ದಾವಣಗೆರೆ; ಜಿಲ್ಲೆಯಲ್ಲಿ ಮೆಕ್ಕೆಜೋಳ, ಭತ್ತ ಪ್ರಮುಖ ಬೆಳೆಯಾಗಿದ್ದರು ಸಹ ಅಡಿಕೆ ಬೆಳೆಗಾರರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ದಾವಣಗೆರೆಯ ಸುತ್ತಮುತ್ತಲಿನ ಚನ್ನಗಿರಿ, ಹೊನ್ನಾಳಿಯಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಇದೀಗ ಒಂದು ಕ್ವಿಂಟಾಲ್ ಅಡಿಕೆ ಬೆಳೆಯ ಗರಿಷ್ಠ ದರ 52,299 ರೂಪಾಯಿ ಇದೆ.

ಚನ್ನಗಿರಿ ರಾಶು ಅಡಿಕೆ ಧಾರಣೆ ಗರಿಷ್ಠ ದರ 52,299 ರೂಪಾಯಿ ಇದೆ. ಗರಿಷ್ಠ ದರ 35,012 ರೂಪಾಯಿ ಇದ್ದು ಸರಾಸರಿ ಬೆಲೆ 48,087 ರೂಪಾಯಿ ಇದೆ. ಬೆಟ್ಟೆ ಅಡಿಕೆ ಗರಿಷ್ಠ ದರ 24,229 ರೂಪಾಯಿ ಇದೆ. ಕನಿಷ್ಠ ದರ 23,387 ರೂಪಾಯಿ ಇದೆ. ಸರಾಸರಿ ದರ 24,308 ರೂಪಾಯಿ ಇದೆ. ಜನವರಿಯಲ್ಲಿ 52 ಸಾವಿರಕ್ಕಿಂತ ಕಡಿಮೆ ಇದ್ದ ಬೆಲೆ ಫೆಬ್ರವರಿಯಲ್ಲಿ 53 ಸಾವಿರಕ್ಕೆ ಏರಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದ ಬೆಲೆ ಮತ್ತೆ 52 ಸಾವಿರದ ಗಡಿ ದಾಟಿದೆ. ಆದರೆ ಕಳೆದ ವರ್ಷವೆಲ್ಲಾ 55 ಸಾವಿರದ ತನಕ ರೀಚ್ ಆಗಿತ್ತು. ಈ ವರ್ಷವೂ 55 ಸಾವಿರ ದಾಟುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನು ಬೇಸಿಗೆ ಕಾಲ ಆಗಿರೋದ್ರಿಂದ ಬಿಸಿಲ ಬೇಗೆ ಜಾಸ್ತಿ ಇದೆ. ಹೀಗಾಗಿ ಅಡಿಕೆ ಗಿಡಗಳನ್ನ ಕಾಪಾಡಿಕೊಳ್ಳುವುದೇ ರೈತರಿಗೆ ಹರಸಾಹಸದ ಕೆಲಸವಾಗಿರುತ್ತದೆ. ಇನ್ನು ಚನ್ನಗಿರಿಗೆ ಅಡಿಕೆ ನಾಡು ಅಂತಾನೇ ಪ್ರಸಿದ್ಧಿಯಾಗಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದ ಕಾರಣ ಉತ್ತಮ ಫಸಲು ಕೂಡ ಬಂದಿತ್ತು. ಈ ಬಾರಿಯೂ ಮಳೆ ಚೆನ್ನಾಗಿ ಬರುವ ನಿರೀಕ್ಷೆ ಇದೆ. ಮಳೆ ಚೆನ್ನಾಗಿದ್ದರೆ ಫಸಲು ಕೂಡ ಉತ್ತಮವಾಗಿಯೇ ಬರಲಿದೆ. ಇದೇ ನಿರೀಕ್ಷೆಯಲ್ಲಿ ರೈತರು ಕೂಡ ಇದ್ದಾರೆ.

