ಬೆಂಗಳೂರು; ಅತ್ಯಾ*ದ ಕೇಸಲ್ಲಿ ನಟ ಮಡೆನೂರು ಮನು ಇದೀಗ ಅರೆಸ್ಟ್ ಆಗಿದ್ದಾರೆ. ಹಾಸನದಲ್ಲಿದ್ದ ಮಡೆನೂರು ಮನು ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಮನು ಜೊತೆಗೆ ಅರೆಸ್ಟ್ ಆಗುವುದಕ್ಕೂ ಮುನ್ನ ವಿಡಿಯೋ ಮಾಡಿದ್ದಾರೆ. ಸಾಕ್ಷಿ ಸಮೇತ ಬರ್ತೇನೆ ಎಂಬುದನ್ನ ಹೇಳಿದ್ದಾರೆ.
ನನ್ನ ಮೇಲೆ ದೂರು ದಾಖಲಾಗಿರೋ ದೂರು ಸಂಬಂಧ ಸಾಕ್ಷಿ ಸಮೇತ ಬರುತ್ತೇನೆ. ಇದರ ಹಿಂದೆ ಯಾರಿದ್ದಾರೆ..? ಸಿನಿಮಾ ನಿಲ್ಲಿಸುವುದಕ್ಕೆ ಯಾರೆಲ್ಲಾ ಏನು ಮಾಡಿದ್ದಾರೆ. ಸಿನಿಮಾ ಬೆದರಿಕೆ ಹಾಕುವುದಕ್ಕೆ ಯಾರೆಲ್ಲಾ, ಹೇಗೆ ಬೆದರಿಕೆ ಹಾಕಿದ್ದಾರೆ. ಪ್ರತಿಯೊಂದಕ್ಕೂ ಸಾಕ್ಷಿ ಸಮೇತ ಬರುತ್ತೀನಿ. ನಮ್ಮ ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ನಿರ್ಮಾಪಕರು ದೊಡ್ಡ ಬಜೆಟ್ ನ ಸಿನಿಮಾ ಮಾಡಿದ್ದಾರೆ. ಎರಡೂವರೆ ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಪರ್ಸನಲ್ ಬೇರೆ, ಪ್ರೊಫೆಷನಲ್ ಬೇರೆ, ಪರ್ಸನಲ್ ವಿಚಾರ ಏನೇ ಇದ್ರು ನಾನು ಬಂದು ಕ್ಲಾರಿಟಿಕೊಡ್ತೀನಿ. ಇದರಿಂದ ಸಿನಿಮಾಗೆ ತೊಂದರೆ ಆಗಬಾರದು ಅಂತ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಮಡೆನೂರು ಮನು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದವರು. ಅದೇ ಶೋನಲ್ಲಿ ಪರಿಚಯವಾಗಿದ್ದ ನಟಿ ಈಗ ಅತ್ಯಾ*ದ ಕೇಸನ್ನ ದಾಖಲಿದ್ದಾರೆ. ಪ್ರೀತಿಯ ನಾಟಕವಾಡಿ, ಮೋಸ ಮಾಡಿದ್ದಾರೆಂದು ದೂರು ದಾಖಲಿಸಿದ್ದಾರೆ. ನಟಿಯ ದೂರಿನ ಅನ್ವಯ ಎಫ್ಐಆರ್ ದಾಖಲಿಸಿದ ಪೊಲೀಸರು ಸದ್ಯ ಅರೆಸ್ಟ್ ಮಾಡಿದ್ದಾರೆ. ನಾಳೆ ಸಿನಿಮಾ ರಿಲೀಸ್ ಆಗ್ತಾ ಇದ್ದು, ಇಷ್ಟು ದಿನ ಪ್ರಮೋಷನ್ ಅಂತ ಓಡಾಡಿದ್ದ ಮನು ಈಗ ಸಿನಿಮಾದ ದಿನ ಸ್ಟೇಷನ್ ನಲ್ಲಿ ಕೂರುವಂತೆ ಆಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














