ಬೆಂಗಳೂರು; ಮಡೆನೂರು ಮನು ಈಗಷ್ಟೇ ಸಿನಿಮಾದಿಂದ ಹೀರೋ ಆಗಿ ಹೊರ ಹೊಮ್ಮಿರುವ ನಟ. ರಿಲೀಸ್ ಆದ ಮೊದಲ ಸಿನಿಮಾವನ್ನೇ ಥಿಯೇಟರ್ ನಲ್ಲಿ ಕೂತು ನೋಡುವ ಯೋಗವನ್ನೇ ಪಡೆದುಕೊಂಡು ಬಂದಿರಲಿಲ್ಲ. ಅತ್ಯಾ*ರ ಕೇಸಲ್ಲಿ ಪೊಲೀಸ್ ಠಾಣೆ ಪಾಲಾಗಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮಡೆನೂರು ಮನು ಬಗ್ಗೆ ಸಾಕಷ್ಟು ತನಿಖೆಯನ್ನ ನಡೆಸುತ್ತಿದ್ದಾರೆ. ಆದರೆ ಇದರ ನಡುವೆ ಮಡೆನೂರು ಮನು ಅವರದ್ದೇ ಎಂದು ಹೇಳಲಾದ ಆಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದಾವೆ.
ಇವತ್ತಿನ ಕನ್ನಡ ಇಂಡಸ್ಟ್ರಿಯನ್ನ ಕಾಪಾಡ್ತಾ ಇರೋದು ಅಂದ್ರೆ ಅದು ಶಿವಣ್ಣ ಹಾಗೂ ದರ್ಶನ್. ವರ್ಷಕ್ಕೆ ಎರಡು ಸಿನಿಮಾವಾದರೂ ಕೊಟ್ಟು ನಿರ್ಮಾಪಕರನ್ನ, ಥಿಯೇಟರ್ ಮಾಲೀಕರನ್ನ ಬದುಕಿಸುತ್ತಿದ್ದಾರೆ. ಈ ವರ್ಷ ಶಿವಣ್ಣನಿಗೆ ಆರೋಗ್ಯದ ಸಮಸ್ಯೆ, ದರ್ಶನ್ ಜೈಲಲ್ಲಿದ್ದ ಕಾರಣ ಸಿನಿಮಾಗಳು ತಡವಾಗಿರಬಹುದಷ್ಟೇ. ಇದರ ಜೊತೆಗೆ ಸುದೀಪ್, ಧ್ರುವ ಸರ್ಜಾ, ದುನಿಯಾ ವಿಜಯ್ ಇವರೆಲ್ಲ ಕನ್ನಡ ಚಿತ್ರರಂಗದ ಮುತ್ತುಗಳಿದ್ದಂತೆ. ಅದರಲ್ಲೂ ಶಿವಣ್ಣ ಅವರನ್ನ ಬಹಳ ಗೌರವದಿಂದಾನೇ ಇಡೀ ಇಂಡಸ್ಟ್ರಿ ನೋಡುತ್ತದೆ. ಅವರಿಗೆ ಅನಾರೋಗ್ಯವಾದಾಗ ಎಲ್ಲರೂ ದೇವರಿಗೆ ಕೈಮುಗಿದಿದ್ದಾರೆ. ಹೀಗಿರುವಾಗ ಮಡೆನೂರು ಮನು ಅವರ ಸಾವನ್ನೇ ಬಯಸಿದರೆ ಯಾರಾದ್ರೂ ಕ್ಷಮಿಸ್ತಾರಾ..? ಖಂಡಿತ ಇಲ್ಲ.
ಸದ್ಯ ಮಡೆನೂರು ಮನು ಆಡಿರೋದು ಎನ್ನಲಾದ ಮಾತುಗಳು ವೈರಲ್ ಆಗ್ತಾ ಇದಾವೆ. ಶಿವಣ್ಣನ ಸಾವು, ದರ್ಶನ್ ಮುಗೀತು, ಧ್ರುವ ಕೂಡ ಅಷ್ಟೇ ಎಂಬ ಕೆಟ್ಟ ಮಾತುಗಳನ್ನ ಆಡಿದ್ದಾರೆ. ಒಂದು ವೇಳೆ ಈ ಆಡಿಯೋದಲ್ಲಿ ಆಡಿರುವ ಮಾತುಗಳು ಮಡೆನೂರು ಮನು ಅವರದ್ದೇ ಎಂದಾದರೇ ಇಡೀ ಕನ್ನಡ ಚಿತ್ರರಂಗ ಕ್ಷಮಿಸುವುದಕ್ಕೆ ಹೋಗಲ್ಲ. ಈ ಸಂಬಂಧ ಎಲ್ಲಾ ಜಿಲ್ಲೆಗಳಲ್ಲೂ ಈಗಾಗಲೇ ಮಡೆನೂರು ಮನು ವಿರುದ್ಧ ಡಾ.ರಾಜ್‍ಕುಮಾರ್ ಅಭಿಮಾನಿ ಸಂಘದವರು ಕೇಸನ್ನ ದಾಖಲಿಸುತ್ತಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















