮೆ‌ಹುಚ್ಚಾಟಕ್ಕೆ ಅದೆಷ್ಟೋ ಯುವಕ ಯುವತಿಯರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಅಂತದ್ದೊಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಯಡವಾಲ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಗೌತಮ್ ನಾಯ್ಕ್ ಹಾಗೂ 22 ವರ್ಷದ ಚಿರಂಜೀವಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಗೌತಮ್ ನಾಯ್ಕ್ ಯಡವಾಲ ಗ್ರಾಮದ ನಿವಾಸಿಯಾಗಿದ್ದಾರೆ. ಚಿರಂಜೀವಿ ಕುಂಬಾರಗುಂಡಿ ನಿವಾಸಿಯಾಗಿದ್ದಾರೆ. ಸ್ನೇಹಿತನ ತಂಗಿಗೆ ಮಗು ಆಗಿತ್ತು. ಹೀಗಾಗಿ ಮಗುವನ್ನು ನೋಡುವುಕ್ಕೆಂದು ಹೋಗಿದ್ದರು. ಸ್ಮೇಹಿತರು ಎನ್ನುವುದಕ್ಕಿಂತ ಫ್ಯಾಮಿಲಿಯಂತೆ ಇದ್ದ ಕಾರಣ, ಸ್ನೇಹಿತನ ತಂಗಿಯ ಮಗುವನ್ನು ನೋಡಲು ಹೋಗಿ, ಪ್ರಾಣವನ್ನೇ ಕಳೆದುಕೊಂಡಿದ್ದಾರ

ಮೃತ ಸ್ನೇಹಿತರು ಸೇರಿದಂತೆ ಹತ್ತು ಜನ ಮಗುವನ್ನು ನೋಡುವುದಕ್ಕೆ ಹೋಗಿದ್ದರು. ರಾತ್ರಿ ತೋಟದ ಮನೆಗೆ ಹೋಗಿ ಪಾರ್ಟಿ ಮಾಡುವುದಕ್ಕೆ ಶುರು ಮಾಡಿದ್ದರು. ಆ ಅಮಲಿನಲ್ಲಿ ಕೃಷಿ ಹೊಂಡ ಇದ್ದದ್ದು ಕಣ್ಣಿಗೆ ಕಂಡಿಲ್ಲ. ಮೊದಲು ಒಬ್ಬ ಸ್ನೇಹಿತ ಕೃಷಿ ಹೊಂಡದ ಬಳಿ ಹೋಗಿದ್ದಾನೆ. ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ತಕ್ಷಣ ಅವನನ್ನು ಕಾಪಾಡುವುದಕ್ಕೆ ಇನ್ನೊಬ್ಬ ಸ್ನೇಹಿತ ಹೋದಾಗ ಅವನು ಹೊಂಡದೊಳಗೆ ಬಿದ್ದಿದ್ದಾನೆ. ಮೇಲಕ್ಕೆ ಎತ್ತುವಷ್ಟರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸಂತಸದ ಸಮಯ ಕಳೆಯಲು ಬಂದು ಇಡೀ ಮನೆ ಮಂದಿಗೆ ದುಃಖ ನೀಡಿದ್ದಾರೆ. ಮೃತರ ಕುಟುಂಬಸ್ಥರ ಕನಸುಗಳು ನುಚ್ಚು ನೂರಾಗಿವೆ. ಮೃತರ ಮನೆಯಲ್ಲಿ ಮೌನ ಆವರಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment