Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ : ಈಜಲು ಹೋಗಿ ಕಾಲು ಜಾರಿ ಬಿದ್ದು ಬಾಲಕ ಸಾವು…!

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೋಡಿಹಳ್ಳಿ ಟಿ.ಶಿವಮೂರ್ತಿ, ಚಳ್ಳಕೆರೆ
ಮೊ : 97427 56304

ಚಳ್ಳಕೆರೆ, ಏಪ್ರಿಲ್. 23 : ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಏಳು ವರ್ಷದ ಬಾಲಾಜಿ ಕೋಡಿಹಳ್ಳಿಯ ಕೆರೆಯ ಸಮೀಪ ಇರುವ ಪಾಳು ಬಿದ್ದಿರುವ ಬಾವಿಯಲ್ಲಿ ಈಜಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ನಡೆದಿದೆ.

ನಿರಂತರ 8 ಗಂಟೆಗಳ ಕಾಲ ಅಗ್ನಿ ಶಾಮಕ ದಳದ ಸಿಬ್ಬಂದಿ, ಮುಳುಗು ತಜ್ಞರ ಹಾಗೂ ಪೊಲೀಸ್ ಸಹಕಾರದ ಶ್ರಮದ ಫಲ ಶವ ಪತ್ತೆ ಮಾಡಲಾಗಿದೆ.

ಈ ಮುಂಚೆ ತಳಕು ಹೋಬಳಿಯಲ್ಲಿ ಅನೇಕ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಎಲೆಕ್ಟ್ರಿಕ್ ಶಾಕ್, ಕೆರೆಯಲ್ಲಿ ಈಜಲು ಹೋಗಿ, ಸೂಸೈಡ್, ಬಾವಿಯಲ್ಲಿ ಸ್ನಾನ ಮಾಡಲು ಹೋಗಿ, ರಸ್ತೆ ಅಪಘಾತಗಳಲ್ಲಿ, ಮಾನಸಿಕ ಖಿನ್ನತೆಗೆ ಒಳಗಾಗಿ ಇನ್ನು ಜೀವನದಲ್ಲಿ ಬಾಳಿ ಬದುಕಬೇಕು ಎನ್ನುವ ಅದೆಷ್ಟೋ ಹದಿ ಹರೆಯದ ಯುವಕ ಯುವತಿಯರು ಸಾವನ್ನಪ್ಪಿದ್ದಾರೆ, ಅಲ್ಲದೆ ಇಂತಹ ಘಟನೆಗಳು ತಿಂಗಳಲ್ಲಿ ಎರಡು ಮೂರು ಘಟನೆಗಳು ನಡೆಯುತ್ತಲೇ ಇವೆ.

ಅಲ್ಲದೆ ಬೇಸಿಗೆ ರಜೆ ಬಂದಿದೆ ಎಂದರೆ ಪ್ರತಿ ವರ್ಷವು ಸುಮಾರು ವಿದ್ಯಾರ್ಥಿಗಳು ಸಾವಿಗೆ ಶರಣಾತ್ತಿದ್ದಾರೆ ಅದರಲ್ಲೂ ಗ್ರಾಮಿಣ ಪ್ರದೇಶದ ಮಕ್ಕಳು ತುಂಬಾ ಹೆಚ್ಚು ಸಾವನ್ನಪ್ಪುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ.

ಈ ಹಿಂದೆಯೇ ಸರ್ಕಾರ ಬೋರ್ವೆಲ್, ಕೊಳವೆ ಬಾವಿ,ಇನ್ನಿತರೆ ಪಾಳು ಬಾವಿಗಳನ್ನು ಮುಚ್ಚಿಸಲು ಸರ್ಕಾರ ಆದೇಶ ಹೊರಡಿಸಿ ಅನುದಾನವನ್ನು ಬಿಡುಗಡೆ ಮಾಡಿತ್ತು ಆದರೂ ಕೆಲವು ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿಯ ಮಕ್ಕಳ ಸಾವುಗಳು ಮರುಕಳಿಸುತ್ತಲೇ ಇವೆ, ಈಗಲಾದರೂ ಪ್ರತಿ ಗ್ರಾಮದಲ್ಲಿ ಇರುವ ಅನುಪಯುಕ್ತ ಬೋರ್ವೆಲ್ ಮತ್ತು ಕೊಳವೆ ಬಾವಿಗಳು, ಹಾಗೂ ಪಾಳು ಬಾವಿಗಳನ್ನು ಸರ್ವೇ ಮಾಡಿಸಿ ಮುಚ್ಚಿಸಬೇಕು, ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಸರಣಿ ಮಕ್ಕಳ ಸಾವುಗಳಿಗೆ ಇತಿಶ್ರೀ ಹಾಡಬೇಕು ಹಾಗೂ ಸಾರ್ವಜನಿಕರಿಗೆ ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂಬುದೇ ಸುದ್ದಿಒನ್ ಆಶಯ.

ಹಾಗಾದರೆ ಈ ಮಕ್ಕಳ ಸರಣಿ ಸಾವುಗಳನ್ನು ತಡೆಗಟ್ಟುವ ವರು ಯಾರು..? ಮತ್ತು ಹೇಗೆ..? ಎಂಬ ಯಕ್ಷ ಪ್ರಶ್ನೆ ನಮ್ಮನ್ನು ಕಾಡುತ್ತಿದೆ, ಇದಕ್ಕೆ ಸಂಬಂಧಿಸಿದ ವಿವಿಧ ಇಲಾಖೆ ವ್ಯಾಪ್ತಿಯ ಅಧಿಕಾರಿಗಳು ಗ್ರಾಮ ಪಂಚಾಯಿತಿ, ಬೆಸ್ಕಾಂ ಇಲಾಖೆ, ಕೃಷಿ ಇಲಾಖೆ, ತಾಲ್ಲೂಕು ಆಡಳಿತ, ಹಾಗೂ ಜಿಲ್ಲಾ ಮಟ್ಟದ ಆಡಳಿತ ಅಧಿಕಾರಿಗಳು ಈ ಘಟನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ತನಿಖೆ ನಡೆಸಿ, ಈ ಹದಿ ಹರೆಯದ ಜೀವಗಳ ಕುಟುಂಬಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಚಿತ್ರದುರ್ಗದ ದಲಿತ ಸಾಹಿತ್ಯ ಪರಿಷತ್ ನ, ಜಿಲ್ಲಾಧ್ಯಕ್ಷರು ಆದ ಕೋಡಿಹಳ್ಳಿ ಟಿ.ಶಿವಮೂರ್ತಿ ಮನವಿ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment