Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಾರತ VS ಪಾಕ್ ; ಸ್ಪೋಟಕ ಭವಿಷ್ಯ ನುಡಿದ ಕೋಡಿಶ್ರೀ

---Advertisement---

ಸುದ್ದಿಒನ್, ಬೆಂಗಳೂರು, ಮೇ. 01 : ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್ ನಲ್ಲಿ ದಾಳಿ ನಡೆದ ಮೇಲೆ ಪಾಕಿಸ್ತಾನಕ್ಕೆ ಸರಿಯಾದ ಬುದ್ದಿಯನ್ನೇ ಭಾರತ ಕಲಿಸುತ್ತಾ ಇದೆ. ಉಗ್ರರ ದಾಳಿಯಿಂದ 26 ಜನ ಬಲಿಯಾಗಿದ್ದಾರೆ. ಈ ಘಟನೆಯಿಂದ ದೇಶದಾದ್ಯಂತ ಭಾರತೀಯರ ಆಕ್ರೋಶ ಇನ್ನು ಆರಿಲ್ಲ. ಇದೀಗ ಈ ಸಂಬಂಧ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಭಾರತ ಹಾಗೂ ಪಾಕ್ ಯುದ್ಧ ಭೀತಿ ಇದೆ. ಈ ವಿಷಯದಲ್ಲಿ ಕೆಲವೊಂದು ಸ್ಪೋಟಕ ವಿಚಾರಗಳನ್ನು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಉತ್ತರದ ನಾಡಿನಲ್ಲಿ ಹಗೆತನದ ಜ್ವಾಲೆ ಶುರುವಾಗಿ ಸುತ್ತುವರೆದು ಬರುವಾವ ಜಗವೆಲ್ಲಾ ಕೂಳಾದಿತು ಅಂತ ಭವಿಷ್ಯ ನುಡಿದಿದ್ದಾರೆ. ಅಂದ್ರೆ ಭಾರತ ಹಾಗೂ ಪಾಕಿಸ್ತಾನದ ನಡುವಿನ ಈ ಉದ್ವಿಗ್ನ ಸ್ಥಿತಿಯು ಕೇವಲ ಭಾರತ ಮತ್ತು ಪಾಕ್ ನಡುವೆ ಮಾತ್ರವಲ್ಲ ವಿಶ್ವಕ್ಕೆ ಸಂಕಷ್ಟವನ್ನು ತಂದೊಡ್ಡಲಿದೆ. ಇದು ಇನ್ನಷ್ಟು ವಿಷಮ ಸ್ಥಿತಿಯನ್ನು ತಲುಪಿದ್ದೆ. ಮುಂದಿನ ದಿನಗಳಲ್ಲಿ ಬಾರೀ ಸಂಕಷ್ಟ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಅಷ್ಟೇ ಅಲ್ಲ ಈ ಸಮಸ್ಯೆ ಜಗತ್ತಿನಾದ್ಯಂತ ಹೆಚ್ಚಾಗಬಹುದು. ದಕ್ಷಿಣ ಭಾರತವನ್ನೂ ಈ ಸಮಸ್ಯೆ ಆವರಿಸಿಕೊಳ್ಳಲಿದೆ. ಸಾವು – ನೋವು, ಅಸಂತೋಷ, ದುಃಖ ಹಾಗೂ ಜನರ ನಡುವೆ ಮನಸ್ಸು ಕೆಡುವಂತದ್ದು ನಡೆಯುತ್ತದೆ. ಸಾವು ನೋವುಗಳು ಹೆಚ್ಚಾಗುತ್ತವೆ.. ಬೆಂಕಿಯ ಅವಘಡಗಳು ಸಂಭವಿಸುತ್ತವೆ. ಸುನಾಮಿಯಂತಹ ಸಮಸ್ಯೆಗಳು ಬರಬಹುದು. ನೀರು, ಬೆಂಕಿಯಿಂದ ಅನಾಹುತಗಳು ಸಂಭವಿಸಬಹುದು. ವಿಶ್ವಕ್ಕೆ ಕಂಟಕ ಎದುರಾಗಲಿದೆ. ಭೂಕಂಪಗಳು ಸೇರಿದಂತೆ ಸಾವು ನೋವುಗಳು ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕೋಡಿ ಶ್ರೀ ಮಠದ ಶ್ರೀಗಳ ಭವಿಷ್ಯ ಸಾಕಷ್ಟು ಬಾರಿ ನಿಜವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...