ಬೆಂಗಳೂರು; ಕನ್ನಡದ ಮಾಣಿಕ್ಯ, ಅಂಜನಿಪುತ್ರ, ಕಿರಿಕ್ ಶಂಕರ, ಮುಕುಂದ ಮುರಾರಿ, ಶಂಕರ್ ಗುರು ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಂತ ಎಂ.ಎನ್.ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 1.25 ಕೋಟಿ ವಂಚನೆ ಪ್ರಕರಣದಲ್ಲಿ ಎಂ.ಎನ್.ಕುಮಾರ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಸದ್ಯ ಎಂ.ಎನ್.ಕುಮಾರ್ ಅವರ ವಿಚಾರಣೆ ನಡೆಯುತ್ತಿದ್ದು, ಬಂಧಿಸುವ ಸಾಧ್ಯತೆಯೂ ಇದೆ. ನಟ ಜಗ್ಗೇಶ್ ಅವರು ದೂರು ನೀಡಿರುವ ಆಧಾರದ ಮೇಲೆ ಅರೆಸ್ಟ್ ಮಾಡಲಾಗಿದೆ ಎನ್ನಲಾಗಿದೆ. ಎಂ.ಎನ್.ಕುಮಾರ್ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣವನ್ನು ಜಗ್ಗೇಶ್ ಅವರು ದಾಖಲಿಸಿದ್ದರು ಎನ್ನಲಾಗಿದ್ದು, ಈಗ ಆ ಕೇಸ್ ಗೆ ಸಂಬಂಧಿಸಿದಂತೆ ಅರೆಸ್ಟ್ ಮಾಡಲಾಗಿದೆ. ಆದರೆ ಆ ಹಣ ಯಾವುದು ಎಂಬ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ.

ಸಾಲ ಏನಾದರೂ ನೀಡಿದ್ದರಾ ಅಥವಾ ಸಿನಿಮಾದ ಸಂಭಾವನೆಯನ್ನೇನಾದ್ರೂ ಕೊಡಬೇಕಾಗಿತ್ತಾ ಎಂಬುದರ ಬಗ್ಗೆ ಕ್ಲಾರಿಟಿ ಕೊಟ್ಟಿಲ್ಲ. ಆದರೆ ಚೆಕ್ ಬೌನ್ಸ್ ವಿಚಾರದಲ್ಲಿ ಎಂ.ಎನ್.ಕುಮಾರ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎಂಎನ್ ಕುಮಾರ್ ಅವರೆಂದರೆ ನೆನೆಪಾಗುವುದು ಕಳೆದ ವರ್ಷ ನಡೆಸಿದ ಧರಣಿ. ಕುಚ್ಚ ಸುದೀಪ್ ವಿಚಾರಕ್ಕೆ ದೊಡ್ಡ ಧರಣಿಯನ್ನೇ ನಡೆಸಿದ್ದರು. ಸುದೀಒ್ ಅವರು ಅಡ್ವಾನ್ಸ್ ಹಣ ಪಡೆದು, ಸಿನಿಮಾಗೆ ಡೇಟ್ ಕೊಡ್ತಿಲ್ಲ ಎಂಬ ಆರೋಪ ಮಾಡಿದರು. ಫಿಲ್ಮ್ ಚೇಂಬರ್ ಮುಂದೆಯೂ ಧರಣಿ ಮಾಡಿದ್ದರು. ಈ ಸುದ್ದಿ ಬಹಳ ದೊಡ್ಡಮಟ್ಟಕ್ಕೆ ಹಬ್ಬಿತ್ತು. ಆ ಬಳಿಕ ನಟ ಸುದೀಪ್ ಅವರು ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ವಿಚಾರಣೆ ಚಾಲ್ತಿಯಲ್ಲಿದೆ. ಈಗ ಎಂ.ಎನ್.ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


