ಸುದ್ದಿಒನ್, ಚಿತ್ರದುರ್ಗ, ಜೂನ್. 12 : ನಗರದ ಮಹೇಶ್ವರಿ ಲೇಔಟಿನಲ್ಲಿರುವ ಸಾಯಿಬಾಬಾ ದೇವಸ್ಥಾನದ ಎದುರಿಗೆ, ಬಿಸಿಎಂ ಹಾಸ್ಟಲ್ ಪಕ್ಕ ಪೀಸ್ ಪಾರ್ಕ್ ನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಯೋಗ ಮತ್ತು ಯೋಗಾಸನ ಶಿಬಿರವನ್ನು ಆಯೋಜಿಸಲಾಗಿದೆ. ಯೋಗ ಗುರುಗಳಾದ ಡಾಕ್ಟರ್ ರಚನಕ್ಕ ಬ್ಯಾಚುಲರ್ ಇನ್ ನೇಚರೋಪತಿ ಹಾಗೂ ಯೋಗ ಸೈನ್ಸ್ ಇವರು ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ತುಂಬಾ ಮಾರ್ನಿಕವಾಗಿ ಯೋಗಾಸನವನ್ನು ಕಲಿಸಲಿದ್ದಾರೆ. ಸಾರ್ವಜನಿಕರು ಉಚಿತವಾಗಿ ನಡೆಯುವ ಈ ಶಿಬಿರದ ಲಾಭವನ್ನು ಪಡೆಯಬೇಕಾಗಿ ವಿನಂತಿ.ದಿನಾಂಕ 12.6.2025 ರಿಂದ 21.6.2025 ರವರೆಗೆಸಮಯ ಬೆಳಿಗ್ಗೆ 5:30 ರಿಂದ 6:30 ಸಂಜೆ 6.00ರಿಂದ 7.00ರವರೆಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















