ಸರ್ಕಾರಿ ಶಾಲೆಗಳು ಅವಸಾನದ ಅಂಚಿಗೆ ಸರಿಯುತ್ತಿರುವುದು ಬಹಳ ವರ್ಷಗಳಿಂದಾನೇ ನಡೆಯುತ್ತಿವೆ. ಆದರೆ ಎಲ್ಲರೂ ಶ್ರೀಮಂತರೇ ಆಗಿರೋದಿಲ್ಲ, ಎಲ್ಲರಿಗೂ ಖಾಸಗಿ ಶಾಲೆಗಳಲ್ಲಿ ಓದಿಸುವ ಶಕ್ತಿ ಇರುವುದಿಲ್ಲ. ಈಗಲೂ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿದ್ದಾರೆ. ಅಂತಹ ಒಂದು ಘಟನೆ ಉತ್ತರ ಕರ್ನಾಟಕ ಭಾಗದಲ್ಲಿ ನಡೆದಿದೆ. ಸರ್ಕಾರಿ ಶಾಲೆಯ ಮಕ್ಕಳ ಉಳಿವಿಗಾಗಿ ಹೋರಾಡಿದ ಶಿಕ್ಷಕನಿಗೆ ರಾಜ್ಯ ಸರ್ಕಾರ ಶಿಕ್ಷೆ ನೀಡಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆ ಇದ್ದ ಕಾರಣ, ಅಲ್ಲಿನ ಶಿಕ್ಷಕರಾದ ವೀರಣ್ಣ ಮಡಿವಾಳ ಅವರು ಮಕ್ಕಳಿಗಾಗಿ ನಾಲ್ಕು ಕೊಠಡಿಗಳನ್ನ ನೀಡುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಸಾತ್ವಿಕ ಪ್ರತಿಭಟನೆಯನ್ನು ಮಾಡಿದ್ದಾರೆ. ಆದರೆ ಈ ವಿಚಾರಕ್ಕೆ ರಾಜ್ಯ ಸರ್ಕಾರ ಆ ಶಿಕ್ಷಕನನ್ನ ಅಮಾನತು ಮಾಡಿದೆ. ಮಕ್ಕಳ ಶಿಕ್ಷಣದ ವಿಚಾರಕ್ಕೆ ಸಾತ್ವಿಕ ಪ್ರತಿಭಟನೆ ನಡೆಸಿದ್ದರು. ಆದರೆ ಅದನ್ನು ಅಶಿಸ್ತು ಎಂದು ರಾಜ್ಯ ಸರ್ಕಾರ ಅಮಾನತು ಮಾಡಿದೆ.
ಅಮಾನತು ಆದೇಶವನ್ನ ವಾಪಾಸ್ ಪಡೆಯುವುದಾಗಿಯೂ ಹೇಳಿದ್ದ ಸರ್ಕಾರ, ಈಗ ಆ ಬಗ್ಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತಿಲ್ಲ. ಜನರ ಸಹಾಕಾರದಿಂದ ಕಟ್ಟಿದ ನನ್ನ ಶಾಲೆಗೆ ಇಂದು ನಾನೇ ಅಪರಿಚಿತನಾಗಿದ್ದೇನೆ. ಶಾಲೆಗೆ ಕೆಲ ದಾಖಲೆಗಳನ್ನು ತರಲು ಹೋದಾಗ ನನ್ನ ಇನ್ಚಾರ್ಜ್ ನಲ್ಲಿದ್ದ ಶಿಕ್ಷಕರು, ಅವರ ಲೆಟರ್ ತಗೊಂಡು ಬಾ ಇವರ ಲೆಟರ್ ತಗೊಂಡು ಬಾ ಅಂತ ಅವಮಾನಿಸಿದರು. ಅಲ್ಲಿನ ಒಂದೊಂದು ವಸ್ತುವು ಯಾರದ್ದೋ ನಂಬಿಕೆ ಹಾಗೂ ವಿಶ್ವಾಸದಿಂದ ಗಳಿಸಿದಂತವು ಎಂದು ಅಮಾನತುಗೊಂಡ ಶಿಕ್ಷಕ ನೋವನ್ನ ಸೋಷಿಯಲ್ ಮೀಡಿಯಾದಲ್ಲಿ ತೋಡಿಕೊಂಡಿದ್ದಾರೆ.






