ದಾವಣಗೆರೆ: ಜಾತಿಗಣತಿಯ ಮರು ಸಮೀಕ್ಷೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗ್ತಾ ಇದೆ. ಮೊದಲು ಬಂದ ಸಮೀಕ್ಷೆಯನ್ನ ಸಾಕಷ್ಟು ಜನ ವಿರೋಧಿಸಿದ್ದರು. ಹತ್ತು ವರ್ಷ ಹಳೆಯ ಸಮೀಕ್ಷೆ ಇದು. ಹೀಗಾಗಿ ಇಂದಿನ ಸಮಯಕ್ಕೆ ಸರಿ ಹೊಂದುವುದಿಲ್ಲ ಎಂದೇ ವಿರೋಧ ಮಾಡಿದ್ದರು. ಸಮೀಕ್ಷೆ ವೈರಲ್ ಆಗುತ್ತಿದ್ದಂತೆ ಅದರಲ್ಲಿ ಮುಸ್ಲಿಂ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದದ್ದು ಕಂಡು ಬಂದಿತ್ತು. ಇದೀಗ ಮರು ಸಮೀಕ್ಷೆಗೆ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಮರು ಸಮೀಕ್ಷೆಗೆ ರಾಜ್ಯ ಸರ್ಕಾರ ಸೂಚಿಸಿದೆ. ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿದ್ದಾರೆ.

ಅವರು ಜಾತಿ ಗಣತಿ ಮಾಡಲಿ. ನಮ್ಮ ಸಮೀಕ್ಷೆಯೇ ಬೇರೆ. ನಮಗೂ ಅವರಿಗೂ ವ್ಯತ್ಯಾಸ ಏನು ಗೊತ್ತಾ..? ನಾವು ಸೋಷಿಯೋ, ಎಜ್ಯುಕೇಷನಲ್ ಸರ್ವೇ ಮಾಡ್ತಾ ಇರೋದು. ನಾವೂ ಸಾಮಾಜಿಕ ನ್ಯಾಯ ಮಾಡಬೇಕು ಅಂದ್ರೆ ಸೋಷಿಯೋ ಎಜ್ಯುಕೇಷನಲ್ ಅಂಡ್ ಎಕಾನಾಮಿಕ್ ಪರಿಸ್ಥಿತಿ ಗೊತ್ತಿರಬೇಕು. ಅದು ಗೊತ್ತಿಲ್ಲದೆ ಹೋದರೆ ಸೋಷಿಯಲ್ ಜಸ್ಟಿಸ್ ಮಾಡೋದು ಕಷ್ಟ ಆಗುತ್ತೆ. ಅದಕ್ಕೋಸ್ಕರ ಈ ಸರ್ವೆಯನ್ನ ನಾವೂ ಮಾಡ್ತಾ ಇರೋದು.
ಪ್ರಬಲವರ್ಗದ ಶಾಸಕರಿಂದ ಇದನ್ನ ತಡೆ ಹಿಡಿಯಲಾಗಿದೆ ದಂಬುದರ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಬಲ, ದುರ್ಬಲ ಅಂತಲ್ಲ. ದುರ್ಬಲರು ಆಕ್ಷೇಪಣೆಯನ್ನ ವ್ಯಕ್ಯಪಡಿಸಿದ್ದಾರೆ. ಪ್ರಬಲರು ಆಕ್ಷೇಪಣೆಯನ್ನ ವ್ಯಕ್ತಪಡಿಸಿದ್ದಾರೆ. ಎಲ್ಲದಕ್ಕಿಂತ ಬಹಳ ಮುಖ್ಯವಾಗಿ ಹತ್ತು ವರ್ಷ ಆಗಿದೆ. ಸೆಕ್ಷನ್ 11 ಆಕ್ಟ್ ಪ್ರಕಾರ ಹತ್ತು ವರ್ಷ ಆಗಿದ್ರೆ ವರದಿ ಹೊಸ ವರದಿಯನ್ನ ಮಾಡಬೇಕು. ಹೀಗಾಗಿ ಸಮೀಕ್ಷೆಯನ್ನ ಮಾಡಿಸ್ತಾ ಇದ್ದೇವೆ. ಆದಷ್ಟು ಬೇಗ ಸಮೀಕ್ಷೆಯನ್ನು ಶುರು ಮಾಡಬೇಕೆಂದು ಹೇಳಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
















