Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆಯಲ್ಲಿ ಬೇಸಿಗೆ ಹೆಚ್ಚಳ, ಕಾಡ್ಗಿಚ್ಚು ಸಂಭವ : 1926 ಸಹಾಯವಾಣಿ

---Advertisement---

ದಾವಣಗೆರೆ ಮಾ.28 : ದಾವಣಗೆರೆ ಪ್ರಾದೇಶಿಕ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಕಂಡುಬಂದರೆ ಕೂಡಲೇ ಅರಣ್ಯ ಸಹಾಯವಾಣಿ 1926 ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ. ಅಜಾಗರೂಕತೆಯಿಂದ ಬೆಂಕಿಕಡ್ಡಿಗಳು, ಬೀಡಿ ಹಾಗೂ ಸಿಗರೇಟ್ ತುಂಡುಗಳು ಅರಣ್ಯ ಬೆಂಕಿಗೆ ಕಾರಣವಾಗಿ, ಪರಿಸರಕ್ಕೆ ಹಾನಿಯುಂಟು ಮಾಡಬಹುದು. ಇದರಿಂದ ನೈಸರ್ಗಿಕವಾದ ಅರಣ್ಯ ಸಂಪತ್ತಿಗೆ ಹಾನಿ ಮಾಡುವುದರೊಂದಿಗೆ ನೆಲೆಸಿರುವ ಪ್ರಾಣಿ-ಪಕ್ಷಿ, ಸಸ್ಯ ಸಂಕುಲಗಳ ನಾಶಕ್ಕೆ ಕಾರಣವಾಗುತ್ತದೆ.

 

ಸಹಾಯವಾಣಿ ಜೊತೆಗೆ ರತ್ನಾಕರ್ ಓಬಣ್ಣವರ-ವಲಯ ಅರಣ್ಯಾಧಿಕಾರಿ ಮೊ.ಸಂ.9986230824, ರಾಮಚಂದ್ರಪ್ಪ- ಉಪ ವಲಯ ಅರಣ್ಯಾಧಿಕಾರಿ, ಹೆಬ್ಬಾಳ್ ಶಾಖೆ ಮೊ.ಸಂ: 9513474666, ಹಸನ್ ಬಾಷಾ- ಉಪವಲಯ ಅರಣ್ಯಾಧಿಕಾರಿ, ಮಲೇಬೆನ್ನೂರು ಶಾಖೆ ಮೊ.ಸಂ: 8971081044, ಖಾಲೀದ್ ಮುಜ್ತಾಬಾ- ಉಪ ವಲಯ ಅರಣ್ಯಾಧಿಕಾರಿ, ಹರಿಹರ ಶಾಖೆ ಮೊ.ಸಂ:8105559874, ದಿನೇಶ್ ಕುಮಾರ್ ಕೆ.- ಉಪ ವಲಯ ಅರಣ್ಯಾಧಿಕಾರಿ, ದಾವಣಗೆರೆ ನಗರ ಶಾಖೆ ಮೊ.ಸಂ: 9535852070. ಕರೆಮಾಡಬೇಕೆಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಅಪಾಯಕಾರಿಯಾದ ಮರಗಳ ತೆರವು : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಳೆ ಗಾಳಿಗೆ ಮತ್ತು ಇತರೆ ನೈಸರ್ಗಿಕ ಕಾರಣಗಳಿಂದಾಗಿ ಕೆಲವೊಂದು ಮರಗಳು ಟೊಳ್ಳಾಗಿ, ಬಾಗಿ ಒಣಗಿ ಸಂಚಾರಕ್ಕೆ ಆಸ್ತಿಪಾಸ್ತಿಗೆ ಅಪಾಯಕಾರಿಯಾಗಿರುತ್ತದೆ.

ಇಂತಹ ಮರಗಳನ್ನು ಆದ್ಯತೆಯ ಮೇಲೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಇಂತಹ ಮರಗಳನ್ನು ಸಾರ್ವಜನಿಕರು ಗಮನಿಸಿದಾಗ ಅರಣ್ಯ ಇಲಾಖೆ ಅಥವಾ ಮಹಾನಗರಪಾಲಿಕೆಗೆ ಮಾಹಿತಿ ನೀಡಬೇಕೆಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment