ಸಾಮಾನ್ಯವಾಗಿ ಬಾಳೆ ಹಣ್ಣನ್ನ ಎಲ್ಲರು ತಿನ್ನುತ್ತಾರೆ. ಅದರಲ್ಲಿ ಏಲಕ್ಕಿ ಬಾಳೆಹಣ್ಣು ದೇಹಕ್ಕೆ ತುಂಬಾನೇ ಮುಖ್ಯವಾದದ್ದು. ಅದರಿಂದ ಸಾಕಷ್ಟು ಲಾಭಗಳಿವೆ. ಹಾಗಾದ್ರೆ ಏಲಕ್ಕಿ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಲಾಭಾಂಶಗಳು ಸಿಗಲಿವೆ ಎಂಬ ಮಾಹಿತಿ ಇಲ್ಲಿದೆ ನೋಡಿ.
* ಮೂಲವ್ಯಾದಿಗೂ ಬಾಳೆ ಹಣ್ಣಿನಲ್ಲಿ ಪರಿಹಾರವಿದೆ. ಅದಕ್ಕಾಗಿ ಬೆಳಗ್ಗೆಯೇ ಎರಡು ಏಲಕ್ಕಿ ಬಾಳೆ ಹಣ್ಣು ತೆಗೆದುಕೊಳ್ಳಿ. ಅದನ್ನು ಸೀಳಿ ಅದರ ನಡುವೆ ಏಲಕ್ಕಿ ಪುಡಿ ತುಂಬಿ ರಾತ್ರಿ ಮಲಗುವ ಮುನ್ನ ಒಂದು ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ತಿಂದರೆ ಖಂಡಿತ ಮೂಲವ್ಯಾದಿ ನಿಯಂತ್ರಣಕ್ಕೆ ಬರುತ್ತದೆ.

* ಹೊಟ್ಟೆಯುಬ್ಬರ ಇದ್ದವರು ಏಲಕ್ಕಿ ಪುಡಿಯನ್ನು ಸೇವಿಸುವುದರಿಂದ ಹೊಟ್ಟೆಯುಬ್ಬರ ಇಳಿಯುತ್ತದೆ.
* ಕಿಡ್ನಿ ಸ್ಟೋನ್ ಇದ್ದವರಿಗೂ ಇದು ರಾಮಬಾಣವಿದ್ದಂತೆ. ಏಲಕ್ಕಿ, ಕಲ್ಲಂಗಡಿ, ಕಲ್ಲು ಸಕ್ಕರೆ ಮೂರನ್ನು ಸೇರಿಸಿ ಪುಡಿ ಮಾಡಿ ಈ ಚೂರ್ಣವನ್ನು ಪ್ರತಿದಿನ ಸೇವಿಸಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಬರುವುದಿಲ್ಲ.
* ನಿಮ್ಮಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ ಅದನ್ನ ದೂರ ಮಾಡುವುದಕ್ಕೆ ಬಹಳ ಉಪಯೋಗವಾಗಲಿದೆ ಏಲಕ್ಕಿ.
* ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಏಲಕ್ಕಿಯನ್ನು ಜಗಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಲಿದೆ.
* ಅಷ್ಟೇ ಅಲ್ಲ ಏಲಕ್ಕಿ ಸೇವಿಸುವುದರಿಂದ ಬಾಯಿಯಿಂದ ಬರುವ ದುರ್ವಾಸನೆ ದೂರವಾಗುತ್ತದೆ. ವಾಸನೆ ಇದೆ ಎನ್ನುವವರು ಆಗಾಗ ಏಲಕ್ಕಿಯನ್ನು ಸೇವಿಸುವುದು ಉತ್ತಮ
* ಇನ್ನು ಏಲಕ್ಕಿಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇದಾವೆ. ಅಂದ್ರೆ ಏಲಕ್ಕಿಯನ್ನು ತಿನ್ನುವುದರಿಂದ ಕ್ಯಾನ್ಸರ್ ನಿಂದ ದೂರ ಇರಬಹುದು.
* ಸಾಮಾನ್ಯವಾಗಿ ಏಲಕ್ಕಿ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ. ಆಗಾಗ ಏಲಕ್ಕಿ ತಿನ್ನುವುದರಿಂದ ಲಾಭವೂ ಹೆಚ್ಚು, ಆರೋಗ್ಯವೂ ಚೆನ್ನಾಗಿರಲಿದೆ. ಈ ಟಿಪ್ಸ್ ಗೂಗಲ್ ಆಧಾರಿತ ಟಿಪ್ಸ್ ಆಗಿರುತ್ತದೆ.
















