Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಕ್ಕಾ‌ ಪ್ಲ್ಯಾನ್ ಮಾಡಿ ಮುಗಿಸಿದ್ರು : ಜೈಲಿಂದ ಹೊರ ಬಂದ ಮಡೆನೂರು ಮನು ಹೇಳಿದ್ದೇನು..?

---Advertisement---

ಬೆಂಗಳೂರು; ಅತ್ಯಾ*ರ ಆರೋಪದ ಮೇಲೆ ಪರಪ್ಪನ ಅಗ್ರಹಾರ ಸೇರಿದ್ದ ಮಡೆನೂರು ಈಗ ರಿಲೀಸ್ ಆಗಿದ್ದಾರೆ. ಅತ್ಯಾ*ರ ಕೇಸಲ್ಲಿ ತಗಲಾಕಿಕೊಂಡ ಮೇಲೆ‌ ಮಡೆನೂರು ಮನು ಬಗೆಗಿನ ಕೆಲವೊಂದು ಆಡಿಯೋಗಳು ವೈರಲ್ ಆದ ಬಳಿಕ, ಚಿತ್ರರಂಗದಿಂದಾನೇ ಬ್ಯಾನ್ ಮಾಡಿದ್ದಾರೆ. ಇಂದು ಜೈಲಿನಿಂದ ರಿಲೀಸ್ ಆದ ಮಡೆನೂರು ಮನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪಕ್ಕಾ ಪ್ಲ್ಯಾನ್ ಮಾಡಿ ನನ್ನನ್ನ ಮುಗಿಸಿದ್ದಾರೆ. ನಾನು ಸಾಮಾನ್ಯ ಹಳ್ಳಿ ಹುಡುಗ. ಮೂರು ವರ್ಷಗಳ ಕಾಲ ಹಗಲಿರುಳು ಕಷ್ಟಪಟ್ಟು ಕೆಲಸ‌ ಮಾಡಿದ್ದೆ. ಆದರೆ ನನ್ನ ಜೊತೆಗೆ ಇದ್ದವರೇ ಕೇಸದ ಮಾಡಿದ್ದರು. ಇನ್ನೂ ಮೇಲೆಳದಂತೆ ಪಕ್ಕಾ‌ ಪ್ಲ್ಯಾನ್ ಮಾಡಿಕೊಂಡು ನನ್ನ ಮುಗಿಸಿದ್ದಾರೆ. ನಾನು ಜೈಲಿಗೆ ಹೋಗುವ ಮುನ್ನ ನನಗೆ ಕರೆ ಮಾಡಿದ್ದರು. ನೀನು ಅತ್ಯಾಚಾರದ ಕೇಸಲ್ಲಿ ಹೊರಗೆ ಬಂದರೆ ನಿನ್ನ ವಿರುದ್ಧ ನಾವೂ ಇನ್ನೊಂದು ಪ್ಲ್ಯಾನ್ ಮಾಡಿದ್ದೇವೆ ಎಂದರು. 50 ಸಾವಿರ ಕೊಟ್ಟು ಆಡಿಯೋ ರೆಡಿ ಮಾಡಿದ್ದೇವೆ ಎಂದರು ಎಂದು ವೈರಲ್ ಆದ ಆಡಿಯೋ ಬಗ್ಗೆ ಮಾತನಾಡಿದ್ದಾರೆ.

ಮಡೆನೂರು ಮನು ಅವರನ್ನ ಇಡೀ ಚಿತ್ರರಂಗ ದ್ವೇಷ ಮಾಡುವುದಕ್ಕೆ ಕಾರಣ ಆ ಒಂದು ಆಡಿಯೋ. ಶಿವಣ್ಣನ ಸಾವನ್ನ ಬಯಸಿದ್ದರು. ದರ್ಶನ್, ಧ್ರುವ ನಂತರ ನಾನೇ ಎಂದಿದ್ದರು. ಕನ್ನಡ ಇಂಡಸ್ಟ್ರಿಯ ಜೀವಾಳವಾಗಿರುವ ಶಿವಣ್ಣರ ಸಾವನ್ನ ಬಯಸಿದ್ದಕ್ಕೆ ಫಿಲ್ಮ್ ಚೇಂಬರ್ ಕೂಡ ಮಡೆನೂರು ಮನು ಅವರನ್ನ ದೂರ ಇಡಬೇಕೆಂದು ನಿರ್ಧಾರ ಮಾಡಿದೆ. ಇದೀಗ ಜೈಲಿನಿಂದ ಹೊರಗೆ ಬಂದಿರುವ ಮಡೆನೂರು ಮನು ಏನ್ ಮಾಡ್ತಾರೆ ನೋಡಬೇಕಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment