ವಕ್ಫ್ ತಿದ್ದುಪಡಿ ಮಸೂದೆ ವಿಧೇಯಕ 2025 ಅಂಗೀಕಾರಗೊಂಡಿದೆ. ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಬಹು ಚರ್ಚಿತ ಹಾಗೂ ವಿವಾದಿತ ವಿಧೇಯಕಕ್ಕೆ ಸಂಸತ್ ಅನುಮೋದನೆಯ ಮುದ್ರೆ ಒತ್ತಿದೆ. ಬಜೆಟ್ ಅಧಿವೇಶನ ಅಂತ್ಯವಾಗುವ ಒಂದು ದಿನ ಮೊದಲು ಸಂಸತ್ ಉಭಯ ಸದನದಲ್ಲಿ ಅಂಗೀಕಾರಗೊಂಡಿರುವ ವಿಧೇಯಕ ರಾಷ್ಟ್ರಪತಿಗಳ ಅಂಕಿತದ ಬಳಿಕ ಕಾಯ್ದೆಯಾಗಿ ಜಾರಿಗೆ ಬರಲಿದೆ. ವಕ್ಫ್ ಆಸ್ತಿಗಳ ನಿರ್ವಹಣೆ, ಮೇಲ್ವಿಚಾರಣೆ, ಸುಧಾರಣೆ, ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಜೊತೆಗೆ ಹಳೆಯ ಕಾಯ್ದೆಯಲ್ಲಿದ್ದ ಕೆಲವು ವಿವಾದಾತ್ಮಕ ಅಂಶಗಳನ್ನು ತಿದ್ದುಪಡಿ ವಿಧೇಯಕದಲ್ಲಿ ತೆಗೆದು ಹಾಕಲಾಗಿದೆ.

ದೇಶದಲ್ಲಿ ವಕ್ಫ್ ಆಸ್ತಿ ಸುಮಾರು 8.72 ಲಕ್ಷ ವಕ್ಫ್ ಆಸ್ತಿಗಳಿವೆ. ಇವುಗಳ ವಿಸ್ತೀರ್ಣ 38 ಲಕ್ಷ ಎಕರೆಗಳಿಗಿಂತಲೂ ಹೆಚ್ಚು. ವಕ್ಫ್ ಮ್ಯಾನೇಜ್ಮೆಂಟ್ ಸಿಸ್ಟಮ್ ಆಫ್ ಇಂಡಿಯಾ ಪೋರ್ಟಲ್ ನಲ್ಲಿಯೇ ಈ ಮಾಹಿತಿ ಲಭ್ಯವಿದೆ. ಉತ್ತರ ಪ್ರದೇಶದಲ್ಲಿ ಹೆಚ್ಚು ಆಸ್ತಿ ಇದೆ. ಪಶ್ಚಿಮ ಬಂಗಾಳದಲ್ಲಿ 80,480, ಪಂಜಾಬ್ ನಲ್ಲಿ 75,965, ತಮಿಳುನಾಡಿನಲ್ಲಿ 66,092 ಇದೆ.

ಕರ್ನಾಟಕದಲ್ಲಿಯೂ ವಕ್ಫ್ ಆಸ್ತಿ ಕಡಿಮೆ ಏನು ಇಲ್ಲ. 62,830 ವಕ್ಫ್ ಆಸ್ತಿಗಳು ಇದಾವೆ. ವಕ್ಫ್ ಆಸ್ತಿ ಹೊಂದಿರುವುದರಲ್ಲಿ ನಮ್ಮ ಕರ್ನಾಟಕ ಐದನೇ ಸ್ಥಾನವನ್ನು ಹೊಂದಿದೆ. ಕರ್ನಾಟಕದಲ್ಲಿ 5.96 ಲಕ್ಷ ಎಕರೆ ವಕ್ಫ್ ಜಮೀನು ಇದೆ. ಆದರೆ ಅತಿ ಹೆಚ್ಚು ವಕ್ಫ್ ಆಸ್ತಿ ಹೊಂದಿರುವುದೇ ಉತ್ತರ ಪ್ರದೇಶದಲ್ಲಿ. ವಕ್ಫ್ ಮಂಡಳಿ ಬಳಿ ಆಸ್ತಿ ಎಷ್ಟಿದೆ ಎಂಬುದರ ವಿವರ ಮಾತ್ರ ಲಭ್ಯವಾಗಿಲ್ಲ. ಸದ್ಯ ವಕ್ಫ್ ತಿದ್ದುಪಡಿ ಮಸೂದೆಗೆ ಕೇಂದ್ರ ಸರ್ಕಾರದಿಂದ ಸಂಸತ್ ನಲ್ಲಿ ಅಂಗೀಕಾರ ಸಿಕ್ಕಿದೆ. ರಾಜ್ಯಸಭೆಯಲ್ಲೂ ಅಂಗೀಕಾರ ಸಿಕ್ಕಿದೆ.


