Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

RCB ಮ್ಯಾಚ್ ಗೆ ಮಳೆ ಅಡ್ಡಿ : ಇನ್ನೆಷ್ಟು ಗಂಟೆಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗಲಿದೆ..?

---Advertisement---

 

ಬೆಂಗಳೂರು; ಈ ಬಾರಿಯ ಐಪಿಎಲ್ ನಲ್ಲಿ ಆರ್ಸಿಬಿ ಉತ್ತಮವಾದ ಪ್ರದರ್ಶನ ನೀಡಿದೆ. ಹೀಗಾಗಿ ಈ ಸಲ ಕಪ್ ಗೆಲ್ಲುವ ಎಲ್ಲಾ ನಿರೀಕ್ಷೆಗಳು ಇದಾವೆ. ಗೆದ್ದೇ ಗೆಲ್ಲುತ್ತಾರೆ ಎಂಬ ಭರವಸೆಯೂ ಇದೆ. ಗೆಲುವಿನ ಸನಿಹದಲ್ಲಿದ್ದ ಆರ್ಸಿಬಿಗೆ ಯುದ್ಧದ ಕಾರಣದಿಂದ ಐಪಿಎಲ್ ಕ್ಯಾನ್ಸಲ್ ಆಗಿತ್ತು. ಇದೀಗ ಎಲ್ಲವೂ ತಹಬದಿಗೆ ಬಂದಿದ್ದು, ಐಪಿಎಲ್ ಮತ್ತೆ ಶುರುವಾಗಿದೆ. ಇಂದಿನ ಆರ್ಸಿಬಿ ಮ್ಯಾಚ್ ತವರಿನಲ್ಲಿಯೇ ನಡೆಯುತ್ತಿದೆ. ಆದ್ರೆ ಮ್ಯಾಚ್ ಗೂ ಮುನ್ನ ಮಳೆಯ ಅವಾಂತರ ಜೋರಾಗಿದೆ. ಇದರಿಂದ ಆರ್ಸಿಬಿ ವರ್ಸಸ್ ಕೆಕೆಆರ್ ಪಂದ್ಯಕ್ಕೂ ಅಡ್ಡಿಯಾಗಿದೆ.

ಹವಮಾನ ವರದಿಯ ಪ್ರಕಾರ ಬೆಂಗಳೂರಿನಲ್ಲಿ ಇನ್ನು 3 ಗಂಟೆಗಳ ಕಾಲ ಇದೇ ರೀತಿ ಸಂಜೆಯಿಂದಾನೇ ಬೆಂಗಳೂರಿನ ಹಲವೆಡೆ ಜೋರು ಮಳೆಯಾಗುತ್ತಿದೆ. ಗುಡುಗು, ಸಿಡಿಲಿನ ಸಮೇತ ಮಳೆಯಾಗುತ್ತಿದೆ. ಆರ್ಸಿಬಿ ಮ್ಯಾಚ್ ನೋಡಲು ಬಂದ ಅಭಿಮಾನಿಗಳಿಗೂ ಸಮಸ್ಯೆ ಎದುರಾಗಿದೆ. ಇದರಿಂದ ಆರ್ಸಿಬಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಸ್ವಲ್ಪ ಸಮಯದಲ್ಲಿಯೇ ಮಳೆ ನಿಲ್ಲಲಿದೆ. ಇದರಿಂದ ಮತ್ತೆ ಪಂದ್ಯ ಶುರುವಾಗಲಿದೆ ಎಂದೇ ಎಲ್ಲರೂ ಕಾತುರದಿಂದ ಕಾಯ್ತಾ ಇದ್ದರು. ಆದರೆ ಈಗ ನೋಡಿದ್ರೆ ಹವಮಾನ ಇಲಾಖೆ ಮುಂದಿನ ಮೂರು ಗಂಟೆಗಳ ಕಾಲ ಮಳೆಯಾಗಲಿದೆ ಎಂಬ ಸೂಚನೆಯನ್ನ ನೀಡಿದೆ. ಇದರಿಂದ ಇಂದು ಒಂದ್ಯ ಆರಂಭವಾಗುವುದೇ ಅನುಮಾನ ಎನ್ನಲಾಗಿದೆ. ಇಂದು ಕೆಕೆಆರ್ ವಿರುದ್ಧ ನಮ್ಮ ಆರ್ಸಿಬಿ ಪಂದ್ಯವನ್ನ ಗೆದ್ದೇ ಗೆಲ್ಲುವ ಭರವಸೆ ಇತ್ತು. ಆ ಮೂಲಕ ತವರಿನಲ್ಲಿಯೇ ಫ್ಲೇ ಆಫ್ ಗೆ ಅಧಿಕೃತವಾಗಿ ಎಂಟ್ರಿ ಪಡೆಯುತ್ತೆ ಎಂಬ ಹುಮ್ಮಸ್ಸನಿಂದ ಇದ್ದ ಆರ್ಸಿಬಿ ಅಭಿಮಾನಿಗಳಿಗೆ ಮಳೆರಾಯ ನೀರೆರೆಚಿದ್ದಾನೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment