ದಾವಣಗೆರೆ; ಹೊನ್ನಾಳಿಯ ರೇಣುಕಾಚಾರ್ಯ ಅವರು ಮತ್ತೊಮ್ಮೆ ಯತ್ನಾಳ್ ವಿರುದ್ದ ಹರಿಹಾಯ್ದಿದ್ದಾರೆ. ಬಲಿಪಶು ಮಾಡ್ತಾರೆ, ಬಲಿಪಶು ಆಗೋದು ಬೇಡ, ಕೇಂದ್ರ ಸಚಿವರಾಗಿದ್ದಂತವರು ಅನ್ನೋದು ನನ್ನ ವಿನಂತಿ. ಯತ್ನಾಳ್ ಗೆ ನಾವೇನು ಶತ್ರುಗಳಲ್ಲ ಎಂದಿದ್ದಾರೆ.
ಇದೆ ವೇಳೆ ಜಾತಿ ಪ್ರಮಾಣ ಪತ್ರದ ಬಗ್ಗೆ ಮಾತನಾಡಿದ್ದು, ನಾನೇನಾದ್ರೂ ಬೇರೆ ಸಮುದಾಯದ ಜಂಗಮದ ಸರ್ಟಿಫಿಕೇಟ್ ತೆಗೆದುಕೊಂಡಿದ್ದರೆ, ನಾನು ಮಾಧ್ಯಮದವರ ಮುಂದೆ ಹೇಳ್ತೀನಿ……. ಅದನ್ನೇ ಅಸೆಂಬ್ಲಿ ಒಳಗೆ ಹೇಳುತ್ತೀನಿ. ನನ್ನ ಜಾತಿ ಕಾಲಂನಲ್ಲಿ ಹಿಂದೂ ಲಿಂಗಾಯತ್ ಅಂತ ನಮ್ಮ ತಂದೆ ತಾಯಿ ಬರೆಸಿದ್ದರು. ವೀರಶೈವ ಲಿಂಗಾಯತ ಅಂತ ಬರೆಸಿದ್ದೀನಿ. ಆ ದಾಖಲೆಯನ್ನ 16ನೇ ತಾರೀಖು ರಿಲೀಸ್ ಮಾಡ್ತೇನೆ. ನಾನು ಯಾವುದೇ ಕಾರಣಕ್ಕೂ ಜಾತಿ ಸರ್ಟಿಫಿಕೇಟ್ ತೆಗೆದುಕೊಂಡಿಲ್ಲ. ಅವತ್ತು ಇದೇ ಸಿದ್ದರಾಮಯ್ಯನವರು, ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರು ಬೇರೆ ಜಂಗಮ, ಅದ್ಯಾರೋ ಚೇತನ್ ಎಂಬ ವ್ಯಕ್ತಿಗೆ 25 ಲಕ್ಷ ಕೊಟ್ಟಿದ್ದಾರೆ. ಅದು ನಂಗೆ ಗೊತ್ತಿಲ್ಲ.
ಆದ್ರೆ ಕಾಂಗ್ರೆಸ್ನ ಒಬ್ಬ ಮುಖ್ಯಸ್ಥ ಮೈಸೂರಿನಲ್ಲಿ ಪ್ರೆಸ್ ಮೀಟ್ ಮಾಡಿದ್ದಾರೆ. ರೇಣುಕಾಚಾರ್ಯ ಮಗಳಿಗೆ 25 ಲಕ್ಷ ಹಣ ತೆಗೆದುಕೊಂಡಿದ್ದಾರೆ ಸರ್ಟಿಫಿಕೇಟ್ಗೆ ಅಂತ. ನಾನು ಅಂದು ಹೇಳಿದ್ದೆ, ಚೇತನಾ ಅಂದ್ರೆ ಹುಡುಗ. ವಿದ್ಯಾರ್ಥಿಗೆ ತೆಗೆದುಕೊಂಡಿರೋದು. ನನ್ನ ಮಗಳಿಗೆ ಅದನ್ನ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಯಾರು ನಮ್ಮ ಸಮುದಾಯದ ಬಡವರಿದ್ದಾರಲ್ಲ, ಬರೀ ಜಂಗಮ ಅಂತಲ್ಲ. ಇಡೀ ವೀರಶೈವ ಸಮುದಾಯದಿಂದ ಬಡವರಿಗೆ ಮೀಸಲಾತಿ ಸಿಗಬೇಕು ಎಂಬುದೇ ನಮ್ಮ ಉದ್ದೇಶ. ನನ್ನ ಜಾತಿಯನ್ನ ವೀರಶೈವ ಲಿಂಗಾಯತ ಅಂತ ಬರೆಸಿದ್ದೀನಿ. ಅದರ ದಾಖಲೆಗಳನ್ನ 16ನೇ ತಾರೀಖು ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












