ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 24 : ಭಾರತದ ಪ್ರವಾಸಿಗರಿಗೆ ಸ್ವರ್ಗ ಎಂದೆ ಪ್ರಸಿದ್ದಿಯಾಗಿರುವ ಜಮ್ಮು-ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ಭಯೋತ್ಪಾದಕರು ಮಂಗಳವಾರ ನಡೆಸಿರುವ ದಾಳಿಗೆ ಕರ್ನಾಟಕದ ಇಬ್ಬರು ಸೇರಿ 26 ಮಂದಿ ಅಮಾಯಕರು ಬಲಿಯಾಗಿರುವುದನ್ನು ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ತೀವ್ರವಾಗಿ ಖಂಡಿಸಿದ್ದಾರೆ.
ಪಹಲ್ಗಾಮ್‍ನಲ್ಲಿ ಉಗ್ರರು ರಾಜಾರೋಷವಾಗಿ ಓಡಾಡಿಕೊಂಡು ಪ್ರವಾಸಿಗರನ್ನು ಅಮಾನುಷವಾಗಿ ಹತ್ಯೆಗೈದಿರುವುದು ಇಡಿ ಮನುಕುಲವನ್ನೆ ಬೆಚ್ಚಿ ಬೀಳಿಸಿದೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ದಾಳಿ ನಡೆಸಿ ಬಲಿತೆಗೆದುಕೊಂಡಿರುವುದು ಬರೀ ಜೀವವನ್ನಲ್ಲ. ಮನುಷ್ಯತ್ವವನ್ನೇ ಕೊಂದಿದ್ದಾರೆ. ಉಗ್ರಗಾಮಿಗಳು ಯಾರೆ ಆಗಿರಲಿ ಪತ್ತೆಹಚ್ಚಿ ಸದೆ ಬಡಿಯುವ ಹೊಣೆ ಕೇಂದ್ರ ಸರ್ಕಾರದ ಮೇಲಿದೆ. ಭಾರತದ ಪ್ರಧಾನಿ ನರೇಂದ್ರಮೋದಿ ಹಾಗೂ ಗೃಹ ಸಚಿವ ಅಮಿತ್‍ಷಾರವರು ಭಯೋತ್ಪಾದಕರಿಗೆ ಪ್ರತ್ಯುತ್ತರ ನೀಡಿದಾಗ ಮಾತ್ರ ಮೃತರ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆ. ಇನ್ನು ಮುಂದೆ ಜಮ್ಮು-ಕಾಶ್ಮೀರದಲ್ಲಿ ಇಂತಹ ಮನಕಲುಕುವ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸುವುದು ಸೂಕ್ತ ಎಂದು ಆರ್.ಕೆ.ಸರ್ದಾರ್ ಮನವಿ ಮಾಡಿದ್ದಾರೆ.
ಭದ್ರತಾ ವೈಫಲ್ಯವೂ ದಾಳಿಗೆ ಕಾರಣವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ದಾಳಿಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಇಕ್ಬಾಲ್ ಹುಸೇನ್(ಎಂ.ಸಿ.ಓ.) ಬಾಬು ಹೇಳಿಕೆ :
ಭಾರತೀಯರಿಗೆ ಪ್ರವಾಸಿ ತಾಣವಾಗಿರುವ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದರು ಮಂಗಳವಾರ ದಾಳಿ ನಡೆಸಿ 26 ಜನ ಅಮಾಯಕರನ್ನು ಬಲಿತೆಗೆದುಕೊಂಡಿರುವುದನ್ನು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಚೇರ್ಮನ್ ಇಕ್ಬಾಲ್ ಹುಸೇನ್(ಎಂ.ಸಿ.ಓ.) ಬಾಬು ಅತ್ಯುಗ್ರವಾಗಿ ಖಂಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಪಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿರುವುದು ಅತ್ಯಂತ ಹೇಯ ಕೃತ್ಯ. ಐಕ್ಯತೆ ಮತ್ತು ಸಹಬಾಳ್ವೆಗೆ ವಿಶ್ವದಲ್ಲಿಯೇ ಹೆಸರುವಾಸಿಯಾಗಿರುವ ಭಾರತದ ಶಾಂತಿಯನ್ನು ಕದಡುವ ನೀಚ ಕೆಲಸಕ್ಕೆ ಕೈಹಾಕಿರುವ ಭಯೋತ್ಪಾದಕರು ಯಾರೆ ಆಗಿರಲಿ ಎಲ್ಲಿಯೇ ಅಡಗಿಕೊಂಡಿರಲಿ ಪತ್ತೆ ಹಚ್ಚಿ ಸದೆಬಡಿಯುವತನಕ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್‍ಷಾ ಹಾಗೂ ರಕ್ಷಣಾ ಖಾತೆ ಸಚಿವ ರಾಜನಾಥ್‍ಸಿಂಗ್ ಇವರುಗಳು ವಿರಮಿಸಬಾರದು. ಆಗ ಮಾತ್ರ ದಾಳಿಯಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆ.
ಜಮ್ಮು-ಕಾಶ್ಮೀರದಲ್ಲಿ ಇಂತಹ ಅಮಾನವೀಯ ಘಟನೆಗಳು ಮರುಕಳಿಸಬಾರದೆಂದರೆ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿ ಕಟ್ಟೆಚ್ಚರ ವಹಿಸಬೇಕು. ಪಹಲ್ಗಾಮ್ ಕಣಿವೆಯಲ್ಲಿನ ರಮಣೀಯ ದೃಶ್ಯಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲು ಭದ್ರತಾ ಪಡೆಗಳು ಕಣ್ಣಲ್ಲಿ ಕಣ್ಣಿಟ್ಟು ಭಯೋತ್ಪಾದಕರು ನುಸುಳದಂತೆ ನಿಗಾ ಇಡುವಂತೆ






