Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಚ್ಚು ಸಿಕ್ಕಿಲ್ಲ.. ಸಂಕಷ್ಟ ತಪ್ಪಿಲ್ಲ ; ರಜತ್, ವಿನಯ್ ಬಗ್ಗೆ ಏನಿದೆ ಅಪ್ಡೇಟ್..?

---Advertisement---

ಬೆಂಗಳೂರು; ರಿಯಾಲಿಟಿ ಶೋನಲ್ಲಿ ಫೇಮಸ್ ಆಗಿದ್ದ ರಜತ್ ಹಾಗೂ ವಿನಯ್ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಲು ಹೋಗಿ ತಗಲಾಕಿಕೊಂಡಿದ್ದಾರೆ. ಕಳೆದ‌ ಕೆಲವು ದಿನಗಳಿಂದ ಪೊಲೀಸರ ವಶದಲ್ಲಿಯೇ ಇದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಇಬ್ಬರು ಪೊಲೀಸರಿಗೆ ಯಾಮಾರಿಸಿದ್ದಾರೆ. ರಿಯಲ್ ಮಚ್ಚನ್ನ ಕೊಡದೆ ಯಾಮಾರಿಸಿದ್ದು, ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಪ್ರತಿಕ್ರಿಯೆ ನೀಡಿದ್ದು, ರೀಲ್ಸ್ ಮಾಡಿದ್ದ ಒರಿಜಿನಲ್ ಮಚ್ಚನ್ನು ಈವರೆಗೂ ಹ್ಯಾಂಡವರ್ ಮಾಡಿಲ್ಲ. ಅಸಲಿ ಮಚ್ಚಿಗೂ, ಫೈಬರ್ ಮಚ್ಚಿಗೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲದೆ ಈವರೆಗೂ ಅಸಲಿ ಮಚ್ಚಿನ ಬಗ್ಗೆ ಮಾಹಿತಿ ನೀಡಿಲ್ಲ. ಪೊಲೀಸರ ದಿಕ್ಕನ್ನ ತಪ್ಪಿಸುವ ಪ್ರಯತ್ನವನ್ನು ಇಬ್ಬರು ಆರೋಪಿಗಳು ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ಸಹ ಪ್ರಕರಣ ದಾಖಲಿಸಲಾಗಿದೆ. ಸಂಜೆ ವೇಳೆಗೆ ಕಸ್ಟಡಿಗೆ ಬೇಕಾ..? ಬೇಡ್ವಾ ಅಂತ ತನಿಖಾಧಿಕಾರಿಗಳು ತೀರ್ಮಾನ ಮಾಡ್ತಾರೆ ಎಂಬ ಮಾಹಿತಿ ನೀಡಿದ್ದಾರೆ.

ವಿನಯ್ ಹಾಗೂ ರಜತ್ ಇಬ್ಬರು ಕೂಡ ಪೊಲೀಸರ ವಶದಲ್ಲಿಯೇ ಇದ್ದಾರೆ. ರೀಲ್ಸ್ ಮಾಡಿದ ಮಚ್ಚನ್ನೇ ಪೊಲೀಸರ ವಶಕ್ಕೆ ನೀಡಿದ್ದರೆ ಸಂಕಷ್ಟದಿಂದ ಪಾರಾಗುವ ಸಾಧ್ಯತೆ ಇತ್ತು. ಆದರೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರ ಪರಿಣಾಮ ಸ್ಟೇಷನ್ ನಲ್ಲಿ ಕೂರುವ ಪರಿಸ್ಥಿತಿ ಬಂದಿದೆ. ತನಿಖೆ ನಡೆಯುತ್ತಿದ್ದು, ಇಷ್ಟು ದಿನಗಳಾದರೂ ಒರಿಜಿನಲ್ ಮಚ್ಚು ಸಿಗದೆ ಇರುವುದೇ ಆಶ್ಚರ್ಯವಾಗಿದೆ. ಶೂಟ್ ಮಾಡಿದ ಮೇಲೆ ಆ ಮಚ್ಚನ್ನ ಏನು ಮಾಡಿದರು ಎಂಬ ಪ್ರಶ್ನೆ ಎದುರಾಗಿದೆ. ಒಂದು ವೇಳೆ ಈಗ ಒರಿಜಿನಲ್ ಮಚ್ಚು ಕೊಟ್ಟರು ಅದು ಕೂಡ ಅಪರಾಧವಾಗಲಿದೆ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದು ನಿಜವಾಗುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment