ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ತುಮಕೂರು: ಆ ತಂದೆ ತಾಯಿ ಇಬ್ಬರಿಗೂ ಕಿವಿ ಕೇಳುತ್ತಿರಲಿಲ್ಲ. ಇದ್ದದ್ದು ಒಬ್ಬಳೆ ಮಗಳು. ಮುದ್ದಾಗಿ ಸಾಕಿದ್ದರು. ಆದರೆ ಬೀದಿನಾಯಿಗಳ ಹಾವಳಿಯಿಂದ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ. ಬೀದಿ ನಾಯಿಗಳು ಆ ಮಗುವಿನ ಮೇಲೆ ದಾಳಿ ನಡೆಸುವಾಗ ಕಿರುಚಾಡಿದರು ಕೇಳಲಿಲ್ಲ. ತೀವ್ರವಾಗಿ ದಾಳಿಯಾದ ಹಿನ್ನೆಲೆ ಮಗು ಸಾವನ್ನಪ್ಪಿದೆ. ಈ ಘಟನೆ ನಡೆದಿರೋದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಅಯ್ಯನಭಾವಿ ಕಾಲೋನಿಯಲ್ಲಿ.
6 ವರ್ಷದ ಬಾಲಕಿ ನವ್ಯಾ ಹೀಗೆ ಬೀದಿ ನಾಯಿಗಳ ಹಾವಳಿಗೆ ಪ್ರಾಣ ಬಿಟ್ಟ ಪುಟ್ಟ ಬಾಲಕಿ. ನಿನ್ನೆ ಸಂಜೆ ಈ ಘಟನೆ ನಡೆದಿದೆ. ನಿನ್ನೆ ಸಂಜೆ 5 ಗಂಟೆಯ ಸಮಯ. ನವ್ಯಾಳನ್ನ ಕರೆದುಕೊಂಡು ಆಕೆಯ ತಂದೆ ತೋಟದ ಕಡೆಗೆ ಹೊರಟಿದ್ದರು. ತಂದೆ ಮುಂದೆ ಹೋಗ್ತಾ ಇದ್ರೆ ಬಾಲಕಿ ಹಿಂದೆ ನಡೆಯುತ್ತಾ ಇದ್ದಳು.ಆಗ ಬೀದಿ ನಾಯಿಗಳು ಆ ಪುಟ್ಟ ಬಾಲಕಿಯ ಮೇಲೆ ಅಟ್ಯಾಕ್ ಮಾಡಿವೆ. ನಾಯಿಗಳು ತನ್ನತ್ತ ಓಡಿ ಬರುತ್ತಿದ್ದಂತೆ ಬಾಲಕಿ ನವ್ಯಾ ಕಿರುಚಾಡಿದ್ದಾಳೆ.
ಕಿವಿಕೇಳದ ತಂದೆಗೆ ಆ ಕಡೆಗೆ ಗಮನವೇ ಹೋಗಲಿಲ್ಲ. ಮಗಳು ಹಿಂದೆ ಬರ್ತಾ ಇದಾಳೆ ಬಿಡು ಅಂತ ಮುಂದೆ ಸಾಗಿದ್ದಾರೆ. ಸ್ಥಳೀಯರು ಆ ತಂದೆಯನ್ನ ಎಚ್ಚರಿಸಿದಾಗಲೇ ಮಗಳ ಆ ದೃಶ್ಯ ಕಣ್ಣಿಗೆ ಕಂಡಿದ್ದು. ಅಷ್ಟರಲ್ಲಾಗಲೇ ಆ ಬೀದಿ ನಾಯಿಗಳು ಆ ಪುಟ್ಟ ಬಾಲಕಿಯ ಇಡೀ ದೇಹವನ್ನ ಕಚ್ಚಿ ಹಾಕಿದ್ದವು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ಸೇರಿಸಲು ಹೋದಾಗ ಮಾರ್ಗ ಮಧ್ಯೆಯೇ ಬಾಲಕಿ ಸಾವನ್ನಪ್ಪಿದ್ದಳು. ಮಗಳ ಈ ಸ್ಥಿತಿಗೆ ಇಡೀ ಮನೆ ಮೌನವಾಗಿದೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್