ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 12 : ತಾಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ಶ್ರೀಗುರು ಕೊಟ್ರ ಸ್ವಾಮಿ ರಥೋತ್ಸವ ಏಪ್ರಿಲ್ 15 ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ವಿಜೃಂಭಣೆಯಿಂದ ನೆರವೇರಲಿದೆ. ನಂತರ ಮಧ್ಯಾಹ್ನ 2 ಗಂಟೆಗೆ ಓಕಳಿ ಹಾಗೂ 3 ಗಂಟೆಗೆ ಸ್ವಾಮಿಯ ಗಂಗಾಪೂಜೆ ಪೂರೈಸಿಕೊಂಡು ಪಲ್ಲಕ್ಕಿ ಉತ್ಸವದೊಂದಿಗೆ ದೇವಸ್ಥಾನಕ್ಕೆ ಒಯ್ಯಲಾಗುವುದು.
ರಥೋತ್ಸವದ ಮುನ್ನಾ ದಿನವಾದ ಸೋಮವಾರ ಬೆಳಿಗ್ಗೆ 10 ಗಂಟೆಗೆ ರುದ್ರಾಭಿಷೇಕ, ಇಷ್ಟಲಿಂಗ ಮಹಾಪೂಜೆ, ಸಂಜೆ 4 ಗಂಟೆಗೆ ಕೋಣಂದೂರು ಪುರ ಮಠದ ಸ್ವಾಮೀಜಿಗಳ ಆಶೀರ್ವಚನ ಹಾಗೂ 7 ಗಂಟೆಗೆ ಗುರು ಕೊಟ್ರಸ್ವಾಮಿಯ ಗಣಾರಾಧನೆ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಜುರುಗಲಿದೆ.


















