ಬೆಂಗಳೂರು; ಶಿವಮೊಗ್ಗದ ಬಿಜೆಪಿ ಸಂಸದ ಬಿವೈ ರಾಘವೇಂದ್ರ ಅವರು ಇಂದು ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದ್ದಾರೆ. ಇದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ಈ ಬಗ್ಗೆ ಬಿವೈ ರಾಘವೇಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ.
ನಮ್ಮ ರಾಜ್ಯದ ಗೌರವಾನ್ವಿತ ಉಪಮುಖ್ಯಮಂತ್ರಿಗಳನ್ನ ಭೇಟಿ ಮಾಡುವುದಕ್ಕೆ ಬಂದಿದೆ. ವಿಶೇಷ ಅಂದ್ರೆ ನಮ್ಮ ಕುಟುಂಬದ ಕಾರ್ಯಕ್ರಮ ಇದು. ನನ್ನ ಮಗನ ಮದುವೆ ಕಾರ್ಯಕ್ರಮ. ಹೀಗಾಗಿ ಆಮಂತ್ರಣ ಪತ್ರಿಕೆ ನೀಡಲು ಬಂದಿದ್ದೆ. ಸಮಯ ನೀಡಿದ್ದರು. ಹೀಗಾಗಿ ಬಂದಿದ್ದೆ. ಇದೇ ಸಮಯದಲ್ಲಿ ನಮ್ಮ ಕ್ಷೇತ್ರದ ಬೇರೆ ಬೇರೆ ಅಭಿವೃದ್ಧಿ ವಿಚಾರವಾಗಿಯೂ ಮಾತನಾಡಿದ್ದೇವೆ. ಬರ್ತೀನಿ ಅಂತ ಹೇಳಿದ್ದಾರೆ. ವೈಯಕ್ತಿಕ ಕಾರ್ಯಕ್ರಮದ ಚರ್ಚೆ ಬಿಟ್ಟರೆ ಬೇರೆ ಇನ್ಯಾವುದು ಇಲ್ಲ. ಆಮಂತ್ರಣ ಕೊಟ್ಟು ಬಂದಿದ್ದೇನೆ ಅಷ್ಟೇ.
ಸಹಜ.. ಅಧಿಕಾರದಲ್ಲಿದ್ದಾಗ, ಸರ್ಕಾರವಿದ್ದಾಗ, ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲರೂ ಬರ್ತಾರೆ. ಕರ್ನಾಟಕ ರಾಜ್ಯ ಸರ್ಕಾರ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ. ಚುನಾಯಿತ ಪ್ರತಿನಿಧಿಗಳು ಬರುವುದು ಹೋಗುವುದು ಸಹಜ. ಅದಕ್ಕೇನು ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ನಾನು ಕೂಡ ನನ್ನ ಮಗನ ಮದುವೆ ವಿಚಾರಕ್ಕೆ ಭೇಟಿ ಮಾಡಿದ್ದೇನೆ. ಆಮಂತ್ರಣ ಪತ್ರಿಕೆ ನೀಡಿದ್ದೇನೆ. ಅವರು ಕೂಡ ಬರ್ತೀನಿ ಅಂತ ಹೇಳಿದ್ದಾರೆ ಎಂದಿದ್ದಾರೆ.
ರಾಜಕೀಯದಲ್ಲಿ ಇದೆಲ್ಲವೂ ಸಹಜವೇ ಸರಿ. ರಾಜಕಾರಣದ ವಿಚಾರಕ್ಕೆ ಏನೇ ಮಾತನಾಡಿದರು ಸಂಬಂಧ, ಕಾರ್ಯಕ್ರಮಗಳು ಅಂತ ಬಂದಾಗ ಎಲ್ಲರು ಒಂದೇ ಟೇಬಲ್ನಲ್ಲಿಯೇ ಕುಳಿತುಕೊಳ್ಳುತ್ತಾರೆ. ಇದು ಸರ್ವೇ ಸಾಮಾನ್ಯ. ರಾಜಕೀಯ ದ್ವೇಷ ಬಿಟ್ಟು ಇದೀಗ ಮಗನ ಮದುವೆಗೆ ಯಡಿಯೂರಪ್ಪ ಅವರ ಪುತ್ರ ಕೂಡ ಡಿಕೆ ಶಿವಕುಮಾರ್ ಅವರನ್ನ ಆಹ್ವಾನ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











