Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿಎಂ ಸಿದ್ದರಾಮಯ್ಯರಿಗೆ ಕ್ಲೀನ್ ಚಿಟ್ : ಡಿಸಿಎಂ ಡಿಕೆಶಿ ಫಸ್ಟ್ ರಿಯಾಕ್ಷನ್

---Advertisement---

ಬೆಂaಗಳೂರು; ಮೂಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಧರ್ಮಪತ್ನಿಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಪ್ರಾರಂಭದಲ್ಲಿಯೇ ಅಂದ್ರೆ ಅವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದಾಗ ಬಿಜೆಪಿ ಹಾಗೂ ಜನತಾ ದಳದವರು ಅವತ್ತೆ ಏನು ಹೇಳಬೇಕೋ ಎಲ್ಲವನ್ನು ಹೇಳಿದ್ದೀನಿ. ಇದು ರಾಜಕೀಯ ಪ್ರೇರಿತ ಅಂತ. ಅವರದ್ದು ಯಾವುದೇ ಸಿಗ್ನೇಚರ್ ಇಲ್ಲದೆ ಹೋದಾಗ, ಅವರಿಗೆ ಯಾವುದೇ ಸಂಬಂಧ ಇಲ್ಲದೆ ಹೋದಾಗ, ಪ್ರಾಪರ್ಟಿ ಮಾಲೀಕರು ಕ್ಲೈಮ್ ಕೇಳ್ತಾರೆ ಅವರು ಕೊಟ್ಟಿದ್ದಾರೆ. ಇಂಥದ್ದೇ ಜಾಗದಲ್ಲಿ ಕೊಡಬೇಕು ಅಂತ ಏನಾದ್ರೂ ಇದೆಯಾ. ಆದರೂ ರಾಜಕೀಯ ಹಿತ ದೃಷ್ಟಿಯಿಂದ ಬೇಡ ಇದು ಅಂತೇಳಿ ವಾಪಾಸ್ ಮಾಡಿದ್ದಾರೆ.

ಯಾವುದಾದರೂ ಕೇಸ್ ಆಗ್ಬೇಕು ಅಂದ್ರೆ ಏನಾದರೂ ಸಾಕ್ಷಿ ಇರಬೇಕು. ಏನಿದೆ ಸಾಕ್ಷಿ. ಯಾವ ಎವಿಡೆನ್ಸ್ ಕೂಡ ಇಲ್ಲ ಇಲ್ಲಿ. ಲೋಕಾಯುಕ್ತ ಅವರ ಡ್ಯೂಟಿ ಅವರು ಮಾಡಿದ್ದಾರೆ. ಏನಾದ್ರೂ ಇದ್ದರೆ ಅವರು ಫೈಟ್ ಮಾಡಿಕೊಳ್ಳಲಿ. ನಮ್ಗೇನು ಗೊತ್ತಿಲ್ವಾ ದೆಹಲಿಯಿಂದೆಲ್ಲಾ ಕರೆಸೋದು. ಇದು ಫ್ಯೂರ್ಲಿ ಬಿಜೆಪಿ ಹಾಗೂ ಜನತಾ ದಳದ ಪೊಲಿಟಿಕಲ್ ಪ್ಲ್ಯಾನ್. ಹೀಗಾಗಿ ಇದೆಲ್ಲಾ ಜಾಸ್ತಿ ದಿನ ನಡೆಯಲ್ಲ ಅಷ್ಟೇ.

ಸರ್ಕಾರದ ತಾಳಕ್ಕೆ ಕುಣಿತಾ ಇದೆ ಲೋಕಾಯುಕ್ತ. ಅದಕ್ಕೆ ಬಿ ರಿಪೋರ್ಟ್ ಸಲ್ಲಿಕೆಯಾಗ್ತಾ ಇದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಹೈಕೋರ್ಟ್ ಈಗಾಗಲೇ ಹೇಳಿದೆ. ಸುಪ್ರೀಂ ಕೋರ್ಟ್ ಜಡ್ಜ್ ಮೆಂಟ್ ಇದೆ.. ಹೈಕೋರ್ಟ್ ಇಂಡಿಪೆಂಡೆಂಟ್ ಬಾಡಿ ಅಂತ ಹೇಳಿದೆ. ನಾನು ಚೀಫ್ ಮಿನಿಸ್ಟರ್ ಇರಬಹುದು, ಇನ್ನೊಬ್ಬರು ಚೀಫ್ ಮಿನಿಸ್ಟರ್ ಆಗಬಹುದು, ಬೊಮ್ಮಾಯಿ ಚೀಫ್ ಮಿನಿಸ್ಟರ್ ಇರಬಹುದು. ಹಂಗಾದ್ರೆ ಪ್ರತಿಯಿಂದು ಕೇಸನ್ನು ಮುಖ್ಯಮಂತ್ರಿಗಳು ಹೇಳಿದಂತೆ ಪೊಲೀಸರು ಕೇಳ್ತಾರಾ..? ಇಟ್ ಈಸ್ ನಾಟ್ ಪೊಲೀಸ್. ಅದು ಲೋಕಾಯುಕ್ತ ಎಂದು ತಿರುಗೇಟು ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...