Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹನಿಟ್ರ್ಯಾಪ್ ಪ್ರಕರಣದ ಸದ್ದು ; ಸಚಿವಕಾಂಕ್ಷಿಗಳಿಗೂ ಆಯ್ತಾ ನಿರಾಸೆ..?

---Advertisement---

 

ನವದೆಹಲಿ; ಸಿಎಂ ಸಿದ್ದರಾಮಯ್ಯ ಅವರು ದೆಹಲಿಯ ಪ್ರವಾಸದಲ್ಲಿದ್ದು, ಹೈಕಮಾಂಡ್ ನಾಯಕರಿಗೆ ರಾಜ್ಯದಲ್ಲಾಗುತ್ತಿರುವ ಬೆಳವಣಿಗೆಯ ವರದಿಯನ್ನು ಒಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಸದ್ಯಕ್ಕೆ ಅಧಿಕಾರದ ನಿರೀಕ್ಷೆಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ನಾವೂ ಸಚಿವರಾಗ್ತೀವಿ ಅಂತ ಕಾಯ್ತಾ ಇದ್ದಾರೆ. ಆದರೆ ಈಗ ನೋಡಿದ್ರೆ ಹೈಕಮಾಂಡ್ ಸಚಿವ ಸಂಪುಟ ಪುನರ್ ರಚನೆಗೂ ಬ್ರೇಕ್ ಹಾಕಿದೆ. ನಾಲ್ಕು ಪ್ರಮುಖ ಅಜೆಂಡಾಗಳೊಂದಿಗೆ ಸಿಎಂ ಮತ್ತು ಡಿಸಿಎಂ ದೆಹಲಿಗೆ ತೆರಳಿದ್ದಾರೆ. ಅದರಲ್ಲಿ ಸಚಿವ ಸಂಪುಟ ಪುನರಾರಚನೆಯೂ ಒಂದು. ರಾಹುಲ್ ಗಾಂಧಿ ಜೊತೆ ಭೇಟಿ ವೇಳೆ ಸದ್ಯಕ್ಕೆ ಸಂಪುಟ ಸರ್ಜರಿಗೆ ಕೈ ಹಾಕೋದು ಬೇಡ ಎಂಬ ಚರ್ಚೆ ಆಗಿದ್ಯಂತೆ.

ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ ಅವರು ಒನ್ ಟು ಒನ್ ಸಭೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಕೂತು ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚಿನ ಕಾಲ ವೇಣುಗೋಪಾಲ್ ಜೊತೆಗೆ ಎಂಎಲ್ಸಿ ನಾಮ ನಿರ್ದೇಶನ, ಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧ ಚರ್ಚೆ ನಡೆಸಿದ್ದಾರೆ.

ಹೈಕಮಾಂಡ್ ನಾಯಕರ ಜೊತೆಗೆ ಕೆಲವೊಂದು ವಿಚಾರಗಳು ಚರ್ಚೆಯಾಗಿದ್ದು, ನಾಗೇಂದ್ರಗೆ ಅವಕಾಶ ಮಾಡಿಕೊಡಬೇಕು ಎಂಬ ತೀರ್ಮಾನದ ಬಗ್ಗೆಯೂ ಚರ್ಚೆಯಾಗಿದೆ. ಆದರೆ ನಾಗೇಂದ್ರ ವಿಚಾರದಲ್ಲಿ ಈ ಹಿಂದೆಯೇ ಈ ನಿರ್ಧಾರವಾಗಿತ್ತು. ಒಬ್ಬರಿಗೆ ಅವಕಾಶ ಮಾಡಿಕೊಟ್ಟರೆ. ಬೇರೆ ಸಂದೇಶ ರವಾನೆಯಾಗುತ್ತದೆ ಎಂಬ ಚರ್ಚೆಯೂ ನಡೆದಿದೆ. ಹಾಗೇ ಸರ್ಕಾರದ ಎರಡನೇ ವರ್ಷದ ಆಚರಣೆ ಬಳಿಕ ಸಂಪುಟಕ್ಕೆ ಕೈ ಹಾಕೋಣಾ ಎಂಬುದು ರಾಹುಲ್ ಗಾಂಧಿ ಜೊತೆಯಲ್ಲಿ ಸಿದ್ದರಾಮಯ್ಯ ನಡೆಸಿದ ಚರ್ಚೆಯಲ್ಲಿ ಅಭಿಪ್ರಾಯ ತಿಳಿಸಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...