Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸುಹಾಸ್ ಶೆಟ್ಟಿ ಕುಟುಂಬಕ್ಕೆ ಕಾಂಗ್ರೆಸ್ ನಾಯಕರು ಸಾಂತ್ವಾನ ಹೇಳಬಾರದು..? ಮುಸ್ಲಿಂ ಮುಖಂಡನ ಆಡಿಯೋ ವೈರಲ್..!

---Advertisement---

 

ಮಂಗಳೂರು; ಮೊದಲೇ ಮಂಗಳೂರು ಉದ್ವಿಗ್ನ ಸ್ಥಿತಿಯಿಂದ ಈಗ ಶಾಂತ ಸ್ಥಿತಿಯತ್ತ ಹೊರಳಿದೆ. ಹೀಗಿರುವಾಗ ಮುಸ್ಲಿಂ ಮುಖಂಡನ ಆಡಿಯೋ ಒಂದು ವೈರಲ್ ಆಗಿದೆ. ಆ ಆಡಿಯೋದಲ್ಲಿ ಸುಹಾಸ್ ಶೆಟ್ಟಿ ಮನೆಗೆ ಸಾಂತ್ವಾನ ಹೇಳುವುದಕ್ಕೆ ಯಾವೊಬ್ಬ ಕಾಂಗ್ರೆಸ್ ಮುಖಂಡನು ಹೋಗಬಾರದೆಂದು ಎಚ್ಚರಿಕೆ ನೀಡಲಾಗಿದೆ.

 

ಒಂದು ವೇಳೆ ಸುಹಾಸ್ ಶೆಟ್ಟಿ‌ ಮನೆಗೆ ಸಾಂತ್ವಾನ ಹೇಳುವುದಕ್ಕೆ ಕಾಂಗ್ರೆಸ್ ಮುಖಂಡರು ಹೋದರೆ ನಾವೆಲ್ಲಾ ಒಗ್ಗಟ್ಟಾಗಿ ಕಾಂಗ್ರೆಸ್ ಗೆ ಸಾಮೂಹಿಕವಾಗಿ ರಾಜೀನಾಮೆ ಕೊಡಬೇಕು ಎಂದು ಮಾತನಾಡಿರುವ ಆಡಿಯೋ ಅದಾಗಿದೆ. ಮುಸ್ಲಿಮರ ವಿರುದ್ಧ ನಡೆ ತೆಗೆದುಕೊಂಡರೆ ವಕ್ಫ್ ಕಾನೂನು ವಿರೋಧಿ ಪ್ರತಿಭಟನೆ ನಡೆಸಲಾಗುವುದು. ಆ ಪ್ರತಿಭಟನೆಯನ್ನು ಮಂಗಳೂರಿನ ಷಾ ಮೈದಾನದಲ್ಲಿಯೇ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮೊದಲೇ ಸುಹಾಸ್ ಶೆಟ್ಟಿ ಕೊಲೆಯ ಬಳಿಕ ವಾತಾವರಣ ಸರಿಯಾಗಿಲ್ಲ. ಹೀಗಿರುವಾಗ ಮುಸ್ಲಿಂ ಮುಖಂಡ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ಸುಹಾಸ್ ಶೆಟ್ಟಿ ಕೊಲೆ ಬಳಿಕ ಮಂಗಳೂರಿನಲ್ಲಿ ಆಕ್ರೋಶದ ಅಲೆ ಜೋರಾಗಿದೆ. ಹಿಂದೂಪರ ಸಂಘಟನೆಯ ಕಾರ್ಯಕರ್ತ, ರೌಡಿಶೀಟರ್ ಆಗಿದ್ದ ಸುಹಾಸ್ ಶೆಟ್ಟಿ ಕೊಲೆಯಿಂದಾಗಿ ಹಿಂದೂಪರ ಸಂಘಟನೆಯವರು ದಕ್ಚಿಣ ಕನ್ನಡವನ್ನು ಬಂದ್ ಕೂಡ ಮಾಡಿದ್ದರು. ಹಲವೆಡೆ ಘರ್ಷಣೆಗಳು ಕೂಡ ನಡೆದಿವೆ. ಅಷ್ಟೇ ಅಲ್ಲ ಚಾಕು ಇರಿತದ ಪ್ರಕರಣಗಳು ನಡೆದಿವೆ. ಮೂರು ಕಡೆ ಚಾಕು ಇರಿತ ಪ್ರಕರಣಗಳು ದಾಖಲಾಗಿದ್ದವು. ಈ ಕೇಸ್ ಗೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದೆ. ಪೊಲೀಸರಿಂದ ಆರೋಪಿಗಳ ವಿಚಾರಣೆಯೂ ನಡೆಯುತ್ತಿದೆ. ಮಂಗಳೂರಿನ ವಾತಾವರಣವೇನೋ ಶಾಂತವಾಗಿದೆ. ಆದರೂ ಈ ರೀತಿಯ ಘಡನೆಗಳು ಬೂದಿ ಮುಚ್ಚಿದ ಕೆಂಡದಂತೆ ಕಾಣಿಸುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...