ಬೆಂಗಳೂರು; ಹಳೇ ಕೇಸಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ತೆಲಂಗಾಣ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ. 10 ಲಕ್ಷ ರೂಪಾಯಿ ಮೌಲ್ಯದ ಎರಡು ಶ್ಯೂರಿಟಿಗಳನ್ನ ನೀಡಲು ಸೂಚನೆ ನೀಡಲಾಗಿದೆ. ಜೈಲಿನಲ್ಲಿಯೇ ಇದ್ದು ಬಿಡುತ್ತಾರೇನೋ ಎಂಬ ಆತಂಕದಲ್ಲಿದ್ದ ಅವರ ಬೆಂಬಲಿಗರಿಗೆ ಈಗ ನಿರಾಳವಾಗಿದೆ.
ಷರತ್ತು ಬದ್ಧ ಜಾಮೀನು ನೀಡಿರುವ ಕಾರಣ, ಯಾವೆಲ್ಲಾ ಷರತ್ತನ್ನ ವಿಧಿಸಿದೆ ಎಂಬ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ. ತೆಲಂಗಾಣ ಹೈಕೋರ್ಟ್, ಜನಾರ್ದನ ರೆಡ್ಡಿ ಅವರಿಗೆ, ಭಾರತ ಬಿಟ್ಟು ಹೋಗುವಂತಿಲ್ಲ ಎಂದು ಸೂಚನೆ ನೀಡಿದೆ. ಅಂದ್ರೆ ಭಾರತ ಬಿಟ್ಟು ಹೋಗುವುದಕ್ಕೆ ಅನುಮತಿಯನ್ನು ನೀಡಿಲ್ಲ. ಜನಾರ್ದನ ರೆಡ್ಡಿ ಅವರ ಬಳಿ ಇರುವ ಪಾಸ್ ಪೋರ್ಟ್ ಅನ್ನು ವಶಕ್ಕೆ ಪಡೆಯುವಂತೆ ಸೂಚನೆಯನ್ನು ನೀಡಿದೆ. ಈ ಮುಂಚೆ ಬಳ್ಳಾರಿಗೆ ಬರುವುದಕ್ಕೂ ಅನುಮತಿ ಇರಲಿಲ್ಲ. ಇತ್ತೀಚೆಗೆ ಬಳ್ಳಾರಿಗೆ ಅನುಮತಿ ಸಿಕ್ಕಿತ್ತು.
ಆಂಧ್ರದಲ್ಲಿ ವೈ ಎಸ್ ರಾಜಶೇಖರ ರೆಡ್ಡಿ ಹಾಗೂ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಂತ ಸಂದರ್ಭದಲ್ಲಿ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣ ಬೆಳಕಿಗೆ ಬಂದಿತ್ತು. ಆಂಧ್ರ – ಕರ್ನಾಟಕದ ಗಡಿಗೆ ಹೊಂದಿಕೊಂಡ ಓಬಳಾಪುರ.. ಬೆಟ್ಟದಲ್ಲಿ ಅದಿರಿನ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಓಬಳಾಪುರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 884 ಕೋಟಿ ಅಕ್ರಮ ಎಸಗಿರೋದು ಸಾಬೀತಾಗಿದೆ. ಒಟ್ಟು 29 ಲಕ್ಷ ಟನ್ ಅದಿರು ಲೂಟಿ ಆಗಿತ್ತು. ಪ್ರಕರಣದ ವುಚಾತಣೆ ನಡೆಸಿದ್ದ ಸಿಬಿಐನ ವಿಶೇಷ ಕೋರ್ಟ್, ಶ್ರೀನಿವಾಸ ರೆಡ್ಡಿ, ಜನಾರ್ದನ ರೆಡ್ಡಿ, ಅಲಿಖಾನ್ ಸೇರಿದಂತೆ ಹಲವರು ದೂಷಿಗಳಾಗಿದ್ದರು. ಶಿಕ್ಷೆಯ ಪ್ರಮಾಣವಾಗಿ 5 ಅಪರಾಧಿಗಳಿಗೆ ತಲಾ 7 ವರ್ಷ ಜೈಲು ಶಿಕ್ಚೆ ಪ್ರಕಟ ಮಾಡಿತ್ತು.






