ಬೆಂಗಳೂರು; 18 ವರ್ಷದ ಕನಸು ನನಸಾಗಿದೆ. ಇಡೀ ಆರ್ಸಿಬಿ ಅಭಿಮಾನಿಗಳು ರಾತ್ರಿಯೇ ನಿದ್ದೆಗೆಟ್ಟು ಸೆಲೆಬ್ರೇಷನ್ ಮಾಡ್ತಿದ್ದಾರೆ. ಇಂದು ಐಪಿಎಲ್ ಟ್ರೋಫಿ ಬೆಂಗಳೂರಿಗೆ ಬರ್ತಾ ಇದೆ. ಇಡೀ ಬೆಂಗಳೂರಿನಾದ್ಯಂತ ಟ್ರೋಫಿ ಮೆರವಣಿಗೆ ಮಾಡಲಿದ್ದಾರೆ ಎಂದೇ ಭಾವಿಸಲಾಗಿತ್ತು. ಟ್ರೋಫಿ ನೋಡಲು ಜನ ಕಾತುರದಿಂದ ಕಾಯ್ತಾ ಇದ್ದರು. ಆದರೆ ಎಲ್ಲಾ ಆರ್ಸಿಬಿ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಟ್ರೋಫಿಯ ಮೆರವಣಿಗೆಯನ್ನು ಬೆಂಗಳೂರಲ್ಲಿ ರದ್ದು ಮಾಡಲಾಗಿದೆ. ವಿಧಾನಸೌಧದಲ್ಲಿ ಆರ್ಸಿಬಿ ತಂಡಕ್ಕೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾವಿದೆ.
ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕ್ಯೂ ನಿಂತಿದ್ದಾರೆ. ಟ್ರೋಫಿ ನೋಡುವುದಕ್ಕೆ ಜನಸಾಗರವೇ ನೆರೆದಿದೆ. ಆರ್ಸಿಬಿ ಜೆಸ್ರಿ ಹಾಕಿ, ಬಾವುಟ ಹಾರಿಸುತ್ತಾ ಎಂಜಾಯ್ ಮಾಡ್ತಾ ಇದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಅಭಿಮಾನಿಗಳ ಜೊತೆಗೆ ಆರ್ಸಿಬಿ ತಂಡ ಕೂಡ ಎಂಜಾಯ್ ಮಾಡಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿಗೆ ಜೈಕಾರದ ಘೋಷಣೆ ಕೂಗು ಕೇಳಿ ಬರ್ತಾ ಇದೆ.
ಈಗಾಗಲೇ ಬೆಂಗಳೂರು ತಲುಪಿರುವ ಆರ್ಸಿಬಿ ತಂಡ ಖಾಸಗಿ ಹೊಟೇಲ್ ನಲ್ಲಿ ವಿಶ್ರಾಂತಿ ಪಡೆದು, ಬಳಿಕ ವಿಧಾನಸೌಧ ತಲುಪಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಆರ್ಸಿಬಿ ತಂಡದ ಆಟಗಾರರಿಗೆ ಸನ್ಮಾನ ಮಾಡಲಿದ್ದಾರೆ. ಬಳಿಕ ಸಂಜೆ ವೇಳೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಕೂಡ ನಡೆಯಲಿದೆ. ಇದು ಹದಿನೆಂಟು ವರ್ಷಗಳ ಕನಸು. ಈ ಬಾರಿಯ ಐಪಿಎಲ್ ನಲ್ಲಿ ನನಸಾಗಿದೆ. ರಾತ್ರಿಯಂತು ಭಾವನಾತ್ಮಕ ಸನ್ನಿವೇಶ ಎಲ್ಲರಲ್ಲೂ ಕಾಡಿತ್ತು. ಆರ್ಸಿಬಿ ಗೆದ್ದ ಕೂಡಲೇ ಎಲ್ಲರ ಕಣ್ಣಲ್ಲೂ ನೀರು ಹೊರ ಬಂತು. ಹದಿನೆಂಟು ವರ್ಷಗಳಿಂದ ಕಾದಿದ್ದ ಗೆಲುವು ಭಾವನಾತ್ಮಕ ಸನ್ನಿವೇಶವನ್ನೆರ ಸೃಷ್ಟಿ ಮಾಡಿತ್ತು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















