Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಕ್ಫ್ ತಿದ್ದುಪಡಿ ಮಸೂದೆ ಜಾರಿ ; ರಾಜ್ಯ ಬಿಜೆಪಿ ವಿರುದ್ಧ ಹರಿಹಾಯ್ದ ಪ್ರಮೋದ್ ಮುತಾಲಿಕ್

---Advertisement---

ಹುಬ್ಬಳ್ಳಿ; ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಿದೆ. ಈ ಸಂಬಂಧ ನರೇಂದ್ರ ಮೋದಿ ಸರ್ಕಾರಕ್ಕೆ ಶ್ರೀರಾಮಸೇನೆಯ ಅಧ್ಯಕ್ಷ ಮುತಾಲಿಕ್ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ರಾಜ್ಯ ಬಿಜೆಪಿ ನಾಯಕರ ಮೇಲೆ ವಾಗ್ದಾಳಿಯನ್ನು ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮುತಾಲಿಕ್, ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಭಿನಂದನೀಯ ಹಾಗೂ ಸ್ವಾಗತಾರ್ಹ ಕೆಲಸ ಮಾಡಿದೆ ಎಂದಿದ್ದಾರೆ.

ದೆಹಲಿಯ ಪಾರ್ಲಿಮೆಂಟ್ ನಲ್ಲಿ ಒಂದು ಐತಿಹಾಸಿಕವಾದ ಬಿಲ್ ಬಗ್ಗೆ ಚರ್ಚೆ ಮಾಡಿ, ಮಂಡನೆ ಮಾಡಿ, ಅಂದಿನ ರಾತ್ರಿಯೇ ಪಾಸ್ ಆಗಿದ್ದು ಖುಷಿಯ ವಿಚಾರ. ವಕ್ಫ್ ಬೋರ್ಡ್ ಹೆಸರಿನಲ್ಲಿ ದಶಕಗಳಿಂದಾನು ಸರ್ಕಾರಿ ಜಾಗ, ರೈತರ ಜಾಗ, ಮಠದ ಜಾಗ, ದೇವಸ್ಥಾನದ ಜಾಗ, ದಲಿತರ ಜಾಗ, ಎಂಪಿ, ಎಂಎಲ್ಎಗಳ ಜಾಗವನ್ನು ಅತಿಕ್ರಮಣ ಮಾಡಿ ಲೂಟಿ ಮಾಡುತ್ತಾ ಇದ್ದರು. ಕಂಡ ಕಂಡವರ ಜಮೀನನ್ನು ಲೂಟಿ ಮಾಡುತ್ತಿದ್ದವರಿಗೆ ಕಡಿವಾಣ ಹಾಕಿದಂತೆ ಆಗಿದೆ. ಲೂಟಿಕೋರರ ಪರವಾಗಿ ನಿಂತುಕೊಂಡವರಿಗೆ ನಾಚಿಕೆಯಾಗಬೇಕು. ಅವರು ದೇಶದ್ರೋಹಿಗಳು. ವಕ್ಫ್ ಬೋರ್ಡಗ ಹೆಸರಿನಲ್ಲಿ ಲೂಟಿ ಮಾಡಿದವರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರ ಹೆಸರು ಕೂಡ ನಿನ್ನೆ ಸದನದಲ್ಲಿ ಉಲ್ಲೇಖವಾಗಿದೆ.

ವಕ್ಫ್ ವಿರುದ್ಧ ಬಿಲ್ ಪಾಸ್ ಮಾಡಿದ್ದು ಸಂತಸಕರವಾದದ್ದು. ಯಾರು ಇದನ್ನ ವಿರೋಧಿಸುತ್ತಾ ಇದ್ದಾರೆ ಅವರು ದೇಶದ್ರೋಹಿಗಳು. ವೋಟ್ ಬ್ಯಾಂಕಿಂಗ್ ಓಮದೇ ಅಲ್ಲ. ನಿಮ್ಮ ಅಧಿಕಾರ ಒಂದೇ ಅಲ್ಲ. ದೇಶ ಇದೆ, ಧರ್ಮ ಇದೆ, ಜನ ಇದಾರೆ. ಇವತ್ತು ವಕ್ಫ್ ಬೋರ್ಡ್ ಬಗ್ಗೆ ಮಾತನಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಗುಡುಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...