ಸ್ಯಾಂಡಲ್ ವುಡ್ ನಲ್ಲೀಗ ಕಿಚ್ಚನ ಹೆಸರೇಳಿ ವಂಚನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅದರಲ್ಲೂ ದೊಡ್ಡ ಹೆಸರಿರುವ ನಂದ ಕಿಶೋರ್ ಈ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಯುವನಟ ಶಬರೀಶ್ ಶೆಟ್ಟಿ ಎನ್ನುವವರು ಈ ಆರೋಪ ಮಾಡಿದ್ದಾರೆ. ನಾನು ಹಣ ಕೇಳಿದಾಗೆಲ್ಲ ಸುದೀಪ್ ಸರ್ ಹೆಸರೇಳಿ ಯಾಮಾರಿಸುತ್ತಿದ್ದಾರೆ ಎಂದಿದ್ದಾರೆ.
ಅಷ್ಟಕ್ಕೂ ಏನಿದು ಆರೋಪ, 2016ರಲ್ಲಿ ನಂದ ಕಿಶೋರ್ ನನಗೆ ಪರಿಚಯವಾಗಿದ್ರು. ಜಿಮ್ ಒಂದರಲ್ಲಿ ಪರಿಚಯವಾದ್ರು. ನಾನು ನಂದ ಕಿಶೋರ್ ಅವರಿಗೆ ಆ ಸಮಯದಲ್ಲಿ 22 ಲಕ್ಷ ಹಣ ಕೊಟ್ಟಿದ್ದೀನಿ. ಆದರೆ 9 ವರ್ಷಗಳಿಂದ ನಂದ ಕಿಶೋರ್ ಹಣವನ್ನ ಹಿಂದಿರುಗಿಸುತ್ತಿಲ್ಲ. ಹಣ ಕೇಳಿದರೆ ಧಮ್ಕಿ ಹಾಕ್ತಾರೆ. ಅಷ್ಟೇ ಅಲ್ಲ ಹಣ ಕೇಳಿದಾಗೆಲ್ಲ ಸುದೀಪ್ ಸರ್ ಹೆಸರು ಹೇಳಿ ಯಾಮಾರಿಸುತ್ತಿದ್ದಾರೆ.
ಸುದೀಪ್ ಸರ್ ಸಿನಿಮಾದಲ್ಲಿ ಅವಕಾಶ ಕೊಡುತ್ತೇನೆ ಎಂದು ಹೇಳಿ ಯಾಮಾರಿಸುತ್ತಿದ್ದಾರೆ. ಆದ್ರೆ ಇತ್ತ ನನಗೆ ಹಣವೂ ಕೊಡ್ತಿಲ್ಲ, ಸಿನಿಮಾದಲ್ಲಿ ಅವಕಾಶವನ್ನು ಕೊಡ್ತಾ ಇಲ್ಲ. ನಾನು ಸಿಸಿಎಲ್ ನಲ್ಲಿ ಆಡುವ ಕನಸು ಕಟ್ಟಿಕೊಂಡಿದ್ದೆ. ಕೆಸಿಸಿ ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದರೆ ನಿನ್ನ ಕೆಸಿಸಿಯಿಂದ ಹೊರ ಹಾಕ್ತೀನಿ ಅಂತ ಬೆದರಿಕೆ ಹಾಕುತ್ತಿದ್ದರು. ನಾನು ಸುದೀಪ್ ಸರ್ ಜೊತೆಗೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗಿದ್ದೆ. ಈಗ ನನ್ನ ರಾಮಧೂತ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣವಿಲ್ಲ. ನನ್ನ ಹಣ ವಾಪಸ್ ಕೊಎಇ ಅಂದ್ರೆ ಏನ್ ಮಾಡ್ಕೊಳ್ತಿಯೋ ಮಾಡ್ಕೊ ಎನ್ನುತ್ತಾರೆ ಎಂದು ನೋವು ಹೊರ ಹಾಕಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














