Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉದ್ಯೋಗ ವಾರ್ತೆ : ಅರೆ ಕಾಲಿಕ ಶಿಕ್ಷಕರ ಸೇವೆಗೆ ಅರ್ಜಿ ಆಹ್ವಾನ

---Advertisement---

 

ದಾವಣಗೆರೆ. ಜೂನ್.04: ಕೇಂದ್ರ ಸರ್ಕಾರದ ಮಿಷನ್ ವಾತ್ಸಲ್ಯ 2022ರ ಮಾರ್ಗಸೂಚಿಯಡಿ ಬಾಲಕ, ಬಾಲಕಿಯರ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ 2025-26ನೇ ಸಾಲಿಗೆ ವಿಜ್ಞಾನ, ಗಣಿತ, ದೈಹಿಕ ಅಥವಾ ಯೋಗ, ಸಂಗೀತ, ಕ್ರಾಫ್ಟ್, ಮತ್ತು ಪಾಠ ಹೇಳುವ ಅರೆಕಾಲಿಕ ಶಿಕ್ಷಕರ ಸೇವೆಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ ವಿವರ:
ವಿಜ್ಞಾನ, ಗಣಿತ ಮತ್ತು ಪಾಠ ಹೇಳುವ ಅರೆಕಾಲಿಕ ಶಿಕ್ಷಕರ ವಿಷಯದಲ್ಲಿ ತಲಾ 2 ಹುದ್ದೆಗಳಿದ್ದು, ಬಿಎಸ್ಸಿ, ಬಿಎಡ್ ಮತ್ತು ದೈಹಿಕ, ಯೋಗ ವಿಷಯದಲ್ಲಿ 2 ಹುದ್ದೆಗಳಿಗೆ ಸಿಪಿಎಡ್, ಬಿಪಿಎಡ್ ವಿದ್ಯಾರ್ಹತೆ ಹೊಂದಿರಬೇಕು. ಸಂಗೀತ, ಕ್ರಾಫ್ಟ್ ವಿಷಯದಲ್ಲಿ ಡಿಪ್ಲೋಮ, ಸಂಗೀತ, ಕ್ರಾಫ್ಟ್ ಮತ್ತು ಕಲೆಯಲ್ಲಿ ಪದವಿ ಪಡೆದಿರಬೇಕು. ಅಲ್ಲದೆ ಈ ಮೇಲ್ಕಂಡ ಹುದ್ದೆಗಳಿಗೆ 1 ವರ್ಷದ ಅನುಭವದೊಂದಿಗೆ 25 ರಿಂದ 55 ವರ್ಷದ ವಯೋಮಾನದೊಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಬಾಲಕಿಯರ ಸರ್ಕಾರಿ ಬಾಲ ಮಂದಿರ ಸಂಸ್ಥೆಗಳಿಗೆ ಕಡ್ಡಾಯವಾಗಿ ಮಹಿಳಾ ಅಭ್ಯರ್ಥಿಗಳು ಇದೇ ಜೂನ್ 20ರ ಸಂಜೆ 5.30ರೊಳಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಅಪೂರ್ಣ ಮತ್ತು ವಿಳಂಬವಾಗಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...