ಹಾಸನ; ಜೀವನ ನಡೆಸಲೆಂದು ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು, ಅದರಿಂದ ಬಂದ ಹಣದಿಂದ ತಮ್ಮ ಜೀವನವನ್ನ ನಡೆಸುತ್ತಿದ್ದರು ಆದರೆ ಆ ಬದುಕೆ ಇಂದು ಅಂತ್ಯವಾಗಿದೆ. ಹಾಸನದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ದೊಡ್ಡ ದುರಂತ ನಡೆದಿದ್ದು, ಎಂದಿನಂತೆ ವ್ಯಾಪಾರ ಮಾಡುತ್ತಿದ್ದವರು ದುರಂತ ಅಂತ್ಯ ಕಂಡಿದ್ದಾರೆ. ಇಂದು ಕೂಡ ತಮ್ಮ ವ್ಯಾಪಾರ ಮಾಡಲು ಐಟಂ ತಂದು ಕೂತಿದ್ದರು. ಇದೇ ವೇಳೆ ಕಟ್ಟಡ ಕುಸಿದಿದೆ. ಇದರಿಂದ ಬದುಕೇ ಅಂತ್ಯವಾಗಿದೆ. ಕಟ್ಟಡ ಕುಸಿದು ನಾಲ್ಕು ಜನ ಸಾವನ್ನಪ್ಪಿದ್ದು, ಇನ್ನು ಹಲವರು ಸಿಲುಕಿರುವ ಅನುಮಾನ ವ್ಯಕ್ತವಾಗಿದೆ. ಮೃತರಾದವರಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರಾಗಿದ್ದಾರೆ.

ಕಟ್ಟಡ ಅವಶೇಷಗಳಡಿ ಇನ್ನು ಹಲವರು ಸಿಲುಕಿರುವ ಶಂಕೆ ವ್ಯಕ್ಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಕೂಡ ಬರದಿಂದ ಸಾಗುತ್ತಿದೆ. ಅವಶೇಷಗಳಡಿಯಲ್ಲಿ ಯಾರಾದ್ರೂ ಸಿಲುಕಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದ್ದು, ಹುಡುಕಾಟ ಶುರುವಾಗಿದೆ.

